Cini NewsSandalwood

ಪೌರ ಕಾರ್ಮಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್

Spread the love

ಪತ್ರಕರ್ತ, ನಟ , ನಿರ್ದೇಶಕ ಇಂದ್ರಜಿತ್ ಲಂಕೇಶ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೋರಮಂಗಲದ ಶ್ರೀಕೊದಂಡರಾಮ ಸೇವಾ ಸದನದಲ್ಲಿ ಪೂಜೆ ಸಲ್ಲಿಸಿದ ಇಂದ್ರಜಿತ್ ಲಂಕೇಶ್ ಅವರು ನಂತರ ಪೌರ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

ಪ್ರತಿ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಇಂದ್ರಜಿತ್ ಅವರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ. ವಿಶೇಷ ಚೇತನರಿಗೆ ನೆರವು ನೀಡುವುದು, ಕೋಮು ಗಲಭೆಯಲ್ಲಿ ತೀರಿಕೊಂಡ ಹುಡುಗರ ಮನೆಗೆ ಹೋಗಿ ಸಾಂತ್ವನ ಹೇಳಿ ಅವರಿಗೆ ಕೈಲಾದ ಸಹಾಯ‌ ಮಾಡುವುದು.

ಕಾರ್ಗಿಲ್ ಯುದ್ದದಲ್ಲಿ ಮಡಿದ ಹನುಮಂತ ನಾಯಕ್ ಅವರಿಗೆ ಗೌರವ ಸೂಚಕವಾಗಿ ಟೌನ್ ಹಾಲ್ ನಲ್ಲಿ ದೊಡ್ಡ ಸಮಾರಂಭ ಆಯೋಜಿಸಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹನುಮಂತ ನಾಯಕ್ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದು ಹಾಗೂ ಕೋವಿಡ್ ಸಮಯದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಿಗೆ ಆರ್ಥಿಕ ಸಹಕಾರ ನೀಡಿರುವುದು ಹೀಗೆ ಇಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಕೊಳ್ಳುತ್ತಾ ಬಂದಿರುವ ಇಂದ್ರಜಿತ್ ಲಂಕೇಶ್ ನಿಜಕ್ಕೂ ಹಲವರಿಗೆ ಆದರ್ಶವಾಗಿದ್ದಾರೆ.

Visited 1 times, 1 visit(s) today
error: Content is protected !!