Cini NewsSandalwood

“ಶುಗರ್ ಫ್ಯಾಕ್ಟರಿ” ಟ್ರೈಲರ್ ಭರ್ಜರಿ ಸದ್ದು

Spread the love

ಸ್ಯಾಂಡಲ್ ವುಡ್ ನಲ್ಲಿ ಪ್ರೀತಿ , ಪ್ರೇಮದ ಚಿತ್ರಗಳು ಸಿನಿಪ್ರಿಯರನ್ನ ಬಹಳ ಬೇಗ ಆಕರ್ಷಿಸುತ್ತದೆ. ಆ ಸಾಲಿನಲ್ಲಿ ಇಲ್ಲೊಂದು ತ್ರಿಕೋನ ಪ್ರೇಮ ಕಥೆಯ ಚಿತ್ರದ ಟ್ರೈಲರ್ ಬಿಡುಗಡೆಗೊಂಡು ವೈರಲ್ ಆಗಿದೆ. ಈ ಹಿಂದೆ ಮನಸಾಲಜಿ ನಿರ್ದೇಶಿಸಿದ್ದ ದೀಪಕ್‌ ಅರಸ್ ಮತ್ತೊಂದು ಯೂಥ್ ಫುಲ್ ಎಂಟರ್‌ಟೈನರ್ “ಶುಗರ್ ಫ್ಯಾಕ್ಟರಿ” ಸಾರಥ್ಯ ವಹಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಲವ್‌ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದು, ಈ ತ್ರಿಕೋನ ಪ್ರೇಮಕಥೆಯಲ್ಲಿ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಒಂದು ಚಿತ್ರವನ್ನು ಅದ್ದೂರಿಯಾಗಿ ದೊಡ್ಡ ಬಜೆಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ.

ಗೋವಾ, ಬೆಂಗಳೂರು, ಮೈಸೂರು ಹಾಗೂ ಕಝುಕಿಸ್ಥಾನದಲ್ಲಿ ಒಂದು ಹಾಡು ಹಾಗೂ ಮಾಂಟೇಜ್ ಸೇರಿ ಒಟ್ಟು 64 ದಿನಗಳವರೆಗೆ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್. ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಬಹಳಷ್ಟು ಕುತೂಹಲ ಹುಟ್ಟುಹಾಕಿದೆ.


ಈ ತ್ರಿಕೋನ ಪ್ರೇಮ ಕಥೆಯ ಶುಗರ್ ಫ್ಯಾಕ್ಟರಿ ಚಿತ್ರವು ಪ್ರಸ್ತುತ ಯಂಗ್ ಜನರೇಶನ್‌ ಗೆ ಹೇಳಿ ಮಾಡಿಸಿದಂಥ ಚಿತ್ರವಾಗಿದೆ. ಈಗಿನ ಟೆಂಡ್‌ಗೆ ತಕ್ಕಂತೆ ಚಿತ್ರವನ್ನು ಹೇಳಿಕೊಂಡು ಹೋಗಿದ್ದೇವೆ, ಒಂದು ಪಬ್ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಅದರಲ್ಲಿ ಬರುವ ಅನೇಕ ಪಾತ್ರಗಳು ಮುಂದೆ ನಡೆಯುವ ಕಥೆಯಲ್ಲಿ ಟ್ವಿಸ್ಟ್ ನೀಡುತ್ತಾ ಸಾಗುತ್ತವೆ, ಕೊನೆಯಲ್ಲಿ ಅದ್ಭುತವಾದ ಟ್ವಿಸ್ಟ್ ಇಟ್ಟಿದ್ದೇವೆ, ಚಿತ್ರದಲ್ಲಿ ಎಲ್ಲಾ ರೀತಿಯ ಕಮರ್ಷಿಯಲ್ ಎಲಿಮೆಂಟ್ಸ್ ಇದ್ದು, ಕಥೆ ಏನು ಡಿಮ್ಯಾಂಡ್ ಮಾಡುತ್ತೋ ಅದನ್ನೆಲ್ಲ ಕೊಟ್ಟಿದ್ದೇವೆ.

ಒಂದು ಬಾಲಿವುಡ್ ಸಿನಿಮಾ ನೋಡುತ್ತಿರುವ ಫೀಲ್‌ನ್ನು ಶುಗರ್ ಫ್ಯಾಕ್ಟರಿ ನೀಡುತ್ತದೆ, ಲವ್‌ಸ್ಟೋರಿಯಲ್ಲಿ ವಿಭಿನ್ನವಾದ ಮೇಕಿಂಗ್ ಕೊಡಲು ಪ್ರಯತ್ನಿಸಿದ್ದೇವೆ. ಕಾಸ್ಟೂಮ್ಸ್, ಮೇಕಿಂಗ್‌ನಿಂದ ಹಿಡಿದು ಎಲ್ಲದರಲ್ಲೂ ಹೊಸತನ ಎದ್ದು ಕಾಣುತ್ತದೆ. ಈಗ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಚಿತ್ರದ ಒಂದು ಝಲಕ್ ಮಾತ್ರ ತೋರಿಸಿದ್ದೇವೆ.

ಇಡೀ ಚಿತ್ರದಲ್ಲಿ ಮನರಂಜನೆಯ ಮಹಾಪೂರವೇ ಇದೆ. ನಿರ್ಮಾಪಕ ಗಿರೀಶ್ ಅವರು ನನಗೆ ಸ್ನೇಹಿತರು, ಈ ಹಿಂದೆ ಮಠಾಶ್ ಎಂಬ ಚಿತ್ರ ನಿರ್ಮಿಸಿದ್ದರು. ಚಿತ್ರದ ಕ್ವಾಲಿಟಿಗೆ ಏನು ಬೇಕೋ ಅದನ್ನು ಧಾರಾಳವಾಗಿ ಕೊಟ್ಟಿದ್ದಾರೆ. ಇದೊಂದು ಪಬ್ ಕಲ್ಚರ್ ಸಿನಿಮಾ, ಮನೋರಂಜನೆ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿ ಒಳಗೊಂಡಿದೆ ಎಂದಿದ್ದಾರೆ ನಿರ್ದೇಶಕ ದೀಪಕ್ ಅರಸ್.

ಇನ್ನು ಈ ಚಿತ್ರಕ್ಕೆ ಕಬೀರ್ ರಫಿ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದ್ದು, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಚೇತನ್‌ಕುಮಾರ್, ಚಂದನ್ ಶೆಟ್ಟಿ, ಅರಸು ಅಂತಾರೆ, ರಾಘವೇಂದ್ರ ಕಾಮತ್, ಗೌಸ್‌ಪೀರ್ ಹಾಡುಗಳನ್ನು ರಚಿಸಿದ್ದಾರೆ. ಯೋಗಾನಂದ್ ಹಾಗೂ ಚೇತನ್‌ಕುಮಾರ್ ಸಂಭಾಷಣೆ ಹೆಣೆದಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಶುಗರ್ ಫ್ಯಾಕ್ಟರಿ ಟ್ರೈಲರ್ ಬಾರಿ ವೈರಲ್ ಆಗಿದ್ದು, ಮುಂದಿನ ದಿನಗಳಲ್ಲಿ ತಂಡ ಹೆಚ್ಚಿನ ಮಾಹಿತಿಯನ್ನು ನೀಡಲಿದೆ.

 

Visited 1 times, 1 visit(s) today
error: Content is protected !!