ನಟಿಗೆ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಸ್ಪಷ್ಟನೆ ನೀಡದ ಉದ್ಯಮಿ ಅರವಿಂದ್ ರೆಡ್ಡಿ.
ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ವಿಚಾರ ಅಂದ್ರೆ ಅದು ಅರವಿಂದ್ ರೆಡ್ಡಿ ಹಾಗೂ ನಟಿಯ ಸಂಬಂಧದ ವಿಚಾರ. ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿ ಹಾಗೂ ಅರವಿಂದ್ ರೆಡ್ಡಿ ಒಂದಷ್ಟು ವರ್ಷಗಳ ಕಾಲ ಲಿವಿನ್ ರಿಲೇಷನ್ ಶಿಪ್ ನಲ್ಲಿ ಇದ್ದವರು. ಲೀವಿನ್ ಅನ್ನೋದಕ್ಕಿಂತ ಜೆನ್ಯೂನ್ ಪ್ರೀತಿಯಲ್ಲಿ ಇದ್ದವರು ಎಂಬಂತೆ ಕಾಣಿಸುತ್ತಿದೆ. ಯಾಕಂದ್ರೆ ಅರವಿಂದ್ ರೆಡ್ಡಿ ಈಚೆಗಷ್ಟೇ ಮಾಧ್ಯಮದವರೊಂದಿಗೆ ಮಾತನಾಡುವಾಗ ಅವರ ಮಾತುಗಳು, ಆಗಾಗ ಗಂಟಲಲ್ಲಿ ನುಂಗಿಕೊಳ್ಳುತ್ತಿದ್ದ ನೋವು ಇದೆಲ್ಲವನ್ನು ನೋಡಿದಾಗ ಅವರಿಬ್ಬರದ್ದು ಪ್ರೀತಿಯೇ ಎಂಬುದು ಅರ್ಥವಾಗುವಂಥದ್ದು. ಆದ್ರೆ ಸಮಯ, ಸಂದರ್ಭ ಏನೇನು ಆಗಿದೆಯೋ ತಿಳಿದಿಲ್ಲ. ನಟಿ ಮಾತ್ರ ನಿರ್ಮಾಪಕ ಅರವಿಂದ್ ರೆಡ್ಡಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, ದೂರನ್ನ ಕೊಟ್ಟಿದ್ದಾರೆ. ಅದರ ಪರಿಣಾಮ ಅರವಿಂದ್ ರೆಡ್ಡಿ ಬಂಧನವೂ ಆಗಿತ್ತು, ಜಾಮೀನು ಸಿಕ್ಕಿತ್ತು.
ಇಷ್ಟೆಲ್ಲಾ ನಡೆದ ಮೇಲೂ ನಟಿ ಹೇಳೋದು ನಂದೇನು ತಪ್ಪಿಲ್ಲ, ನಾನು ಎಲ್ಲಿಯೇ ಹೋದ್ರು ನನ್ನಿಂದೆ ಒಬ್ಬರನ್ನ ಬಿಡ್ತಾರೆ, ಟಾರ್ಚರ್ ಮಾಡ್ತಾರೆ ಅಂತ. ಹಾಗೆ ಅವರು ಕಿಟ್ಟಿರುವ ಪ್ರತಿಯೊಂದು ವಸ್ತುವನ್ನು ಅವರಿಗೆ ವಾಪಾಸ್ ನೀಡಿದ್ದೇನೆ, ಪ್ರೀತಿಯಲ್ಲಿದ್ದಾಗ ಅವರು ಗಿಫ್ಟ್ ಕೊಟ್ಟಿದ್ದರು ನಾನು ಕೊಟ್ಟಿದ್ದೀನಿ ಅಂತ. ಹೀಗಾಗಿ ಇದಕ್ಕೆಲ್ಲ ಅರವಿಂದ್ ರೆಡ್ಡಿ ಕ್ಲಾರಿಟಿಯನ್ನ ನೀಡಿದ್ದಾರೆ.
ನಾನು ಆಕೆ ಪ್ರೀತಿಯಲ್ಲಿ ಇದ್ದದ್ದು ನಿಜ. ಜೂನ್ ನಲ್ಲಿ ಮದುವೆಯಾಗಬೇಕು ಎಂದುಕೊಂಡಿದ್ದೆವು. ಆದರೆ ಎರಡು ವರ್ಷಗಳಿಂದ ನನಗೂ ಆಕೆಗೂ ಬ್ರೇಕಪ್ ಆಯ್ತು. ಆಮೇಲೆ ಆಕೆಯ ಸಂಪರ್ಕವೇ ಇರಲಿಲ್ಲ. ಆದರೂ ನನ್ನ ಮೇಲೆ ಈ ರೀತಿಯ ಆರೋಪ ಮಾಡಿ ಬೀದಿಗೆ ತಂದು ನಿಲ್ಲಿಸಿದ್ದಾರೆ. ಕೋಟಿ ಕೋಟಿ ಹಣ ಖರ್ಚು ಮಾಡಿದ್ದೀನಿ. ಆಕೆ ಇಷ್ಟ ಪಟ್ಟಂತ ಪೋರ್ಷೇ ಕಾರು ಕೊಡ್ಸಿದ್ದೀನಿ, ಮನೆಯ ಇಂಟಿರಿಯರ್ ಮಾಡಿಕೊಡಿಸಿದ್ದೀನಿ, ತಮ್ಮನ ಎಂಗೇಜ್ಮೆಂಟ್ ಮದುವೆಗೆ ಸಹಾಯ ಮಾಡಿದ್ದೇನೆ, ಫಾರಿನ್ ಟ್ರಿಪ್ ಹೋಗ್ಬೇಕು ಅಂದಾಗೆಲ್ಲಾ ಕಳ್ಸಿದ್ದೀನಿ, ಆದರೂ ಮದುವೆಯಾಗಿ ಮಗು ಇರುವವನಿಗೋಸ್ಕರ ನನ್ನ ಬಿಟ್ಟಳು.
ಒಂದೇ ಮನೆಯಲ್ಲಿ ಜೊತೆಗೆ ಇದ್ದಾಗಲೇ ಇನ್ನೊಬ್ಬನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಳು. ಏನಾದರೂ ಕೇಳಿದ್ರೆ ಸೂಸೈಡ್ ಅಂತ ಬ್ಲಾಕ್ ಮೇಲ್ ಮಾಡ್ತಿದ್ಲು, ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇದ್ದಾಗಲೂ ಮೊಬೈಲ್ ಯೂಸ್ ಮಾಡ್ತಾ ಇದ್ಲು. ನಂಗೆ ಅಂತ ಅಲ್ಲ ನನ್ನ ರೀತಿಯೇ ಮೂರು ಜನಕ್ಕೆ ಮೋಸ ಮಾಡಿದ್ದಾಳೆ.
ಒಬ್ಬನಿಗೆ 80 ಲಕ್ಷ ನಾಮ ಹಾಕಿದ್ದಾಳಂತೆ. ಅವರೆಲ್ಲ ನನ್ನ ಬಳಿ ಹೇಳಿದ್ರು ಕೂಡ ನಾನು ಅದನ್ನೆಲ್ಲ ಎಂಟರ್ಟೈನ್ ಮಾಡ್ಲಿಲ್ಲ. ಬಿಕಾಸ್ ನನಗೆ ಆ ರೀತಿಯ ಅವಶ್ಯಕತೆ ಇಲ್ಲ. ನಾನು ಕೊಟ್ಟ ಗಿಫ್ಟ್ ಬಗ್ಗೆ ಹೇಳ್ತಾ ಇರಲಿಲ್ಲ. ಆದ್ರೆ ನನ್ನನ್ನ ಈ ರೀತಿ ಬೀದಿಗೆ ನಿಲ್ಲಿಸಿದಾಗ ನಡೆದ ಘಟನೆ ಬಗ್ಗೆ ಹೇಳಲೇಬೇಕಲ್ವಾ. ನಾನು ಕಾನೂನು ಹೋರಾಟ ಮಾಡ್ತೇನೆ. ಎಲ್ಲಾ ದಾಖಲೆಗಳನ್ನ ಬಿಡುಗಡೆ ಮಾಡ್ತೇನೆ ಎಂದು ವಿವರಣೆ ನೀಡಿದ್ದಾರೆ.