Cini NewsSandalwood

“ಶುಗರ್ ಫ್ಯಾಕ್ಟರಿ”ಯಲ್ಲಿ ಪ್ರೇಮಸ್ವರದ ‘ಜಹಾಪನಾ’ ಗಾನ

ಆರಂಭದಿಂದಲೂ ವೀಕ್ಷಕರ ಕುತೂಹಲವನ್ನು ಇಮ್ಮಡಿ ಗಳಿಸುತ್ತಾ ಬಿಡುಗಡೆ ಹಂತಕ್ಕೆ ಬಂದಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಮತ್ತೊಂದು ಬ್ಯೂಟಿಫುಲ್ ಪ್ರೇಮ ಗೀತೆ ಬಿಡುಗಡೆಯಾಗಿದೆ. ಯುವ ನಿರ್ದೇಶಕ ದೀಪಕ್ ಅರಸ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರಕ್ಕಾಗಿ ಖ್ಯಾತ ಗೀತರಚನೆಕಾರ ಜಯಂತ ಕಾಯ್ಕಿಣಿ ಬರೆದಿರುವ ‘ಜಹಾಪನಾ’… ಎಂಬ ಸುಮಧುರ ಪ್ರೇಮಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ನಿಹಾಲ್ ತಾವ್ರೊ ಹಾಗೂ ಅಮೃತಾ ನಾಯಕ್ ಅವರ ಕಂಠಸಿರಿಯಲ್ಲಿ ಈ ಹಾಡು ಸುಮಧುರವಾಗಿ ಹೊರಬಂದಿದೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ.

ಈಗಾಗಲೇ “ಶುಗರ್ ಫ್ಯಾಕ್ಟರಿ” ಚಿತ್ರದ ಟ್ರೇಲರ್ ಬಿಡುಗಡೆ ಗೊಂಡು ಎಲ್ಲೆಡೆ ವೈರಲ್ ಆಗಿ ಭರ್ಜರಿ ಸದ್ದನ್ನ ಮಾಡುತ್ತಿದೆ. ಹಂತ ಹಂತವಾಗಿ ಪ್ರಚಾರದ ಕಾರ್ಯವನ್ನು ಆರಂಭಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರ ಮುಂದಿನ ತಿಂಗಳು ನವೆಂಬರ್ 24 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇದೊಂದು ಅದ್ದೂರಿ ಬಜೆಟ್ ಚಿತ್ರವಾಗಿದ್ದು , ಚಿತ್ರತಂಡ ಈ “ಶುಗರ್ ಫ್ಯಾಕ್ಟರಿ” ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ.

ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ , ರುಹಾನಿ ಶೆಟ್ಟಿ ಕಾಣಿಸಿಕೊಂಡಿದ್ದು , ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರಂತೆ. ಇಂತಹ ಒಂದು ಅದ್ದೂರಿ ಚಿತ್ರವನ್ನ ಆರ್. ಗಿರೀಶ್ ನಿರ್ಮಿಸಿದ್ದು , ಅದ್ದೂರಿಯಾಗಿ ಚಿತ್ರವನ್ನು ತೆರೆ ಮೇಲೆ ತರಲು ಸಕಲ ಸಿದ್ಧತೆಗಳನ್ನ ಚಿತ್ರತಂಡ ಮಾಡಿಕೊಳ್ಳುತ್ತಿದೆಯಂತೆ.

error: Content is protected !!