Cini NewsTollywood

ಬಾಲಯ್ಯ ಜನ್ಮದಿನಕ್ಕೆ ʼಅಖಂಡ-2ʼ ಟೀಸರ್‌ ರಿಲೀಸ್‌

Spread the love

ಗಾಡ್ ಆಫ್ ಮಾಸ್ ನಂದಮೂರಿ ಬಾಲಕೃಷ್ಣ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಯ್ಯ ಜನ್ಮದಿನಕ್ಕೆ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಅಖಂಡ-2 ಟೀಸರ್‌ ಬಿಡುಗಡೆ ಮಾಡಲಾಗಿದೆ. ನಂದಿ ಮುಖ ಇರುವ ತ್ರಿಶೂಲ ಹಿಡಿದು ಮಾಸ್‌ ಅವತಾರದಲ್ಲಿ ಬಾಲಯ್ಯ ಎಂಟ್ರಿ ಕೊಟ್ಟಿದ್ದಾರೆ.

ಹಿಮದಿಂದ ಆವೃತವಾದ ಕೈಲಾಸಂ, ಭರ್ಜರಿ ಆಕ್ಷನ್ಸ್, ಎಸ್‌ ಥಮನ್‌ ಮ್ಯೂಸಿಕ್‌ ಅಖಂಡ-2 ಟೀಸರ್‌ ಹೈಲೆಟ್ಸ್.‌ ಸಾಧು ಗೆಟಪ್‌ ನಲ್ಲಿ ಎಂಟ್ರಿ ಕೊಡುವ ಬಾಲಯ್ಯ ದುಷ್ಟರನ್ನು ಸಂಹಾರ ಮಾಡುವ ರೀತಿ ಅಭಿಮಾನಿಗಳಿಗೆ ಸಖತ್‌ ಕಿಕ್‌ ಕೊಡುತ್ತದೆ.

ಬಾಲಕೃಷ್ಣ ನಟನೆಯ ‘ಅಖಂಡ’ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಬಾಲಯ್ಯ ಅಘೋರಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅದೇ ಸಿನಿಮಾದ ಎರಡನೇ ಭಾಗವೇ ಅಖಂಡ 2. ‘ಅಖಂಡ’ ಸಿನಿಮಾ ನಿರ್ದೇಶನ ಮಾಡಿದ್ದ ಬೊಯಪಾಟಿ ಶ್ರೀನು ಅವರೇ ‘ಅಖಂಡ 2’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ‘ಅಖಂಡ 2’ ಸಿನಿಮಾದಲ್ಲಿಯೂ ಬಾಲಕೃಷ್ಣ ದ್ವಿಪಾತ್ರದಲ್ಲಿ ಎನ್ನಲಾಗುತ್ತಿದೆ.

ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್​ನ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ ಬಂದಿದ್ದ ‘ಸಿಂಹ’, ‘ಲಿಜೆಂಡ್’ ಹಾಗೂ 2021 ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ ‘ಅಖಂಡ 2’ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಪ್ರತಿಷ್ಠಿತ 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ನಿರ್ಮಿಸಿರುವ ಈ ಚಿತ್ರವನ್ನು ಎಂ ತೇಜಸ್ವಿನಿ ನಂದಮೂರಿ ಪ್ರಸ್ತುತಪಡಿಸಿದ್ದಾರೆ.

ಅಖಂಡ 2 ಸಿನಿಮಾದ ಚಿತ್ರೀಕರಣ ಸದ್ಯ ಜಾರ್ಜಿಯಾದ ಗ್ರ್ಯಾಂಡ್ ಲೊಕೇಲ್ಸ್‌ನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 25ರಂದು ದಸರಾ ವಿಶೇಷ ದಿನವಾಗಿ ಚಿತ್ರ ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ಬಿಡುಗಡೆಯಾಗಲಿದೆ. ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದು, ಆದಿ ಪಿನಿಸೆಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಹೈಬಜೆಟ್‌ ನಲ್ಲಿ ನಿರ್ಮಾಣವಾಗುತ್ತಿರುವ ಅಖಂಡ-2 ಸಿನಿಮಾಗೆ ಎಸ್‌ ಥಮನ್‌ ಸಂಗೀತ ನಿರ್ದೇಶನ, ಸಿ ರಾಮಪ್ರಸಾದ್, ಸಂತೋಷ್ ಡಿ ಡೆಟಕೆ ಛಾಯಾಗ್ರಹಣ, ಎ ಎಸ್ ಪ್ರಕಾಶ್‌ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್ ಫೈಟ್‌ ಚಿತ್ರಕ್ಕಿರಲಿದೆ.

Visited 1 times, 1 visit(s) today
error: Content is protected !!