Cini NewsSandalwood

”ಧರ್ಮಂ”‌ ಸಿನಿಮಾದ ಸಾಂಗ್ ಮೆಚ್ಚಿದ ಆರ್ .ಚಂದ್ರು.

ಮಲೆ ಮಹಾದೇಶ್ವರ ಬೆಟ್ಟಕ್ಕೆ ಬೇಟಿ ಕೊಟ್ಟು ನಂತರ ಸಾಂಗ್ ರಿಲೀಸ್ ಮಾಡಿದ ಧರ್ಮಂ ತಂಡ. ಧರ್ಮಂ ಅನ್ನೋ ವಿಭಿನ್ನ ಕಥಾ ಹಂದರದ ಸಿನಿಮಾವನ್ನ ನಿರ್ದೇಶಕ ಆರ್ .ಚಂದ್ರು ಮೆಚ್ಚಿ ಶುಭ ಹಾರೈಸಿದ್ದಾರೆ. ಶಾಂತ ಸಿನಿಮಾಸ್ Dr S K ರಾಮಕೃಷ್ಣ ನಿರ್ಮಾಣದ ಧರ್ಮಂ ಸಿನಿಮಾದ ನೀನೇ ತಂದ ಒಲವಾ ಒಡವೆ ಹಾಡನ್ನ ರಿಲೀಸ್ ಮಾಡಿ ತಮ್ಮ ತಾಜ್ ಮಹಲ್ ಸಿನಿಮಾದ ಮೆಲುಕು ಹಾಕಿದ್ದಾರೆ. ಧರ್ಮಂ ಸಿನಿಮಾಗೆ ನಾಗಮುಖ ಆಕ್ಷನ್ ಕಟ್ ಹೇಳಿದ್ದು , ಸಿನಿಮಾದಲ್ಲಿ ಸಾಯಿ ಶಶಿ ನಾಯಕನಾಗಿ ಕಾಣಿಸಿಕೊಂಡಿದ್ರೆ ನಟಿ ವರ್ಣಿಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮೇಲೂ ಕೀಳು ಅನ್ನೋ ಭಾವ ಲೋಕದ ಹೊಸ ಪ್ರಪಂಚದಲ್ಲಿ ಹೋರಾಟ ಮಾಡ್ತಿರೋ ನಾಯಕನ ಜೊತೆ ತನ್ನ ಮನದಾಳದ ಭಾವನೆಗಳನ್ನ ಹೇಳಿಕೊಳ್ಳೋ ತೊಳಲಾಟದಲ್ಲಿನ ಸನ್ನಿವೇಶಗಳು ಹಾಡಿನಲ್ಲಿ ಮೂಡಿ ಬಂದಿವೆ. ಧರ್ಮಂ ಸಿನಿಮಾ ತಂಡ ಮಲೆ‌ಮಹಾದೇಶ್ವರ ಬೆಟ್ಟಕ್ಕೆ ಬೇಟಿ ನೀಡಿ ಆಶಿರ್ವಾದ ಪಡೆದು ಸಿನಿಮಾದ ಸಾಂಗ್ ರಿಲೀಸ್ ಮಾಡಿದೆ. ಹಲವು ವಿಭಿನ್ನ ಲೋಕೇಶನ್ ಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ಸರಿಗಮ ಯ್ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ರಿಲೀಸ್ ಆಗಿದೆ….ಖ್ಯಾತ ನಿರ್ದೆಶಕ ಆರ್ ಚಂದ್ರು ಚಿತ್ರತಂಡದ ಪ್ರಯತ್ನ ಮೆಚ್ಚಿ ಶುಭ ಹಾರೈಸಿದ್ದಾರೆ.

ನಾಗಮುಖ ನಿರ್ದೇಶನದ ಜೊತೆಗೆ ನಾಗಶೆಟ್ಟಿ ಕ್ಯಾಮರಾ ಕೈಚಳಕ ..ಸರವಣ ಸಂಗೀತ ಕೇಳುಗರನ್ನ ಮೋಡಿ ಮಾಡಿದೆ…ಪ್ರಕೃತಿ ಮಡಿಲಿನ ದೃಶ್ಯ ವೈಭವ ಹೊಸ ಭಾವಲೋಕಕ್ಕೆ ಪಯಣ ಬೆಳೆಸುವಂತೆ ಮಾಡಿದೆ.

error: Content is protected !!