Cini NewsSandalwood

ಆಗಸ್ಟ್ 8ರಂದು “ರಾಜ ದ್ರೋಹಿ” ಚಿತ್ರ ರಾಜ್ಯಾದ್ಯಂತ ಬಿಡುಗಡೆ

ರಾಜ ದ್ರೋಹಿ ಚಿತ್ರದಲ್ಲಿ ಅನಂತನಾಗ್, ಲಕ್ಷೀ ಅಭಿನಯ, ಶರಣ್ ಹಾಗೂ ಅವರ ತಂದೆ ತಾಯಿ ನಟನೆ ಮಾಡಿದ್ದಾರೆ. ಧನುಷ್ ಕಂಬೈನ್ಸ್ ಬ್ಯಾನರ್‌ದಲ್ಲಿ ಮಹದೇವಯ್ಯ ನಿರ್ಮಾಣ ಮಾಡಿದ್ದು, ಸಮರ್ಥರಾಜ್ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಸಿನಿಮಾದ ಕುರಿತು ಹೇಳುವುದಾದರೆ ನಮ್ಮ ಎದುರುಗಡೆ ಬರುವ ಸಮಸ್ಯೆಗಳನ್ನು ಯಾವ ರೀತಿ ಎದುರಿಸುತ್ತಾರೆ. ಅಪ್ಪ-ಅಮ್ಮ ಕಣ್ಣ ಮುಂದೆ ಇದ್ದರೂ ಗುರುತಿಸಲಾಗದಂತ ಮಕ್ಕಳ ಪರಿಸ್ಥಿತಿ, ಅದೇ ರೀತಿ ತಂದೆ-ತಾಯಿಗೆ ಇವರೇ ತಮ್ಮ ಮಕ್ಕಳೆಂದು ತಿಳಿದಿರುವುದಿಲ್ಲ. ಮುಂದೆ ಬೇರೆ ಬೇರೆ ಅವಘಡಗಳು ಸಂಭವಿಸಿದಾಗ, ಹೇಗೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

ತಾರಾಗಣದಲ್ಲಿ ಅಭಿಜಿತ್, ಒರಟ ಪ್ರಶಾಂತ್, ನೀನಾಸಂ ಅಶ್ವಥ್, ಅಚ್ಯುತಕುಮಾರ್, ಕುರಿಬಾಂಡ್ ಸುನಿಲ್, ಬ್ಯಾಂಕ್ ಜನಾರ್ಧನ್, ಪಟ್ರೆಅಜಿತ್, ಮಾನಸಿ, ಸುನಿತಾಶ್ರೀನಿವಾಸ್, ಲಲಿತಾ, ರಾಧಾಕೃಷ್ಣ, ಕುರಿ ಪ್ರತಾಪ್, ಶ್ರೀಲಕ್ಷೀ ಮುಂತಾದವರು ನಟಿಸಿದ್ದಾರೆ. ಸಂಗೀತ ರಘುತುಮಕೂರು, ಹಿನ್ನಲೆ ಶಬ್ದ ಭೂಪತಿ, ಛಾಯಾಗ್ರಹಣ ಸತೀಶ್‌ಮನೋಹರ್-ವೀನಸ್‌ಮೂರ್ತಿ-ನಾಗರಾಜ್, ಸಂಕಲನ ಕುಮಾರ್‌ಕೊಟಿಕೊಪ್ಪ, ಕಲೆ ಬಾಬುಖಾನ್, ಸಾಹಸ ಅಲ್ಟಿಮೇಟ್ ಶಿವು ಅವರದಾಗಿದೆ. ಸಿನಿಮಾವು ಆಗಸ್ಟ್ 8ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

error: Content is protected !!