” ಧರ್ಮಂ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ, ನಿರ್ದೇಶ , ತರುಣ್ ಕಿಶೋರ್ ಸುಧೀರ್
“ಜಾತಿಯಲ್ಲಿ ಹಿಂದುಳಿಯುದಲ್ಲ.. ಜೀವನದಲ್ಲಿ ಮುಂದೆ ಬರದಂತೆ ನೋಡಿಕೊಳ್ಳಬೇಕು.. ಇಲ್ಲಿ ನ್ಯಾಯ ನೀತಿ ಧರ್ಮಕ್ಕೆ ಬೆಲೆ ಇಲ್ಲ…” ಅವ್ನಾ ಉಸಿರಾಡೋಕೆ ಬಿಟ್ಟರೆ ನಮಗೇ ತೊಂದರೆ..” ಧರ್ಮ ಉಳಿಬೇಕಂದ್ರೆ ..ನಿನ್ನ ಜಾತಿ ಸಾಯಬೇಕು..”
ಹಳ್ಳಿಯ ಹಿನ್ನೆಲೆಯಲ್ಲಿ ರಗಡ್ ಲುಕ್ ನಲ್ಲಿರುವ ” ಧರ್ಮಂ ” ಚಿತ್ರದ ಖಡಕ್ ಸಂಭಾಷಣೆ ಇರುವ ಟ್ರೈಲರ್ ನಲ್ಲಿ ಶೋಷಣೆ ,ದಬ್ಬಾಳಿಕೆ, ಸೇರಿದಂತೆ ಆಕ್ಷನ್ ಸನ್ನಿವೇಶ ಹದಗೊಳಿಸಿ ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದ್ದು ಡಿಸೆಂಬರ್ 5 ರಂದು ಚಿತ್ರ ತೆರೆಗೆ ಬರಲಿದ್ದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.
“ಧರ್ಮಂ ” ಚಿತ್ರದ ಟ್ರೈಲರ್ ಅನ್ನು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ವೇಳೆ ಚಿತ್ರದ ಹಾಡುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮಾತನಾಡಿ ಪವರ್ ಫುಲ್ ಶೀರ್ಷಿಕೆ , ಡುಯೆಟ್ ಹಾಡು ನೋಡಿ ಚಿತ್ರದ ಬಗ್ಗೆ ಆಕರ್ಷಿತನಾಗಿದ್ದೆ. ಚಿತ್ರದ ಛಾಯಾಗ್ರಾಹಕನಿಗೆ ಒಳ್ಳೆಯ ಭವಿಷ್ಯವಿದೆ. ಟ್ರೈಲರ್ ನೋಡಿದಾಗಲೇ ಚಿತ್ರವನ್ನು ಹಿಡಿದು ಕೂಡಿಸಲಿದೆ. 80ರ ದಶಕದ ಚಿತ್ರವನ್ನು ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದೀರಿ.. ಚಿತ್ರಕ್ಕೆ ನೀವೂ ಒಬ್ಬ ನಾಯಕ. ನಾಯಕಿ ವಿರಾಣಿಕ ಶೆಟ್ಟಿ ಮತ್ತು ನಾಯಕ ಸಾಯಿ ಶಶಿಕುಮಾರ್ ಉತ್ತಮವಾಗಿ ನಟಿಸಿದ್ದಾರೆ. ಧರ್ಮಂ ಚಿತ್ರದ ವಿಷಯವನ್ನು ಯಾವುದೇ ಪೂರ್ವಾಗ್ರಹ ಪೀಡಿತವಿಲ್ಲದೆ ಚಿತ್ರವನ್ನು ತೆರೆಗೆ ಕಟ್ಟಿಕೊಡಬೇಕು. ನಾವೂ ಕೂಡ ಕಾಟೇರ ಚಿತ್ರವನ್ನು ಇದೇ ರೀತಿ ಮಾಡಿದ್ದೆವು ಒಳ್ಳೆಯದಾಗಲಿ ಎಂದು ಹಾರೈಸಿದರು.
ಜನಕ್ಕೆ ಒಳ್ಳೆಯ ಸಿನಿಮಾ ಕೊಡಬೇಕು.. ಅವನಿಗೆ ನಂಬಿಕೆ ಬರುವ ಸಿನಿಮಾಕೊಟ್ಟರೆ ಚಿತ್ರಮಂದಿರಕ್ಕೆ ಬರುತ್ತಾರೆ. ಅದೇ ರೀತಿ ಧರ್ಮಂ ಚಿತ್ರ ನಿರ್ಮಾಪಕರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು
ನಿರ್ದೇಶಕ ನಾಗಮುಖ ಮಾತನಾಡಿ ತಂದೆ, ತಾಯಿ ಹಾಗು ನಿಕ್ ನೇಮ್ ಸೇರಿಸಿ ನಾಗಮುಖ ಅಂತ ಹೆಸರು ಇಟ್ಟುಕೊಂಡಿದ್ದೇನೆ. ನನ್ನ ಹೆಸರು ನಾಗರಾಜು. ಚಿತ್ರದಲ್ಲಿ ಜಾತಿ ಮತ್ತು ಹಿಂದು ಧರ್ಮದ ಹಿನ್ನೆಲೆಯಲ್ಲಿ ಚಿತ್ರ ಮಾಡಲಾಗಿದೆ. ಹಿಂದುತ್ವ ಉಳಿಬೇಕು ಎನ್ನುವುದು ನಮ್ಮ ಉದ್ದೇಶ .ಚಿತ್ರದ ಟ್ರೈಲರ್ ನಲ್ಲಿ ಕಠಿಣವಾದ ವಿಷಯವನ್ನು ತೆರೆಯ ಮೇಲೆ ತಂದಿದ್ದೇವೆ. ಈ ರೀತಿಯ ಕಥೆಗಳಿಗೆ ಪ್ರಮುಖ ವ್ಯಕ್ತಿಬೇಕಾಗಿತ್ತು ಹೀಗಾಗಿ ತರುಣ್ ಸುಧೀರ್ ಅವರ ಬಳಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ ಎಂದರು
ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ಮೇಲು ಕೀಳಿನಿಂದ ಧರ್ಮ ಹೇಗೆ ಸೊರಗುತ್ತಿದೆ. ಅದನ್ನು ಅಪವಿತ್ರ. ಮಾಡದೆ ಧರ್ಮ ಕಾಪಾಡಬೇಕು ಎನ್ನುವುದು ಚಿತ್ರದ ಉದ್ದೇಶ. ಇದೇ 27 ರಂದು ಹಾವೇರಿ ಮತ್ತು ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ನಾಯಕ ಸಾಯಿ ಶಶಿಕುಮಾರ್ ಮಾತನಾಡಿ ಚಿತ್ರದಲ್ಲಿ ಕರಿಮುತ್ತು ಎನ್ನುವ ಪಾತ್ರ ಮಾಡಿದ್ದೇನೆ. ಜೀವನದ ಪ್ರಮುಖ ಚಿತ್ರ. ಇಡೀ ತಂಡಕ್ಕೆ ಧನ್ಯವಾದ. ಡಿಸೆಂಬರ್ 5 ಕ್ಕೆ ಸಿನಿಮಾ ಬರ್ತಾ ಇದೆ ಸಿನಿಮಾ ನೋಡಿ ಬೆಂಬಲಿಸಿ ಎಂದು ಮನವಿ ಮಾಡಿದರು
ನಾಯಕಿ ವಿರಾಣಿಕ ಶೆಟ್ಟಿ ಮಾತನಾಡಿ ಚಿತ್ರದಲ್ಲಿ ನೀಲಾ ಎನ್ನುವ ಪಾತ್ರ ಮಾಡಿದ್ದೇನೆ. ಗಂಡಸರನ್ನು ಕಂಡರೆ ಕತ್ತೆತ್ತಿ ನೋಡದ ಹುಡುಗಿ ಪಾತ್ರ. ಆಡಿಷನ್ ನಲ್ಲಿ ಮೂರು ಪೇಜ್ ಡೈಲಾಗ್ ಅನ್ನು ಸಿಂಗಲ್ ಟೈಕ್ ಮಾಡಿದ್ದೆ ಆ ನಂತರ ನಿರ್ದೇಶಕರು ಆಯ್ಕೆ ಮಾಡಿದರು. ಈ ವರ್ಷ ಮೂರನೇ ಚಿತ್ರ ಬಿಡುಗಡೆ ಆಗುತ್ತಿದೆ. ದೊಡ್ಡ ದೊಡ್ಡ ನಿರ್ದೇಶಕರು ಚಿತ್ರದ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದು ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು
ನಿರ್ಮಾಪಕ ಡಾ. ಎಸ್ ಕೆ ರಾಮಕೃಷ್ಣ ಮಾತನಾಡಿ ಸಿನಿಮಾ ಬಗ್ಗೆ ಯಾವುದೇ ಅನುಭವ ಇರಲಿಲ್ಲ.ನಿರ್ದೇಶಕ ನಾಗಮುಖ ಸ್ನೇಹಿತರು. ಅವಕಾಶ ಸಿಗ್ತಾ ಇಲ್ಲ ಸಿನಿಮಾ ಮಾಡಬೇಕು ಎಂದರು. ಒದ್ದಾಟ ನೋಡಿ ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ಚಿತ್ರ ನೋಡಿದ ಮಂದಿಗೆ ಇಷ್ಟವಾಗಲಿದೆ. ಪ್ರೇಕ್ಷಕ ಕೊಡುವ ಕಾಸಿಗೆ ಚಿತ್ರ ಮೋಸ ಮಾಡುವುದಿಲ್ಲ. ಚಿತ್ರ ಇನ್ನಷ್ಟು ಸಿನಿಮಾ ಮಾಡಲು ಪ್ರೋತ್ಸಾಹ ನೀಡಿ ಎಂದರು
ಚಿತ್ರದ ನಾಯಕ, ನಾಯಕಿ ಸೇರಿದಂತೆ ಎಲ್ಲಾ ಕಲಾವಿದರು ಪ್ರೀತಿಯಿಂದ ಕೆಲಸ ಮಾಡಿದ್ದಾರೆ. ಇಡೀ ತಂಡ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಕಲಾವಿದ ಅಶೋಕ್ ಹೆಗ್ಡೆ ಮಾತನಾಡಿ ನಿರೀಕ್ಷೆಯ ಸಿನಿಮಾವನ್ನು ನಿರ್ದೇಶಕ ನಾಗಮುಖ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಚಿತ್ರಮಂದಿರಕ್ಕೆ ಬನ್ನಿ ಎಂದರು.
ಕಲಾವಿದ ಭೀಷ್ಮ ರಾಮಯ್ಯ ಮಾತನಾಡಿ ಧರ್ಮ ವನ್ನು ಕೊಲ್ಲಲು ಹುಟ್ಟಿರುವ ಚಿತ್ರದ ಅಧರ್ಮೀಯರಲ್ಲಿ ನಾನೂ ಒಬ್ಬ. ಈ ವರೆಗೆ 38 ಚಿತ್ರಗಳಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿ ವಿಭಿನ್ನತೆ ಕಾಣಲಿದೆ. ಹಾಡು ಟ್ರೈಲರ್ ಇಷ್ಟವಾಗಲಿದೆ. ರೋಷ ಆವೇಶ, ಆಕ್ರೋಶ ಮತ್ತು ತುಳಿತಕ್ಕೊಳಗಾದ ಜನರ ಸಿನಿಮಾ . ಕನ್ನಡಕ್ಕೆ ವಿಶೇಷವಾದ ಸಿನಿಮಾ ಆಗಲಿದೆ ಎಂದರು.
