Cini NewsSandalwood

ಸಿನಿಮಾ ಪತ್ರಕರ್ತರೊಂದಿಗೆ ‘ಲವ್ OTP’ ಚಿತ್ರದ ತಂಡದಿಂದ “ಬಾಕ್ಸ್ ಲೀಗ್ ಕ್ರಿಕೆಟ್.”

ನವೆಂಬರ್ 14 ಕ್ಕೆ ಅನೀಶ್ ತೇಜೇಶ್ವರ್ ನಟನೆಯ ಲವ್‌ OTP ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಏಕ ಕಾಲಕ್ಕೆ ರಿಲೀಸ್ ಆಗ್ತಿದೆ. ಮನೆ ಕಟ್ಟಿ ನೋಡು ಮದುವೆ ಮಾಡಿ‌ ನೋಡು ಎಂಬ ಮಾತಿದೆ ಅದ್ರೆ ಈಗ ಈ‌ಮಾತು ಸಿನಿಮಾ ಮಂದಿಗೆ ಕೊಂಚ ಬದಲಾದಂತೆ ಕಾಣ್ತಿದ್ದು, ಸಿನಿಮಾ ಮಂದಿ ಸಿನಿಮಾ ಮಾಡಿ ನೋಡಿ‌.ಅದನ್ನ ರಿಲೀಸ್ ಮಾಡಿ ನೋಡಿ ಅಂತಿದ್ದಾರೆ.

ಯಾಕಂದ್ರೆ ಒಂದು ಸಿನಿಮಾ ಮಾಡೊದು ಎಷ್ಟು ಕಷ್ಟವೋ ಕಷ್ಟ ಪಟ್ಟು ಮಾಡಿರುವ ಸಿನಿಮಾವನ್ನು ಜನರಿಗೆ ತಲುಪುವ ರೀತಿ ಪ್ರಚಾರ ಮಾಡಿ ಅದನ್ನು ರಿಲೀಸ್ ಮಾಡೋದು ಅಷ್ಟೇ ಕಷ್ಟ ಅಗಿದೆ ಅದರಲ್ಲೂ ಕೋವಿಡ್ ನಂತ್ರ ಸಿನಿಮಾ ಪ್ರಚಾರ ಹೊಸ ಆಯಾಮ‌ ಪಡೆದುಕೊಂಡಿದ್ದು, ಹೊಸ ಹೊಸ ಪ್ರಚಾರದ ತಂತ್ರಗಳನ್ನು ಪ್ರಯೋಗಿಸಿ ಚಿತ್ರತಂಡಗಳು ಪ್ರಚಾರ ಮಾಡಿ ಗೆದ್ದಿವೆ..ಈಗ ಈ ಸಾಲಿಗೆ ನಟ ಅನೀಶ್ ತೇಜೇಶ್ಚರ್ ಅಭಿನಯದ ಲವ್ ಓಟಿಪಿ ಸಿನಿಮಾ ತಂಡ ಸೇರಿದೆ.ಈಗಾಗಲೇ ಟೀಸರ್..ಸಾಂಗ್ ಗಳ ಮೂಲಕ ಮನೆ ಮಾತಾಗಿರುವ ಲವ್ ಓಟಿಪಿ ಚಿತ್ರ ಈಗ ವಿಭಿನ್ನ ಪ್ರಚಾರದ ಮೂಲಕ ಸಿನಿ ಪ್ರೇಮಿಗಳ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಇದೇ ತಿಂಗಳ 14 ಕ್ಕೆ ರಿಲೀಸ್ ಗೆಸದ್ದಾಗಿರುವ ಲವ್ ಓಟಿಪಿ ಚಿತ್ರಸಿನಿಮಾಗಳ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಕರ್ತರ ಜೊತೆ ಸ್ನೇಹಪೂರ್ವಕವಾಗಿ ಕ್ರಿಕೆಟ್ ಟೂರ್ನಿ ಆಡುವ ಮೂಲಕ ಗಮನ ಸೆಳೆದು ಈಗೂ ಸಿನಿಮಾ ಪ್ರಚಾರ ಮಾಡಬಹುದು ಎಂದು ತೋರಿಸಿದ್ದಾರೆ. ಲವ್ ಒಟಿಪಿ ತಂಡ ಮಾಧ್ಯಮದಬರು, ಡಿಜಿಟಲ್ ಮಾಧ್ಯಮದವರು ಪತ್ರಿಕೆಯ ಸಿನಿಮಾ ಪತ್ರಕರ್ತರು , ಯೂಟ್ಯೂಬರ್ ಗಳ ಜೊತೆ ಕ್ರಿಕೆಟ್ ಆಡುವ ಮೂಲಕ ಸಿನಿಮಾ ಪ್ರಚಾರ ಮಾಡಿದ್ದಾರೆ…ಲವ್ ಓಟಿಪಿ‌ ಚಿತ್ರತಂಡ ಸೇರಿದಂತೆ ಒಟ್ಟು ಐದು ತಂಡಗಳ ಟೂರ್ನಿ ಅಯೋಜಿಸಿದ್ರು.

ಅನೀಶ್ ನಾಯಕತ್ವದ ಟೀಮ್ ಲವ್ ಓಟಿಪಿ. ನ್ಯೂಸ್ 18 ಕನ್ನಡದ ವರದಿಗಾರ ಸತೀಶ್ ಕನಕಪುರ ನಾಯಕತ್ವದ ಸ್ಟಾರ್ ರಿಪೋರ್ಟರ್ಸ್..ಪಿಅರ್ ಓ
ಪ್ರವೀಣ್ ಏಕಾಂತ್ ನೇತೃತ್ವದ ಡಿಜಿಟಲ್ ಒಟಿಪಿ, ಮತ್ತೊರ್ವ ಪಿಅರ್ ಓ ಹರೀಶ್ ಅರಸು ನಾಯಕತ್ವದ ಲವ್ ಹಂಟರ್ಸ್, ಹಾಗೂ ಮತ್ತೋತ್ವ ಸಿನಿಮಾ ಪತ್ರಕರ್ತ ಆತ್ಮೀಯ ಕನ್ನಡಿಗ ಖ್ಯಾತಿಯ ಶ್ರೀಧರ್ ಶಿವಮೊಗ್ಗ ನೇತೃತ್ವದ ಲವ್ ಸ್ಕ್ವಾಡ್ ತಂಡಗಳು ಲವ್ ಒಟಿಪಿ ಕಪ್ ಗಾಗಿ ಹಣಾಹಣಿ ಮಡೆಸಿದ್ವು.ರೋಚಕ ಟೂರ್ನಿಯಲ್ಲಿ ಸ್ಟಾರ್ ರಿಪೋರ್ಟರ್ಸ್ ಹಾಗೂ ಲವ್ ಹಂಟರ್ಸ್ ತಂಡಗಳು ಫೈನಲರ್ ತಲುಪಿ, ಲವ್‌ ಒಟಿಪಿ ಕಪ್ ಗಾಗಿ ಜಿದ್ದಾ ಜಿದ್ದಾ ಆಟ ಆಡಿದ್ದವು.

ಫೈನಲ್ ಪಂದ್ಯದ ರೋಚಕ‌ ಆಟದಲ್ಲಿ ಲವ್‌ಹಂಟರ್ಸ್ ತಂಡ ಸ್ಟಾರ್ ರಿಪೋರ್ಟರ್ಸ್ ಬಳಗಕ್ಕೆ 2 ರನ್‌ಗಳ ರೋಚಕ‌ ಸೋಲುಣಿಸಿ ಲವ್‌ ಒಟಿಪಿ ಕಪ್ ಅನ್ನು ಮುಡಿಗೇರಿಸಿ ಕೊಂಡ್ರು. ಈ‌ ಮೂಲಕ ಕ್ರಿಕೆಟ್‌ ಆಡುವ  ಜೊತೆಗೆ ಕ್ರಿಕೆಟ್ ಪ್ರೇಮಿಗಳನ್ಜು ತಲುಪಿ ಸಿನಿಮಾ ಮಂದಿರಕ್ಕೆ ಅವರನ್ನು ಕರೆತರುವ ವಿಭಿನ್ನ ಪ್ರಚಾರವನ್ನು ಚಿತ್ರತಂಡ ಮಾಡಿದೆ. ಇನ್ನು ಅನೀಶ್ ತೇಜೇಶ್ವರ್ ಲವ್ ಒಟಿಪಿ ಚಿತ್ರದಲ್ಲಿ ನಾಯಕನಾಗಿ‌ ನಟಿಸೋದ್ರ ಜೊತೆಗೆ  ನಿರ್ದೇಶನ ಮಾಡಿದ್ದು, ಈ ಸಿನಿಮಾ ಮೂಲಕ ಸಿನಿಮಾ ಲವ್‌ಮಾಡೊ ಮಂದಿಯ ಮನೆ ಮನ ತಲುಪೋಕೆ ಅನೀಶ್ ಸಜ್ಜಾಗಿದ್ದಾರೆ.

ಚಿತ್ರರಂಗದಲ್ಲಿ ನೆಲೆ ನೆಲ್ಲಲೇ ಬೇಕು ಎಂದು ಹೋರಾಡ್ತಿರುವ ಸ್ನೇಹಿತ ಅನೀಶ್ ಕಂಡ ಕನಸಿಗೆ ವಿಜಯ್ ಎಂ ರೆಡ್ಡಿ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನವೆಂಬರ್ 14 ಕ್ಕೆ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಏಕ ಕಾಲಕ್ಕೆ ರಿಲೀಸ್ ಆಗ್ತಿರುವ ಲವ್‌ OTP ಚಿತ್ರದಲ್ಲಿ ಅನೀಶ್ ತೇಜೇಶ್ವರ್, ಜಾಹ್ನವಿ ಕಲಕೇರಿ, ಆರೋಹಿ ನಾರಾಯಣ್, ರಾಜೀವ್ ಕನಕಾಲ, ಪ್ರಮೋದಿನಿ ಮುಂತಾದವರು ನಟಿಸಿದ್ದು, ಈ ಚಿತ್ರವೂ ಯಾವ ರೀತಿ ಚಿತ್ರಪ್ರೇಮಿಗಳ ಮನ ಗೆಲ್ಲುತ್ತೆ ಕಾದು ನೋಡಬೇಕಿದೆ.

error: Content is protected !!