Cini NewsSandalwood

“ಜಸ್ಟ್ ಪಾಸ್” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಿರ್ಮಾಪಕರ ತಾಯಿ

Spread the love

ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ “ಜಸ್ಟ್ ಪಾಸ್” ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ರೇಲರ್ ಬಿಡುಗಡೆ ಮಾಡಬೇಕಿತ್ತು.‌ ಕಾರಣಾಂತರದಿಂದ ಅವರು ಸಮಾರಂಭಕ್ಕೆ ಬಂದಿರಲಿಲ್ಲ . ಟ್ರೇಲರ್ ಅನ್ನು ನಿರ್ಮಾಪಕರ ತಾಯಿ ಶ್ರೀಮತಿ ಪ್ರೇಮ ಬಿಡುಗಡೆ ಮಾಡಿದರು. ಟ್ರೇಲರ್ ಕೂಡ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ನೋಡಿದವರು ಇದು “ಜಸ್ಟ್ ಪಾಸ್” ಚಿತ್ರದ ಫಸ್ಟ್ ಕ್ಲಾಸ್ ಟ್ರೇಲರ್ ಎನ್ನುತ್ತಿದ್ದಾರೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲೇ ಚಿತ್ರದ “ನೋಡಿದ ಕೂಡಲೆ” ಎಂಬ ಸುಮಧುರ ಹಾಡನ್ನು ಸಹ ಪ್ರದರ್ಶಿಸಲಾಯಿತು. ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಕೆ.ಎಂ.ರಘು, ಚಿತ್ರ ಇಷ್ಟು ಅದ್ದೂರಿಯಾಗಿ ಬರಲು ನಮ್ಮ ನಿರ್ಮಾಪಕ ಕೆ.ವಿ.ಶಶಿಧರ್ ಅವರು ಕಾರಣ. ಯಾವುದೇ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರಿಗೂ ನಾನು ಈ ಸಮಯದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.

ಟ್ರೇಲರ್ ನೋಡಿದ ಮೇಲೆ ಬಹಳ ಖುಷಿಯಾಯಿತು. ಚಿತ್ರ ಕೂಡ ಚೆನ್ನಾಗಿ ಬಂದಿದೆ. ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಕೆ.ವಿ.ಶಶಿಧರ್. ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ತುಂಬಾ ಚೆನ್ನಾಗಿದೆ. ಚಿತ್ರ ಇನ್ನೂ ಚೆನ್ನಾಗಿದೆ‌ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎನ್ನುತ್ತಾರೆ ನಾಯಕ ಶ್ರೀ. ನಾನು ಕೂಡ ಈ ಚಿತ್ರದಲ್ಲಿ “ಜಸ್ಟ್ ಪಾಸ್” ವಿದ್ಯಾರ್ಥಿ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಪ್ರಣತಿ ಹೇಳಿದರು.

ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಛಾಯಾಗ್ರಾಹಕ ಸುಜಯ್ ಕುಮಾರ್, ಹಾಡು ಬರೆದಿರುವ ಪ್ರಮೋದ್ ಮರವಂತೆ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರಾದ “ಜಸ್ಟ್ ಪಾಸ್” ಚಿತ್ರದ ಕುರಿತು ಮಾತನಾಡಿದರು.

Visited 1 times, 1 visit(s) today
error: Content is protected !!