Cini NewsSandalwood

ಸೆಪ್ಟೆಂಬರ್ 2 ಕಿಚ್ಚನ ಬರ್ತಡೇಗೆ ಬಿಗ್ ಅನೌನ್ಸ್ಮೆಂಟ್.

Spread the love

ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ರವರ ಹುಟ್ಟುಹಬ್ಬ ಸೆಪ್ಟೆಂಬರ್ 2 ಅಂದು ಅಭಿಮಾನಿಗಳಿಗಾಗಿ ಒಂದು ಬಿಗ್ ಅನೌನ್ಸ್ಮೆಂಟ್ ಹೊರಬರಲಿದೆ. ಈಗಾಗಲೇ ಹಲವು ದಿನಗಳಿಂದ ಹರಿದಾಡುತ್ತಿರುವಂತಹ ಸುದ್ದಿ ವಿಕ್ರಾಂತ್ ರೋಣ ಚಿತ್ರದ ಕಾಂಬಿನೇಷನ್ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಮತ್ತೆ ಒಂದಾಗ್ತಿದ್ದಾರೆ. ಹೌದು ಇದಕ್ಕೆ ಕಾರಣ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಜೊತೆಯಲ್ಲಿರುವ ಪೋಸ್ಟರ್.

ಸುದೀಪ್ ಹುಟ್ಟುಹಬ್ಬಕ್ಕೆ ಸಿಗುತ್ತಿರುವ ಬಿಗ್ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಸೆಪ್ಟೆಂಬರ್ 2 ರಂದು ಕಿಚ್ಚನ ಫ್ಯಾನ್ಸ್ ಸಂಭ್ರಮಿಸಲು ಸಜ್ಜಾಗಿದ್ದು, ಕಿಚ್ಚ ಸುದೀಪ್ ಗೆ ಮತ್ತೆ ಆಕ್ಷನ್ ಕಟ್ ಹೇಳಲಿರುವ ಅನೂಪ್ ನಿರ್ದೇಶನದ “ಬಿಲ್ಲ ರಂಗ ಭಾಷಾ” ಚಿತ್ರದ ಭರ್ಜರಿ ಅನೌನ್ಸ್ಮೆಂಟ್ ಹೊರಬರಲಿದೆ.

ಸುದೀಪ್ ಬರ್ತಡೇ ಗಿಫ್ಟ್ ರೂಪದಲ್ಲಿ ನೀಡುತ್ತಿರುವ ಈ ಹೊಸ ಸಿನಿಮಾ ಅನೌನ್ಸ್ಮೆಂಟ್ ಆಗಿದ್ದು , ದ ಮೆನ್ ಇನ್ ಬ್ಲಾಕ್ ವಿಲ್.. ಬೀ ರೈಟ್ ಬ್ಯಾಕ್ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಒಟ್ನಲ್ಲಿ ಅಭಿಮಾನಿಗಳ ಸಂತೋಷವನ್ನು ಹಿಮ್ಮಡಿ ಗಳಿಸುವ ದಿನ ಹತ್ತಿರ ಬಂದಿದೆ.

Visited 1 times, 1 visit(s) today
error: Content is protected !!