ಬೆಂಗಳೂರಿನಲ್ಲಿ ಬಾಲಿವುಡ್ ತಾರೆಯರ “ಮೆಟ್ರೋ… ಇನ್ ದಿನೋ” ಪ್ರಚಾರ
ಇತ್ತೀಚೆಗೆ ಸ್ಯಾಂಡಲ್ವುಡ್ , ಕಾಲಿವುಡ್ , ಟಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳು ಕೂಡ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಪ್ರೇಕ್ಷಕರೂ ಕೂಡ ತಮ್ಮ ನೆಚ್ಚಿನ ಚಿತ್ರವನ್ನು ಆಯ್ಕೆ ಮಾಡಿಕೊಂಡು ನೋಡುವಂತಾಗಿದೆ. ಆ ನಿಟ್ಟಿನಲ್ಲಿ ಬಾಲಿವುಡ್ ನ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅನುರಾಗ್ ಬಸು ನಿರ್ದೇಶನದ ಬಹು ನಿರೀಕ್ಷಿತ ಚಲನಚಿತ್ರ ‘ಮೆಟ್ರೋ…ಇನ್ ದಿನೋ’ ತಂಡದ ನಾಯಕ ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ , ಪ್ರೀತಮ್, ಗಾಯಕ ಶಶ್ವತ್ ಸಿಂಗ್ ಬೆಂಗಳೂರಿಗೆ ಆಗಮಿಸಿ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದರು.
ಈ ಚಿತ್ರದ ನಾಯಕ ಆದಿತ್ಯ ರಾಯ್ ಕಪೂರ್ ವೇದಿಕೆ ಮೇಲೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳುತ್ತಾ ಮಾತು ಆರಂಭಿಸಿ ನಮ್ಮ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದೇವೆ. ನಮ್ಮ ಸಿನಿಮಾ ಎಲ್ಲಾ ವಯಸ್ಸಿನವರು ನೋಡುವಂತ ಚಿತ್ರವಾಗಿದೆ. ಇವತ್ತಿನ ಯೂತ್ ಕನೆಕ್ಷನ್ ಕಂಟೆಂಟ್ ಇದೆ. ನಮ್ಮ ಸ್ಟೋರಿ ಬೆಂಗಳೂರಿನಲ್ಲಿ ಶುರುವಾಗುತ್ತೆ , ಲವ್ , ಎಮೋಷನ್ ಜೊತೆ ಬ್ಯೂಟಿಫುಲ್ ಸಾಂಗ್ಸ್ ಕೂಡ ಇದೆ. ಎಲ್ಲರೂ ನೋಡಿ ಎನ್ನುತ್ತಾ ನಾನು ಕೆಜಿಎಫ್ , ಕಾಂತ ರ ಚಿತ್ರ ನೋಡಿದ್ದೇನೆ.
ಹಾಗೆಯೇ ಕನ್ನಡ ಚಿತ್ರದಲ್ಲಿ ಉತ್ತಮ ಕಥೆ , ಒಳ್ಳೆ ಅವಕಾಶ ಸಿಕ್ಕರೆ ಅಭಿನಯಿಸಿದ್ದೇನೆ ಎಂದು ಹೇಳಿದರು. ಇನ್ನು ನಾಯಕ ನಟಿ ಸಾರಾ ಅಲಿ ಖಾನ್ ಎಲ್ಲರಿಗೂ ನಮಸ್ಕಾರ ಎನ್ನುತ್ತಾ ಕನ್ನಡದಲ್ಲಿ ಮಾತನಾಡಲು ಆರಂಭಿಸಿ, ನನ್ನ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದೇನೆ. ಹೆವಿ ಟ್ರಾಫಿಕ್ ಇಂದ ಸ್ವಲ್ಪ ಲೇಟ್ ಆಗಿದೆ. ನಾಲಕ್ಕು ಮೆಟ್ರೋ ನಗರಗಳ ಜೋಡಿಯ ಕಥೆ ಈ ಚಿತ್ರದಲ್ಲಿದೆ. ನಮ್ಮದು ಬೆಂಗಳೂರಿನಲ್ಲಿ ಆರಂಭಗೊಳ್ಳುವಂತ ಕಥೆಯಾಗಿದೆ. ನನ್ನ ಸಹನಟ ಜೊತೆ ಕೆಲಸ ಮಾಡಿದ್ದು ಬಹಳ ಖುಷಿ ತಂದಿದೆ. ಅದೇ ರೀತಿ ನಿರ್ದೇಶಕರು ಕೂಡ ನಮ್ಮನ್ನ ಚೆನ್ನಾಗಿ ಚಿತ್ರದಲ್ಲಿ ತೋರಿಸಿದ್ದಾರೆ. ಎಲ್ಲರೂ ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.
ಇನ್ನು ಈ ‘ಮೆಟ್ರೋ…ಇನ್ ದಿನೋ’ ಚಿತ್ರವು ನಾಲ್ಕು ರೀತಿಯ ಕಥೆಗಳನ್ನು ಹೊಂದಿದ್ದು, ಪ್ರತಿಯೊಂದು ಕಥೆಯು ಪ್ರೀತಿ, ನಿಷ್ಠೆ ಮತ್ತು ಆಧುನಿಕ ಸಂಬಂಧಗಳ ಭಾವನಾತ್ಮಕ ಏರಿಳಿತಗಳನ್ನು ಅನಾವರಣ ಗೊಳಿಸುತ್ತದೆ. ಹಾಸ್ಯಮಯವಾದರೂ ಸಹ ಹೃದಯಸ್ಪರ್ಶಿ ನಿರೂಪಣಾ ಶೈಲಿಯನ್ನು ಹೊಂದಿರುವ ಈ ಚಿತ್ರವು, ಜನರ ಜೀವನದ ಮತ್ತು ಸಂಬಂಧಗಳ ಗೊಂದಲಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಚಿತ್ರತಂಡ ತಿಳಿಸಿದೆ.
‘ಮೆಟ್ರೋ…ಇನ್ ದಿನೋ’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಕೊಂಕಣಾ ಸೇನ್‌ಶರ್ಮಾ, ಅಲಿ ಫಜಲ್, ಫಾತಿಮಾ ಸನಾ ಶೇಖ್, ಅನುಪಮ್ ಖೇರ್, ಮತ್ತು ನೀನಾ ಗುಪ್ತಾ ಸೇರಿದಂತೆ ತಾರಾಗಣವಿದೆ. ಈ ಚಿತ್ರವು ಜುಲೈ 4ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.