15 ವರ್ಷಗಳ ಸುದೀರ್ಘ ಪಯಣ ನಟಿ ರಾಗಿಣಿ ದ್ವಿವೇದಿ
ಪಂಜಾಬ್ ಮೂಲದ ಮುದ್ದಾದ ಬೆಡಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಒಂದು ಚಾಪನ್ನ ಮೂಡಿಸಿಕೊಂಡು ಕನ್ನಡತಿಯಾಗಿ ಸಿನಿಮಾ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಕಾಲ ನಟಿಯಾಗಿ ಮಿಂಚಿ ಸಾಗುತ್ತಿರುವ ಪ್ರತಿಭಾನ್ವಿತ ನಟಿ ರಾಗಿಣಿ ದ್ವಿವೇದಿ. ಬರೀ ಸಿನಿಮಾ ಕ್ಷೇತ್ರ ಅಲ್ಲದೆ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತಾ , ಜನರಿಗೆ ಸ್ಪಂದಿಸುತ್ತಾ ಬದುಕು ನಡೆಸುತ್ತಿರುವ ಈ ನಟಿ ಬಹಳಷ್ಟು ಸೋಲು- ಗೆಲುವು, ಏಳು- ಬೀಳು, ನೋವು- ನಲಿವು ,ಅವಮಾನ – ಸನ್ಮಾನ, ಕನ್ನಡದ ಜೊತೆ ಜೊತೆಯಲ್ಲಿ ಪರಭಾಷೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಪ್ರತಿಭಾನ್ವಿತ ಈ ನಟಿ ಕನ್ನಡ ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರು. ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದ ನಟಿ ರಾಗಿಣಿ ದ್ವಿವೇದಿ ಸ್ಟಾರ್ ನಟರುಗಳು ಸೇರಿದಂತೆ ಹೊಸ ಪ್ರತಿಭೆಗಳ ಜೊತೆಗೂ ಅಭಿನಯಿಸಿದ್ದರು. ತಮ್ಮ ಈ ಸುಧೀರ್ಘ ಪಯಣದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಇತ್ತೀಚಿಗೆ ಮಾಧ್ಯಮದವರನ್ನು ಪ್ರೀತಿಯಿಂದ ಆಹ್ವಾನಿಸಿದರು.
ಬಣ್ಣದ ಬದುಕಿನಲ್ಲಿ ಹದಿನೈದು ವರ್ಷ ಪೂರ್ಣಗೊಳಿಸಿರುವ ಸಮಯದಲ್ಲಿ ಸಿನಿಮಾ ಪತ್ರಕರ್ತರ ಜೊತೆ ಮುಖಾಮುಖಿಯಾಗಿದ್ದ ರಾಗಿಣಿ ದ್ವಿವೇದಿ, ನಡೆದು ಬಂದ ಹಾದಿ ಹಿಂದಿರುಗಿ ನೋಡಿ ವೇದಿಕೆ ಮೇಲೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದರು. ಸಾವರಿಸಿಕೊಂಡು ಬದುಕಿನಲ್ಲಿ ಎದುರಿಸಿದ ಸಮಸ್ಯೆ, ಸವಾಲುಗಳು ಕಷ್ಡಕಾಲದಲ್ಲಿ ಜೊತೆಯಾದವರನ್ನು ನೆನಪು ಮಾಡಿಕೊಂಡರು. ಮಾಡಲಿಂಗ್ ಮಾಡುತ್ತಿದ್ದ ಪಂಜಾಬಿ ಬೆಡಗಿ ರಾಗಿಣಿ ದ್ವಿವೇದಿ ” ಹೋಳಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಕಿಚ್ಚ ಸುದೀಪ್ ನಟನೆಯ ” ವೀರ ಮದಕರಿ ” ಚಿತ್ರದಿಂದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದರು. ಬಿಡುಗಡೆಗೆ ಸಜ್ಜಾಗಿರುವ “ವೃಷಭ” ಚಿತ್ರದ ತನಕ ನಡೆದು ಬಂದ ಹಾದಿ ಮಲ್ಲಿಗೆಯ ಹಾದಿಯಾಗಿರಲಿಲ್ಲ ಬದಲಾಗಿ ಮುಳ್ಳಿನ ಹಾದಿಯಲ್ಲಿಯೂ ತಮ್ಮದೇ ಆದ ಹೆಕ್ಕೆ ಗುರುತು ಮೂಡಿಸಿದವರು.ನೋವು ಉಂಡು ನಲಿವು ಹಂಚಿಕೊಂಡೇ ತಾನೊಬ್ಬ ಗಟ್ಟಿ ಹೆಣ್ಣುಮಗಳು ಎನ್ನುವುದನ್ನು ನಿರೂಪಿಸಿದವರು.
ಈ ವೇಳೆ ಮಾತಿಗಿಳಿದ ನಟಿ ರಾಗಿಣಿ ದ್ವಿವೇದಿ, ಬೇರೆ ರಾಜ್ಯದಲ್ಲಿ ಹುಟ್ಡಿದ್ದರೂ ಕನ್ನಡ ಚಿತ್ರರಂಗ ಬದುಕು ನೀಡಿದೆ. ಹೀಗಾಗಿ ಜೀವನದ ಕೊನೆ ಗಳಿಗೆ ತನಕ ಕನ್ನಡ ನಾಡಿನ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾರೆ. ಪರಭಾಷೆಯಲ್ಲಿ ನಟಿಸುವಾಗ ನಾನೊಬ್ಬಳು ಕನ್ನಡದ ನಟಿ ಎಂದು ಗುರುತಿಸುತ್ತಾರೆ. ಪರಭಾಷೆಯಲ್ಲಿ ಸಿಗುವ ಗೌರವ ಮನ್ನಣೆ ಕನ್ನಡ ಚಿತ್ರರಂಗದಲ್ಲಿ ಸಿಗಲಿಲ್ಲ ಎಂದು ಬೇಸರದಿಂದಲೇ ನೋವು ತೋಡಿಕೊಂಡರು.
ಮಾಡೆಲಿಂಗ್ ಮಾಡಿಕೊಂಡಿದ್ದೆ. ಕನ್ನಡ ಚಿತ್ರರಂಗ ಇದೆ ಎನ್ನುವುದೇ ಗೊತ್ತಿರಲಿಲ್ಲ , ಆಗ ಸಿಕ್ಕದ್ದೇ ಹೋಳಿ ಚಿತ್ರ. ನಟಿಸಿದ ಮೊದಲ ಚಿತ್ರ. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರ ಜೊತೆ ವಯಕ್ತಿಕ ವಿಷಯಕ್ಕಾಗಿ ಜಗಳ ಮಾಡಿಕೊಂಡಿದ್ದೆ. ಅಲ್ಲಿಂದ ನನ್ನ ಪರಿಚಯ ಚಿತ್ರರಂಗಕ್ಕೆ ಗೊತ್ತಾಯಿತು . ಮೊದಲು ಬಿಡುಗಡೆಯಾದ ಸಿನಿಮಾ ಕಿಚ್ಚ ಸುದೀಪ್ ನಟನೆಯ ” ವೀರ ಮದಕರಿ “. ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಟ ಕಿಚ್ಚ ಸುದೀಪ್ ಅವರಿಂದ ಸಾಕಷ್ಟು ಕಲಿತೆ ಜೊತೆಗೆ ಚಿತ್ರರಂಗದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತು. ಆ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪರಭಾಷೆಗೂ ಹೋಗಿ ನಟಿಸಿದ್ದೇನೆ..ಎಲ್ಲೇ ನಟಿಸಿದರೂ ಕನ್ನಡವೇ ನನ್ನ ಮನೆ ಎಂದರು.
ಹದಿ ನೈದು ವರ್ಷಗಳ ಚಿತ್ರಜೀವನದಲ್ಲಿ ಶಿವಣ್ಣ, ಉಪೇಂದ್ರ, ಕಿಚ್ಚ ಸುದೀಪ್, ದುನಿಯಾ ವಿಜಯ್, ಯೋಗಿ,ಆದಿತ್ಯ, ದಿಗಂತ್, ಇತ್ತೀಚೆಗೆ ರಾಜವರ್ದನ್ ಸೇರಿದಂತೆ ಅನೇಕ ನಟರ ಜೊತೆ ಕೆಲಸ ಮಾಡಿದ್ದೇನೆ ಸಾಕಷ್ಟು ಕಲಿತಿದ್ದೇನೆ.ಜೊತೆ ಈ ಚಿತ್ರಗಳ ನಿರ್ದೇಶಕರಿಂದಲೂ ಕೂಡ.ಇಷ್ಟು ವರ್ಷದ ಸಿನಿಮಾ ಜರ್ನಿಯಲ್ಲಿ ಎಲ್ಲರ ಕೊಡುಗೆ ಸಹಕಾರ ದೊಡ್ಡದಿದೆ.
ಏಳು ಬೀಳು ಕಂಡಿದ್ದೇನೆ. ಹದಿನೈದು ವರ್ಷಗಳ ಚಿತ್ರಜೀವನದಲ್ಲಿ ಏಳು, ಬೀಳು, ಸೋಲು- ಗೆಲಿವು ,ಸಂಕಷ್ಟಗಳ ಸತಮಾಲೆಯನ್ನೇ ಕಂಡಿದ್ದೇನೆ.ಒಳ್ಳೆಯ ದಿನ ದಿನಗಳನ್ನೂ ನೋಡಿದ್ದೇನೆ. ಜೊತೆಗೆ ತುಂಬಾ ಕಷ್ಡದ ದಿನಗಳಲ್ಲಿ ನೋಡಿಕೊಂಡಿ ಬಂದಿದ್ದೇನೆ.,ಜೀವನದಲ್ಲಿ ನಕಾರಾತ್ಮ ವಿಷಯವನ್ನು ಎಷ್ಟು ಸ್ವೀಕಾರ ಮಾಡಿಕೊಂಡು ಮುಂದೇ ಹೋಗುತ್ತೇವೋ ಅಷ್ಟು ಮುಖ್ಯ., ಅದನ್ನು ಬದುಕು ಕಲಿಸಿಕೊಟ್ಟಿದೆ
ಜೀವನದಲ್ಲಿ ಕಷ್ಟದ ಸಮಯದಲ್ಲಿದ್ದಾಗ ಯಾರೂ ನೆರವಿಗೆ ಬರಲಿಲ್ಲ. ಒಳ್ಳೆಯ ಸಮಯದಲ್ಲಿ ಎಲ್ಲರೂ ಇರ್ತಾರೆ. ನಾನು ಕಷ್ಡದ ಸಮಯದಲ್ಲಿ ಎಲ್ಲರ ಜೊತೆ ನಿಂತಿದ್ದೇನೆ. ಮುಂದೆಯೂ ನಿಲ್ಲುತ್ತೇನೆ. ಹಿಂದಿನದನ್ನು ನೆನಪು ಮಾಡಿಕೊಂಡರ ಕಷ್ಣಲ್ಲಿ ನೀರು ಬರುತ್ತದೆ. ಪರಭಾಷೆಯವರು ಕೊಡುವ ಪ್ರೀತಿಯನ್ನು ಕನ್ನಡದ ಮಂದಿ ಕೊಡಲಿಲ್ಲವಲ್ಲಾ ಎನ್ನುವ ಬೇಸರ ಮತ್ತು ಕೊರಗು ಇದೆ.ಒಳ್ಳೆಯದು ಏನಾದರೂ ಮಾಡಬೇಕು ಅಂದಾಗ ಒಳ್ಳೆಯದು ಇರುತ್ತೆ.ಕೆಟ್ಟದ್ಸೂ ಇರಿತ್ತೆ. ಎಲ್ಲವನ್ನು ದಾಟಿಕೊಂಡು ಮುಂದೆ ಬಂದಿದ್ದೇನೆ. ಯಾವುದನ್ನು ಬಿಟ್ಟುಕೊಡುವುದಿಲ್ಲ.
ಕನ್ನಡ ಚಿತ್ರರಂಗ ಬದುಕು ಕೊಟ್ಟಿದೆ. ಅದು ನನ್ನ ಪ್ರಾಣ. ಆದರೆ ಬೇರೆ ಇಂಡಸ್ಟ್ರಿ ಯಲ್ಲಿ ಸಿಕ್ಕ ಪ್ರೀತಿ,,ಗೌರವ ಮನ್ನಣೆ ಕನ್ನಡ ಚಿತ್ರತಂಗದಲ್ಲಿ ಸಿಗಲಿಲ್ಲ. ಬೇರೆ ಸಿನಿಮಾ ರಂಗಕ್ಕೆ ಹೋದರೆ ಕನ್ನಡತೊಯಾಗಿ ಕನ್ನಡ ಚಿತ್ರರಂಗವನ್ನು ಪ್ರಚಾರ ಮಾಡುತ್ತಿದ್ದೇನೆ. ಯಾರು ಬಂದರೂ ಬರದೇ ಇದ್ದರೂ ನಾವು ನಮಗಾಗಿ ನಿಲ್ಲಬೇಕು ಎನ್ನುವುದನ್ನು ಕಂಡಿಕೊಂಡಿದ್ದೇನೆ. ಎಲ್ಲರ ಪ್ರೀತಿ ಪ್ರೋತ್ಸಾಹದಿಂದ ಹದಿನೈದು ವರ್ಷ ಚಿತ್ರರಂಗದಲ್ಲಿ ಕಳೆದಿದ್ದೇನೆ ಚಿತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದೇನೆ ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರದಲ್ಲಿ ಪಾತ್ರದಲ್ಲಿ ನಟಿಸುವಂತೆ ಅವಕಾಶ ಬಂದಿತ್ತು. ಆ ಪಾತ್ರ ಇಷ್ಟವಾಗಲಿಲ್ಲ. ಹೀಗಾಗಿ ನಟಿಸುವುದಿಲ್ಲ ಎಂದು ಹೇಳಿದ್ದೆ.ಪಾತ್ರಗಳ ಆಯ್ಕೆಯಲ್ಲಿ ಚೂಸಿ ಆಗಿದ್ದೇನೆ,. ಹಾಡು, ರೋಮಾಂಟಿಕ್ ಸನ್ನಿವೇಶದಲ್ಲಿ ಮಾತ್ರ ನಟಿಸುತ್ತಿಲ್ಲ, ಕತೆಗೆ ಒತ್ತು ನೀಡುತ್ತಿದ್ದೇನೆಎನ್ನುವ ಸಂಗತಿ ಹೊರ ಹಾಕಿದರು
ಮೂಲ ಪಂಜಾಬಿ ಆಗಿದ್ದರೂ ಒಬ್ಬ ಕನ್ನಡತಿಯಾಗಿ ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕಿ ಎನ್ನುವ ಹಂಬಲವಿದೆ. ಹೊಸ ವರ್ಷದ ಆರಂಭದಲ್ಲಿ ಮೂರು ಕನ್ನಡ ಚಿತ್ರಗಳಿಗೆ, ಜೊತೆಗೆ ಪರಭಾಷೆಯಲ್ಲಿಯೂ ಅವಕಾಶ ಬಂದಿದೆ. ಜೊತೆಗೆ ಈ ನಡುವೆ ಸಮಾಜ ಸೇವೆಯೂ ಮುಂದುವರಿದಿದೆ. ಕಷ್ಟದಲ್ಲಿದ್ದವರಿಗೆ ನೆರವು ನೀಡುವುದು ನನ್ನ ಗುರಿ ಅದನ್ನು ಮುಂದುವರಿಸುತ್ತಿದ್ದೇನೆ. ವೃಷಭ ಚಿತ್ರದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ಅದು ಏನು ಎನ್ನುವುದನ್ನು ತಿಳಿಯಲು ಇದೇಡಿಸೆಂಬರ್ 25 ರಂದು ಸಿನಿಮಾ ನೋಡಿ, ಮೋಹನ್ ಲಾಲ್ಎರಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆÀದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಮೋಹನ್ ಲಾಲ್ ಜೊತೆ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ ಸಾಕಷ್ಟು ಕಲಿತಿದ್ದೇನೆ ಎಂದರು.
