Cini NewsSandalwood

ನಾದಬ್ರಹ್ಮ‌ ಹಂಸಲೇಖ ಅವರ ಐದನಿ ಸಂಸ್ಥೆಯ ಚಿನ್ನದ ಪದಕ್ಕೆ ಪ್ರಾಗೈತಿಹಾಸಿಕ ತಜ್ಞ ಪ್ರೊ.ರವಿ ಕೋರಿಶೆಟ್ಟರ್ ಆಯ್ಕೆ

ನಾದಬ್ರಹ್ಮ ಹಂಸಲೇಖ ಅವರ ಐದನಿ ಎಂಟರ್ಟೈನ್ಮೆಂಟ್ ಸಂಸ್ಥೆಯೂ ಪ್ರತಿ ವರ್ಷ ಒಬ್ಬಬ್ಬೊ ಸಾಧಕರಿಗೆ ಜೀವಮಾನದ ಸಾಧನೆಗಾಗಿ ನೀಡುವ ‘ಐದನಿ ಚಿನ್ನದ ಪದಕ’‌ ನೀಡಿ ಗೌರವುಸುತ್ತಾ ಬಂದಿದೆ. ಈ ಮೊದಲ ಗೌರವವನ್ನು ಡಾ ಶಿವರಾಜ್ ಕುಮಾರ್ ಅವರಿಗೆ, ಎರಡನೆಯದಾಗಿ ಹಿರಿಯ ನಿರ್ದೇಶಕರಾದ ಶ್ರೀ ರಾಜೇಂದ್ರ ಸಿಂಗ್ ಬಾಬು ಅವರಿಗೆ ನೀಡಿತ್ತು. ಇದೀಗ ಮೂರನೆಯವರಾಗಿ ಪ್ರಾಗೈತಿಹಾಸಿಕ ತಜ್ಞ ಡಾ ರವಿ ಕೋರಿ ಶೆಟ್ಟರ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಕುರಿತ ಬೆಂಗಳೂರಿನಲ್ಲಿ ನಿನ್ನೆ ನಡೆದ ಸುದ್ದಿ ಗೋಷ್ಠಿಯಲ್ಲಿ ಘೋಷಿಸಲಾಯಿತು.

ಈ ವೇಳೆ‌ ಮಾತನಾಡಿದ ಹಂಸಲೇಖ, ನವೆಂಬರ್ 14 ರಂದು ಬಳ್ಳಾರಿಯ ಸಂಗನಕಲ್ಲು ಪುರಾತತ್ವ ಮ್ಯೂಸಿಯಂ ಎದುರು ರವಿ ಕೋರಿಶೆಟ್ಟರ್ ಅವರಿಗೆ ಐದನಿ ಚಿನ್ನದ ಪದಕ ನೀಡಿ ಗೌರವಿಸಲಿದ್ದೇವೆ. ಪದ್ಮಶ್ರೀ ಪ್ರಶಸ್ತಿಗೆ ಅರ್ಹರಾಗಿರುವ ಕೋರಿಶೇಟ್ಟರ್ ಅವರಿಗೆ ಇನ್ನೂ ಸಹ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ವಿಷಾದನೀಯ. ಮತ್ತು ಈಗಿನ ಸರ್ಕಾರ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಿಲೆಂದು ಹಂಸಲೇಖ ಅವರು ಆಗ್ರಹಿಸಿದರು.

ನಂತರ ಅಂತಾರಾಷ್ಟ್ರೀಯ ಪ್ರಾಗೈತಿಹಾಸ ತಜ್ಞ ಪ್ರೊಫೆಸರ್ ರವಿ ಕೋರಿಶೆಟ್ಟರ್ ಅವರನ್ನು ಆಯ್ಕೆ ಮಾಡಲು ಕಾರಣಗಳನ್ನು ವಿವರಿಸುತ್ತಾ ಬಳ್ಳಾರಿಯಲ್ಲಿ ಪ್ರೊ. ರವಿ ಕೋರಿಶೆಟ್ಟರ್ ತಮ್ಮ ಬಳಗದೊಂದಿಗೆ ಸೇರಿ ಜಿಲ್ಲಾಡಳಿತದ ಸಹಾಯದಿಂದ ನಿರ್ಮಿಸಿರುವ ರಾಬರ್ಟ್ ಬ್ರೂಸ್ ಫೂಟ್ ಪ್ರಾಗೈತಿಹಾಸ ವಸ್ತು ಸಂಗ್ರಹಾಲಯವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇಂತಹ ಒಂದು ಅದ್ಭುತ ವಸ್ತು ಸಂಗ್ರಹಾಲಯ ಏಷಿಯಾದಲ್ಲೇ ಇಲ್ಲ , ಐದು ಸಾವಿರ ವರ್ಷಗಳ ಹಿಂದೆಯೇ ಕಲ್ಲುಗಳಲ್ಲಿ ಸಪ್ತ ಸ್ವರಗಳನ್ನು ಗುರುತಿಸಿ ಅಂದಿನ ಕಾಲದಲ್ಲಿಯೇ ಸಂಗೀತ ಪ್ರವರ್ಧಮಾನದಲ್ಲಿತ್ತು ಎನ್ನವುದನ್ನು ಅವರು ಸಂಶೋಧನೆಗಳ ಮೂಲಕ ಪತ್ತೆಹಚ್ಚಿದ್ದಾರೆ.

ಪ್ರೊ. ರವಿಕೋರಿ ಶೆಟ್ಟರ್ ಪೂರ್ವೇತಿಹಾಸದ ಕುರಿತು ಮಾಡಿರುವ ಕೆಲಸ ಹರಪ್ಪಾ ಲಿಪಿ ಕುರಿತು ಕೆಲಸ ಮಾಡಿದ್ದ ಐರವತ್ತಂ ಮಹದೇವನ್ ಅವರಿಗೆ ಸಮನಾದದ್ದು. ಅವರ ಕಾರ್ಯವೈಖರಿ ನೋಡಿ ನಾನೇ ಅಚ್ಚರಿಗೊಳಗಾಗಿದ್ದೇನೆ ಎಂದು ಹಂಸಲೇಖ , ಪ್ರಾಗೈತಿಹಾಸ ತಜ್ಞ ಪ್ರೊಫೆಸರ್ ರವಿ ಕೋರಿ ಶೆಟ್ಟರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಮಾತಾನಾಡಿರುವುದಾಗಿ ತಿಳಿಸಿದರು. ಇನ್ನು ಸುದ್ದಿಗೋಷ್ಟಿಯಲ್ಲಿ ಡಾ.ಹಂಸಲೇಖ ಜೊತೆ ಹರ್ಷಕುಮಾರ್ ಕುಗ್ವೆ ಮತ್ತು ಇತಿಹಾಸ ದರ್ಪಣ ಪತ್ರಿಕೆ ಸಂಪಾದಕರಾದ ಹಂ.ಗು.ರಾಕೇಶ್ ಉಪಸ್ಥಿತರಿದ್ದು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಿಳಿಸಿದರು.

error: Content is protected !!