Cini NewsSandalwood

ಇದೇ 31ರಂದು “ಕಾಡುಮಳೆ” ರಿಲೀಸ್…ಈಗ ಟ್ರೈಲರ್ ಸದ್ದು.

Spread the love

COSMOS MOVIES ನಿರ್ಮಾಣದ, ಸಮರ್ಥ ನಿರ್ದೇಶನದ ಹಾಗೂ ನಟ ಅರ್ಥ, ನಟಿ ಸಂಗೀತ ಅಭಿನಯದ “ಕಾಡುಮಳೆ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೊಟ್ಟ ಮೊದಲ ಬಾರಿಗೆ ಭಾರತೀಯ ಸಿನಿಮಾಗಳ‌ ಹಿಸ್ಟರಿಯಲ್ಲಿ Brain Scamming ನ‌ ಪ್ರಯತ್ನ ಆಗಿರೋದು ಇದೇ ಮೊದಲು. ದಟ್ಟ ಕಾಡು ಹಚ್ಚ-ಹಸಿರಿನ ವಾತಾವರಣದ ಮಧ್ಯೆ ಭ್ರಮೆ ಮತ್ತು ವಾಸ್ತವದ ಹೋರಾಟವೇ ಈ ಕಾಡುಮಳೆ. ಚಿತ್ರದ ತುಣುಕುಗಳನ್ನು ನೋಡಿ ಮೆಚ್ಚಿ, ಕೆ ಆರ್ ಜಿ(KRG) ಸಂಸ್ಥೆ ಸಿನಿಮಾದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ತೆಗೆದುಕೊಂಡಿದೆ.

ಈ ಬಗ್ಗೆ ಕಾಡುಮಳೆ ಚಿತ್ರದ ನಿರ್ದೇಶಕರು ಸಮರ್ಥ ಮಾತನಾಡಿ, ಸಿನಿಮಾ ಗೆಲ್ಲೋಕೆ ಒಂದೊಳ್ಳೆ ಕಥೆ ಇರ್ಬೇಕು ಅಂತಹದ್ದೆ ಕಥೆಯನ್ನು ಆಯ್ಕೆ ಮಾಡಿಕೊಂಡು ಕಾಡುಮಳೆ ಸಿನಿಮಾ ಮಾಡಿದ್ದೀನಿ. ಈ‌ ಪ್ರಕೃತಿಯಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವೇ ಇರಲ್ಲ, ಅದರಲ್ಲಿ ಒಂದು ಪ್ರಶ್ನೆಯೇ ಈ ‘ಕಾಡುಮಳೆ’.

ಈ ಭೂಮಿ ಮೇಲೆ ಖಂಡಗಳು, ಸಮುದ್ರಗಳು, ಸ್ವರಗಳು, ವಾರ, ಎಲ್ಲವೂ 7(ಏಳು) ಇದನ್ನೆ ಆಧಾರವಾಗಿಟ್ಟುಕೊಂಡು ಮಾಡಿರೋ ಕಾಡುಮಳೆ. ನಮ್ಮ ಸಿನಿಮಾದ ಸಬ್ ಟೈಟಲ್ ಬ್ರೈನ್ ಸ್ಕ್ಯಾಮಿಂಗ್(BRAIN SCAMMING), ಯಾಕಂದ್ರೆ ಟೈಟಲ್ ಹೇಳುವಂತೆ ಕಾಡು ಅಂದ್ರೆ ಭ್ರಮೆ, ಮಳೆ ಅಂದ್ರೆ ರಿಯಾಲಿಟಿ. ಭ್ರಮೆ ಮತ್ತು ವಾಸ್ತವವನ್ನು ಅರ್ಥಮಾಡಿಕೊಳ್ಳೋಕಾಗದ ಸ್ಥಿತಿಯೇ ಬ್ರೈನ್ ಸ್ಕ್ಯಾಮಿಂಗ್.

ಇನ್ನು ಮೊದಲ ಬಾರಿಗೆ ಕಾಡುಮಳೆ ಮೂಲಕ ನಾಯಕನಟನಾಗಿ ಮಿಂಚಲಿರುವ ನಟ ಹರ್ಷನ್(ಅರ್ಥ) ಮಾತನಾಡಿ, ಕಾಡುಮಳೆ ನನ್ನ ಮೊದಲನೇ ಸಿನಿಮಾ. ಕಾಡುಮಳೆ ಇದು ಬರೀ ಸಿನಿಮಾವಲ್ಲ ಇದೊಂದು ಅದ್ಭುತ ಅನುಭವ. ನನ್ನ ಪಾತ್ರ ಆಧ್ಯಾತ್ಮ ಮತ್ತು ವಿಜ್ಞಾನ ಎರಡರ ಬಗ್ಗೆಯೂ ತಿಳಿದವನಾಗಿರುತ್ತಾನೆ ಹಾಗಾಗಿ ಪಾತ್ರಕ್ಕಾಗಿ ತುಂಬಾ ತಯ್ಯಾರಿ ಮಾಡಿಕೊಂಡಿದ್ದೆ.

ಶೂಟಿಂಗ್ ಸಂದರ್ಭದಲ್ಲಿ ಆ ದಟ್ಟವಾದ ಕಾಡಿನ ವಾತಾವರಣದಲ್ಲಿ ಶೂಟ್ ಮಾಡೋದೆ ದೊಡ್ಡ ಚಾಲೆಂಜಿಂಗ್ ಆಗಿತ್ತು. ಕನ್ನಡದಲ್ಲಿ ಈ ರೀತಿ ಪ್ರಯತ್ನಗಳು ಮೊದಲು. ಈ ಸಿನಿಮಾದ ಭಾಗವಾಗಿದ್ದೇನೆ ಅನ್ನೋದೆ ಖುಷಿ. ನಮ್ಮ ಜನ ನಮ್ಮ ಕೈ ಹಿಡಿತಾರೆ ಅನ್ನೋ ನಂಬಿಕೆ ನನ್ನಲ್ಲಿ ಹೆಚ್ಚಾಗಿದೆ ಎಂದು ನಟ ಹರ್ಷನ್ ಹೇಳಿದ್ದಾರೆ.

ರಾಜು ಎನ್ ಎಮ್ ಅವರ ಛಾಯಾಗ್ರಹಣ, ಮಹಾರಾಜ ಅವರ ಸಂಗೀತ ಚಿತ್ರಕ್ಕಿದೆ. ಇನ್ನೂ ಕಾಡುಮಳೆ ಇದೇ ಜನವರಿ 31ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.

Visited 1 times, 1 visit(s) today
error: Content is protected !!