Cini NewsSandalwood

ನಟ ಮನೋರಂಜನ್ ರವಿಚಂದ್ರನ್ ನಟನೆಯ 5ನೇ ಸಿನಿಮಾಗೆ ಚಾಲನೆ

Spread the love

ಲಕ್ಷ್ಮಿ ನರಸಿಂಹ ಸ್ವಾಮಿ ಆಶೀರ್ವಾದದಿಂದ ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು. ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಮನೋರಂಜನ್ ರವಿಚಂದ್ರನ್ ಹೊಸ ಕಥೆಯೊಂದಿಗೆ ಹಾಜರಾಗಿದ್ದಾರೆ. ಈ ಬಾರಿ ಮನು, ಕಂಟೆಂಟ್ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಸಾಹೇಬ, ಮುಗಿಲ್ ಪೇಟೆ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಭರವಸೆ ಹುಟ್ಟುಹಾಕಿರುವ ಕ್ರೇಜಿ ಸ್ಟಾರ್ ಪುತ್ರ ಸದ್ದಿಲ್ಲದೆ ಹೊಸ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಮನೋರಂಜನ್ ರವಿಚಂದ್ರನ್ ಅವರ ಐದನೇ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ಮನು ಹೊಸ ಸಾಹಸಕ್ಕೆ ಸಹೋದರ ವಿಕ್ರಮ್ ರವಿಚಂದ್ರನ್ ಸಾಥ್ ಕೊಟ್ಟಿದ್ದಾರೆ. ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ವಿಕ್ಕಿ ಶುಭಾಶಯ ತಿಳಿಸಿದರು. ಯುವ ಪ್ರತಿಭೆ ರುದ್ರೇಶ್ ನಿರ್ದೇಶನದಲ್ಲಿ ಮನೋರಂಜನ್ ನಾಯಕನಾಗಿ ಅಭಿನಯಿಸುತ್ತಿದ್ದು, ಬೃಂದಾ ಆಚಾರ್ಯ ನಾಯಕಿಯಾಗಿ ಜೊತೆಯಾಗಿದ್ದಾರೆ. ನಟಿ ಅನುಷಾ ರೈ ಸ್ಪೆಷಲ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಒಂದೊಳ್ಳೆ ಕಂಟೆಂಟ್ ಗೆ ಕಮರ್ಷಿಯಲ್ ಟಚ್ ಕೊಟ್ಟು ರುದ್ರೇಶ್ ಕಥೆ ಎಣೆದಿದ್ದಾರೆ.

ವೈಎಸ್ ಪ್ರೊಡಕ್ಷನ್ ನಡಿ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೆರ್ಸಿ ಗಿಫ್ಟ್ ಮ್ಯೂಸಿಕ್, ಸೆಲ್ವಂ ಕ್ಯಾಮೆರಾ ವರ್ಕ್ ಹಾಗೂ ಕೆಎಂ ಪ್ರಕಾಶ್ ಸಂಕಲನ ಸಿನಿಮಾಗಿದೆ. ಮುಂದಿನ ವಾರದಿಂದ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಬೆಂಗಳೂರಿನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ‌. ಆ ಬಳಿಕ ಬಾದಾಮಿಯತ್ತ ಇಡೀ ಟೀಂ ಹೆಜ್ಜೆ ಹಾಕಲಿದೆ.

Visited 1 times, 1 visit(s) today
error: Content is protected !!