Cini NewsSandalwood

“ಅವನಿರಬೇಕಿತ್ತು” ಚಿತ್ರದ ‘ಅಂದಕಾಲತ್ತಿಲ್ಲೆ’’.. ಹಾಡು ರಿಲೀಸ್ ಮಾಡಿದ ರೊರಿಂಗ್ ಸ್ಟಾರ್ ಶ್ರೀಮುರಳಿ.

Spread the love

ಟೈಟಲ್ ನಲ್ಲೆ ಗಮನ ಸೆಳೆದಿದ್ದ “ಅವನಿರಬೇಕಿತ್ತು” ಚಿತ್ರ ಈಗ ಬಿಡುಗಡೆಗೆ ಸಿದ್ದವಾಗಿದ್ದು. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಯವರು ಅಂದಕಾಲತ್ತಿಲ್ಲೆ ಅನ್ನೋ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್  ಹಾಡನ್ನ  ನೋಡಿ ಕೊಂಡಾಡಿದ್ದಾರೆ. ಜೊತೆಗೆ ಇದೊಂದು ಟ್ರೆಂಡ್ ಸೆಟ್ ಮಾಡುತ್ತೆ ನಂಬಿ ಅಂತ ಭವಿಷ್ಯ ನುಡಿದಿದ್ದಾರೆ.

 

ಅಂದಕಾಲತ್ತಿಲ್ಲೆ ಹೊಸತನದ ಸಾಹಿತ್ಯವಿದೆ. ಈಗಾಗಲೆ ಕೇಳುಗರಿಂದ ಸೈ ಎನಿಸಿಕೊಂಡು ಹಾಡು   ಸೋಶಿಯಲ್ ಮಿಡಿಯಾದಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಿದ್ದೆ.
ಹಳೆಗನ್ನಡ ಹಾಗೂ ಹೊಸಗನ್ನಡ ಎರಡನ್ನೂ ಹದಗೊಳಿಸಿ ಉತ್ತಮವಾಗಿ ಸಾಹಿತ್ಯ ಬರೆದಿದ್ದಾರೆ ನಿರ್ದೇಶಕ ಅಶೋಕ್‌ ಸಾಮ್ರಾಟ್. ಹಾಡಿನ ಮೆಕ್ ಓವರ್ ಉತ್ತಮವಾಗಿದ್ದು, ಜನಕಾರ್ ಸಂಸ್ಥೆ ಆಡಿಯೊ ಹಕ್ಕನ್ನು ಪಡೆದಿದೆ. ನೋವಿಕಾ ಸಿನಿ ಕ್ರೀಯೆಶನ್ ನಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ಅಶೋಕ್ ಸಾಮ್ರಾಟ್ ಅವರ ಚೊಚ್ಚಲ ನಿರ್ದೇಶನದ ಜೊತೆಗೆ ಸಾಹಿತ್ಯವೂ ಇದೆ.

ವಿಜಯ ಪ್ರಕಾಶ್ ದ್ವನಿಯಾಗಿರುವ ಈ “ಅಂದಾಕಾಲತಲ್” ಹಾಡನ್ನು ಸಂಗೀತ ಸಂಯೋಜಿಸದವರು ಲೋಕಿ ತವಸ್ಯ. ಅಂದಹಾಗೆ ದೇವರಾಜ್ ಪೂಜಾರಿ , ಪೃಥ್ವಿ ಮಾಲೂರ್ ಛಾಯಾಗ್ರಹಣವಿರುವ  ಈ ಚಿತ್ರಕ್ಕೆ ಬಂಡವಾಳ ಹೂಡಿದವರು ನವ ನಿರ್ಮಾಪಕ  ಮುರಳಿ ಬಿ.ಟಿ.

ತಾರಾಗಣದಲ್ಲಿ ಸೌಮ್ಯ ಜಾನ್ ,ಜೈ ಸಿಂಹ, ಪ್ರಶಾಂತ್ ಸಿದ್ದಿ, ಕಿರಣ್ ನಾಯ್ಕ್,  ಭರತ್ ,ಲಕ್ಷ್ಮೀ ದೇವಮ್ಮ, ಮಂಜುನಾಥ್,  ಮುಂತಾದವರಿದ್ದು. ಹಾಡನ್ನು ಜನಕಾರ್ ಯೂ ಟ್ಯೂಬ್ ಚಾನಲ್ ನಲ್ಲಿ ನೋಡಲು ಲಭ್ಯವಿದೆ.

Visited 1 times, 1 visit(s) today
error: Content is protected !!