Cini NewsKollywood

ಡೆವಿಲ್ ಆದ ಧನುಷ್, “ಕ್ಯಾಪ್ಟನ್ ಮಿಲ್ಲರ್“ ಟ್ರೇಲರ್ ರಿಲೀಸ್

Spread the love

ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಕ್ಯಾಪ್ಟನ್ ಮಿಲ್ಲರ್ ಟ್ರೇಲರ್.. ಅರುಣ್ ಮಾಥೇಶ್ವರನ್ ನಿರ್ದೇಶನ ಈ ಚಿತ್ರದ ಹೈವೋಲ್ಟೇಜ್‌ ಮಾಸ್‌ ಪ್ಯಾಕೇಜ್‌ ಟ್ರೇಲರ್‌ ಅನಾವರಣಗೊಂಡಿದೆ. ಬ್ರಿಟೀಷ್ ಕಾಲದಲ್ಲಿ ನಡೆಯುವ ಕತೆ ಇದಾಗಿದ್ದು, ತನ್ನ ಗ್ರಾಮವನ್ನು ಕಬಳಿಸಲು ಬರುವ ಬ್ರಿಟೀಷ್‌ ಆಡಳಿತದ ಸೈನಿಕರು ಹಾಗೂ ಅಧಿಕಾರಿಗಳನ್ನು ಸಂಹಾರಿಸುವ ಲುಕ್‌ ನಲ್ಲಿ ಧನುಷ್‌ ಕಾಣಿಸಿಕೊಂಡಿದ್ದು, ʼಡೆವಿಲ್‌ʼ ಲುಕ್‌ ನಲ್ಲಿ ಗನ್‌ ಹಿಡಿದು ಟ್ರೇಲರ್‌ ನಲ್ಲಿ ಅಬ್ಬರಿಸಿದ್ದಾರೆ.

ಇಡೀ ಟ್ರೇಲರ್‌ ನಲ್ಲಿ ಗ್ರಾಮಕ್ಕಾಗಿ ಹೋರಾಡುವ ಜನ ಹಾಗೂ ಅವರ ಅಸಹಾಯಕತೆಯನ್ನು ತೋರಿಸಲಾಗಿದ್ದು, ತನ್ನತನವನ್ನು ಉಳಿಸಲು ಯಾವ ಹಂತವನ್ನು ಬೇಕಾದರೂ ಹೋಗಿ ಹೋರಾಡಬಲ್ಲೆ ಎನ್ನುವ ಅಂಶವನ್ನು ತೋರಿಸಲಾಗಿದೆ. ಶಿವರಾಜ್‌ ಅವರ ಸಣ್ಣ ಝಲಕ್‌ ನ್ನು ತೋರಿಸಲಾಗಿದೆ. ರಕ್ತಸಿಕ್ತ ಅಧ್ಯಾಯದ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾದ ಟ್ರೇಲರ್ ಭರಪೂರ ಆಕ್ಷನ್ ಗಳಿಂದ ಕೂಡಿಸಿದೆ.

ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್ ಪ್ರಿಯಾಂಕಾ ಅರುಲ್ ಮೋಹನ್, ಶಿವ ರಾಜ್‌ಕುಮಾರ್, ಕಿಶನ್, ಜಾನ್ ಕೊಕ್ಕೆನ್ ಮತ್ತು ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಜ.12 ರಂದು ಸಿನಿಮಾ ತೆರೆ ಕಾಣಲಿದೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಸತ್ಯ ಜ್ಯೋತಿ ಫಿಲಮ್ಸ್ ಚಿತ್ರ ನಿರ್ಮಾಣ ಮಾಡಿದ್ದಾರೆ

Visited 1 times, 1 visit(s) today
error: Content is protected !!