Cini NewsMovie Review

ಮರ್ಡರ್‌ ಮಿಸ್ಟ್ರಿಗಳ ಕಥೆ.. ವ್ಯಥೆ..4 ಎನ್ 6 (ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3/5

ಚಿತ್ರ : 4 ಎನ್ 6
ನಿರ್ದೇಶಕ : ದರ್ಶನ್ ಶ್ರೀನಿವಾಸ್
ನಿರ್ಮಾಪಕ : ಸಾಯಿಪ್ರೀತಿ
ಸಂಗೀತ : ಸಾಯಿ ಸೋಮೇಶ್
ಛಾಯಾಗ್ರಹಕ : ಚರಣ್ ತೇಜ್
ತಾರಾಗಣ : ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್ , ಆದ್ಯ ಶೇಖರ್, ಅರ್ಜುನ್, ಆಶಿತಾ ಅಲ್ವಾ, ಮುಕ್ತಿ ಅಲ್ವಾ , ಸೌರವ್, ಸತ್ಯ ಕಹಿ, ಬೇಬಿ ವಂಶಿಕಾ ಹಾಗೂ ಮುಂತಾದವರು…

ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿಯ ಕಥಾನಕದಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಬೆಸೆದುಕೊಂಡಾಗ ಹೆಚ್ಚು ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಆ ನಿಟ್ಟಿನಲ್ಲಿ ಒಂದಷ್ಟು ಕೊಲೆಗಳ ಹಿಂದಿನ ರಹಸ್ಯವನ್ನು ಭೇದಿಸಲು ಹೊರಡುವ ಪೊಲೀಸ್ ಅಧಿಕಾರಿಗಳು ಅವರಿಗೆ ಸಾತ್ ನೀಡುವ ಫೋರೆನ್ಸಿಕ್ ತಂಡ. ಇದರ ಜೊತೆಗೆ ಬಡತನದಲ್ಲೇ ಬೆಳೆದು ಬದುಕು ಕಟ್ಟಿಕೊಳ್ಳುವ ಕುಟುಂಬದ ಕಥೆ ವ್ಯಥೆ.

ಕೆಲವು ದಂದೆ ಕೋರ ಡಾಕ್ಟರ್ ಗಳ ಕರಾಳ ಮುಖಗಳ ಸುತ್ತ ಕೊಲೆಗಳ ಹಿಂದಿರುವ ರೋಚಕ ಸತ್ಯಗಳ ಅನಾವರಣ ಮಾಡಿರುವಂತಹ ಚಿತ್ರ “4 ಎನ್ 6”. ಬಾಲ್ಯದಿಂದಲೂ ಬಹಳ ಬುದ್ಧಿವಂತಿಕೆಯ ಹುಡುಗಿ ನೈಶಾ ( ರಚನಾ ಇಂದರ್). ತಾಯಿಗೆ ತನ್ನ ಮಗಳ ಜಾಣ್ಮೆಯನ್ನ ಗಮನಿಸಿ ಪೊಲೀಸ್ ಅಧಿಕಾರಿ ಆಗಬೇಕೆಂಬ ಮಹಾದಾಸೆ. ಅದರಂತೆ ನೈಶಾ ಓದಿ ಫೋರೆನ್ಸಿಕ್ ಡಿಟಿಕ್ಟಿವಾಗಿ ಪೋಲಿಸ್ ಇಲಾಖೆಯ ಜೊತೆಗೆ ಸಾತ್ ನೀಡುತ್ತಾ ಕಾರ್ಯ ನಿರ್ವಹಿಸುತ್ತಾಳೆ.

ಡಾಕ್ಟರ್ ಒಬ್ಬರ ಕೊಲೆಯ ಸುತ್ತ ಪೊಲೀಸ್ ಇನ್ಸ್ಪೆಕ್ಟರ್ ಶಿಕಾರಿದೇವಿ (ಭವಾನಿ ಶಂಕರ್) ತಮ್ಮದೇ ಸ್ಟೈಲ್ ನಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಂತೆ ಸಿಗರೇಟ್ ಸೇದುತ್ತಾ ಇನ್ವೆಸ್ಟಿಗೇಷನ್ ನಡೆಸಿದರೆ. ಮತ್ತೊಂದೆಡೆ ನೈಶಾ ತನ್ನ ಮನಸ್ಸಿನ ಆಲೋಚನೆಯ ದೃಷ್ಟಿಕೋನದೊಂದಿಗೆ ಫೋರೆನ್ಸಿಕ್ ತನಿಖಾ ವರದಿಯ ರೂಪದಲ್ಲಿ ಕೇಸ್ ಪತ್ತೆ ಹಚ್ಚುವ ಹಾದಿಯಲ್ಲಿ ಮುಂದಾಗುತ್ತಾಳೆ.

ಹೀಗೆ ಸಾಲು ಸಾಲು 3 ಕೊಲೆಯ ಕೇಸುಗಳ ಗೊಂದಲ ಮೂಡಿಸುತ್ತಾ ಸಾಗಿದರು , ಎಲ್ಲೋ ಒಂದು ಸಾಮ್ಯತೆ ಗಮನ ಸೆಳೆಯುತ್ತಾ ಹೋಗುತ್ತದೆ. ಇದರ ಹಿಂದೆ ಒಂದು ಫ್ಲಾಶ್ ಬ್ಯಾಕ್ ಕತೆಯು ತೆರೆಯುತ್ತದೆ. ತನ್ನ ಮಗನ ಕಾಯಿಲೆಯ ಗುಣಕ್ಕಾಗಿ ತಾಯಿ ಪರದಾಡುವ ಸ್ಥಿತಿಗತಿ , ಅದಕ್ಕಾಗಿ ಡಾಕ್ಟರ್ ಗಳು ಮಾಡುವ ಅವಾಂತರ, ಎಡವಟ್ಟುಗಳು ಹೀಗೆ ದುರಂತಗಳು ಎದುರಾಗುತ್ತಾ ಹೋಗುತ್ತದೆ. ಅದು ಏನು…
ಯಾಕೆ… ಕೊಲೆ ಮಾಡಿದ್ದು ಯಾರು… ಕ್ಲೈಮ್ಯಾಕ್ಸ್ ಏನು… ಎಂಬುದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು.

ನಿರ್ದೇಶಕ ದರ್ಶನ್ ಶ್ರೀನಿವಾಸ್ ಮರ್ಡರ್ ಮಿಸ್ಟ್ರಿಯ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಾನ್ಸೆಪ್ಟ್ ಆಯ್ಕೆ ಮಾಡಿಕೊಂಡಿರುವುದು ವಿಭಿನ್ನವಾಗಿದೆ. ಆದರೆ ಚಿತ್ರಕಥೆ ಶೈಲಿ ಇನ್ನಷ್ಟು ಕುತೂಹಲಕಾರಿಯಾಗಿ ಸಾಗಬಹುದಿತ್ತು. ಚಿತ್ರದ ಓಟ ಇದ್ದಲ್ಲೇ ಗಿರಿಕಿ ಹೊಡೆದಂತಿದೆ.
ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ನಿರ್ಮಾಣದ ಧೈರ್ಯ ಮೆಚ್ಚಬೇಕು.

ಚರಣ್ ತೇಜ್ ಛಾಯಾಗ್ರಹಣ, ಸಾಯಿ ಸೋಮೇಶ್ ಸಂಗೀತ ಗಮನಾರ್ಹವಾಗಿದೆ. ಇದೊಂದು ಕೊಲೆಗಳ ತನಿಖೆಯ ಸುತ್ತ ನಡೆಯುವ ಸೈಕಲಾಜಿಕಲ್ ಕಥಾಹಂದರವಿದ್ದು, ಬೆರಳೆಣಿಕೆ ಪಾತ್ರಗಳ ಸುತ್ತ ಸಾಗುವ ಕಥೆಯಲ್ಲಿ ಮುದ್ದಾಗಿ ಕಾಣುವ ರಚನಾ ಇಂದರ್ ಕೊಲೆಗಳ ಪ್ರಕರಣ ಪತ್ತೆಹಚ್ಚುವ ಫೋರೆನ್ಸಿಕ್ ಡಿಟೆಕ್ಟಿವ್ ಪಾತ್ರಕ್ಕೆ ನ್ಯಾಯ ಕೊಡುವುದಕ್ಕೆ ಶ್ರಮಪಟ್ಟಿದ್ದಾರೆ.

ಇನ್ನು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಭವಾನಿ ಶಂಕರ್ ಬೋಲ್ಡ್ , ಖದರ್ ಇನ್ವೆಸ್ಟಿಗೇಷನ್ ಹಾದಿಯಲ್ಲಿ ಸಿಗರೇಟ್ ಹೊಗೆಯ ಸುತ್ತ ಸುತ್ತಾಡಿದಂತಿದೆ. ಇನ್ನು ನವೀನ್ ಕುಮಾರ್ ಹಾಗೂ ಆದ್ಯಶೇಖರ್ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದು, ಉಳಿದಂತೆ ಅರ್ಜುನ್, ಆಶಿತಾ ಅಲ್ವಾ, ಮುಕ್ತಿ ಅಲ್ವಾ, ಆರ್ ನಿಕ್ಸಾನ್, ಪ್ರಶಾಂತ್, ಸಂಜಯ್ ನಾಯಕ್, ಸೌರವ್, ಸತ್ಯ ಕಹಿ, ಬೇಬಿ ವಂಶಿಕಾ, ಬೇಬಿ ರೇಯನ್ಸ್ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿ ಪ್ರಿಯರಿಗೆ ಬೇಗ ಇಷ್ಟವಾಗಲಿದ್ದು , ಎಲ್ಲರೂ ಒಮ್ಮೆ  ನೋಡುವಂತಿದೆ.

error: Content is protected !!