Cini NewsSandalwood

ದಿಲೀಪ್ ಕುಮಾರ್ ಸಾರಥ್ಯದ ಐ.ಎಫ್.ಎಂ.ಎ ಸಂಸ್ಥೆಯಿಂದ ಹಲವು ಯೋಜನೆಗಳಿಗೆ ಚಾಲನೆ.

ಒಂದೇ ಸೂರಿನಡಿ ಚಿತ್ರೋದ್ಯಮಕ್ಕೂ ಸೇರಿದಂತೆ ಜನಸಾಮಾನ್ಯರಿಗೂ ಅನುಕೂಲವಾಗುವಂತಹ ಹಲವು ಯೋಜನೆಗಳಿಗೆ “ಐ.ಎಫ್.ಎಂ.ಎ” (ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್) ಜೊತೆಗೆ ಹಲವು ಸಂಸ್ಥೆಗಳು ಕೈಜೋಡಿಸಿ ದೊಡ್ಡಮಟ್ಟದ ಸಂಚಲನಕ್ಕೆ ಸಿದ್ಧವಾಗಿದೆ. ಈ ಒಂದು ’ಐಎಫ್ಎಂಎ’ ಸಂಸ್ಥೆಯ ರೂವಾರಿಯಾಗಿರುವ ಎಚ್. ಆರ್. ದಿಲೀಪ್ ಕುಮಾರ್ ಇಂಡಿಯನ್ ಫಿಲಂ makers ಅಸೋಸಿಯೇಷನ್ ಸಂಸ್ಥೆಯ ನೂತನ ಕಚೇರಿಯನ್ನು ಬೆಂಗಳೂರಿನಲ್ಲಿ ಉದ್ಗಾಟನೆ ಮತ್ತು website (www.ifma.in) ಲೋಕಾರ್ಪಣೆ ಸಮಾರಂಭವು ಅದ್ದೂರಿಯಾಗಿ ಆಯೋಜಿಸಿದ್ದು , ಈ ಒಂದು ಕಾರ್ಯಕ್ರಮಕ್ಕೆ ನವಶಕ್ತಿ ಪೀಠದ ಡಾ. ಶ್ರೀಶ್ರೀ ಭಗವಾನ್ ವಿಷ್ಣುದತ್ತ ಗುರೂಜಿ, ನಿರ್ದೇಶಕ , ಸಾಹಿತಿ ವಿ.ಮನೋಹರ್ ಹಾಗೂ ನಿರ್ದೇಶಕ , ಚಿತ್ರಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯು ಒದಗಿಸುತ್ತಿರುವ ಸೇವೆಗಳನ್ನು ಚಿತ್ರರಂಗದವರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿ. ಮನೋಹರ್ ಹಾಗೂ ಡಾ.ವಿ.ನಾಗೇಂದ್ರಪ್ರಸಾದ್ ಹೇಳುತ್ತಾ ಈ ಒಂದು ತಂಡಕ್ಕೆ ಶುಭವನ್ನು ಕೋರಿದರು.

ಚಿತ್ರೋದ್ಯಮದ ಮಂದಿಗೆ ಬಹಳಷ್ಟು ಅನುಕೂಲ ಆಗುವಂತಹ ಐಎಫ್ಎಂಎ ಸಂಸ್ಥೆಯ ಕೇಂದ್ರ ಕಚೇರಿ ತೆಲಂಗಾಣದಲ್ಲಿದ್ದು , ಇಂದು 12 ರಾಜ್ಯಗಳಲ್ಲಿ 9 ಕೇಂದ್ರಗಳು ಪ್ರಾರಂಭಗೊಂಡಿದೆ. ಇದರಲ್ಲಿ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಘರು ನೊಂದಣಿ ಮಾಡಿಸಬಹು ದಾಗಿದೆ. ಸಿನಿಮಾ ಮಾಡಲು ಮುಂದಾಗುವ ನಿರ್ಮಾಪಕರು ಗಳಿಗೆ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿಸಿ ಕೊಡಲಾಗುವುದು.

ಅದಕ್ಕೆ ಒಂದಷ್ಟು ನಿಬಂಧನೆಗಳು ಒಳಪಟ್ಟಿರುತ್ತದೆ. ಹಾಗೆಯೇ ವಾರದಲ್ಲಿ ಬಿಡುಗಡೆಯಾದ ಒಂದು ಕನ್ನಡ ಚಿತ್ರವನ್ನು ಆಯ್ಕೆ ಮಾಡಿಕೊಂಡು ಐದು ಸಾವಿರ ಟಿಕೆಟ್ ಖರೀದಿ ಮಾಡಲಾಗುತ್ತದೆ. ಓಟಿಟಿ, ಡಬ್ಬಿಂಗ್, ಆಡಿಯೋ, ವಿತರಣೆ ಇನ್ನು ಮುಂತಾದ ಸೇವೆಗಳನ್ನು ನೀಡಲಾಗಿ ನಿರ್ಮಾಪಕರಿಗೆ ಆಸರೆಯಾಗಿ ನಿಲ್ಲುತ್ತದೆ. ಅಮೆಜಾನ್ ಪ್ರೈಮ್, Netflix ಅಧಿಕಾರಿಗಳೊಂದಿಗೆ ನಿರ್ಮಾಪಕರನ್ನು ಭೇಟಿ ಮಾಡಿಸಿ ವ್ಯವಹಾರ ಮಾಡಿಕೊಡಲಾಗುತ್ತದೆ. ಇದಕ್ಕೆ ಸಂಸ್ಥೆಯು ಯಾವುದೇ ರೀತಿಯ ದಲ್ಲಾಳಿ ಶುಲ್ಕ ಪಡೆಯುವುದಿಲ್ಲ.

ಅಲ್ಲದೆ ಸಂಸ್ಥೆಯು ಮೊದಲ ಪ್ರಯತ್ನ ಎನ್ನುವಂತೆ ’ವೋಲ್ಸೇಲ್ ಬ್ಯಾಸ್ಕೆಟ್ ಗ್ರೂಪ್ಸ್’ ಸಹಭಾಗಿತ್ವದೊಂದಿಗೆ ’ಶ್ರೀ ಮೂಕಾಂಬಿಕಾ ರೇಷನ್ ಕಿಟ್’ ಹಾಗೂ ’ಶ್ರೀ ಸ್ಟಾರ್ ಗೋಲ್ಡ್’ ಅಡಿಯಲ್ಲಿ ಕಲಾವಿದರು, ತಂತ್ರಜ್ಘರಿಗೆ ಅತಿ ಕಡಿಮೆ ಬೆಲೆಯಲ್ಲಿ ದಿನಸಿ ಸಾಮಾನುಗಳನ್ನು ಉಚಿತವಾಗಿ ಸರಬರಾಜು ಮಾಡಲು ಯೋಜನೆ ರೂಪಿಸಿಕೊಂಡಿದೆ. ರೈತರಿಂದ ನೇರವಾಗಿ ಪಡೆದು ಜನಸಾಮಾನ್ಯರಿಗೂ ಕೂಡ ಸೂಕ್ತ ಬೆಲೆಯ ಜೊತೆಗೆ ಗುಣಮಟ್ಟದ ವಸ್ತುಗಳನ್ನು ತಲುಪಿಸುವ ಹಾದಿಯಲ್ಲಿ ಹಲವು ಶಾಖೆಗಳನ್ನು ತೆರೆಯುತ್ತಿದ್ದೇವೆ ಎಂದು ’ಐಎಫ್ಎಂಎ’ ಸಂಸ್ಥೆಯ ರೂವಾರಿಯಾಗಿರುವ ಎಚ್. ಆರ್. ದಿಲೀಪ್ ಕುಮಾರ್ ಮಾಹಿತಿಯನ್ನು ನೀಡಿದರು.

ಇನ್ನು ಈ ಒಂದು ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಬುಕ್ಕಾಪಟ್ಟಣ ವಾಸು, ಮಾ.ಚಂದ್ರು, ಸೋಷಿಯಲ್ ಮೀಡಿಯಾ ಅಧ್ಯಕ್ಷರು , ನಿರ್ಮಾಪಕರು , ನಿರ್ದೇಶಕರು ಹಾಜರಿದ್ದರು ಈ ಒಂದು ಸಂಸ್ಥೆಯ ಜೊತೆಗೆ ಒಡನಾಟ ಇಟ್ಟುಕೊಂಡವರು ತಮ್ಮ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಬಂದಂತಹ ಅತಿಥಿಗಳು ಈ ಒಂದು ಸಂಸ್ಥೆಗೆ ಶುಭವನ್ನು ಹಾರೈಸಿದರು. ಒಟ್ಟಾರೆ ಒಂದು ಉತ್ತಮ ಸದ್ದುದೇಶದೊಂದಿಗೆ ಆರಂಭಗೊಂಡಿರುವ ಈ ಸಂಸ್ಥೆಯ ಕಾರ್ಯವೈಖರಿ ಯೋಜನೆಯನ್ನು ಹಲವು ಅಂಗ ಸಂಸ್ಥೆಗಳು ಕೈಜೋಡಿಸಿದ್ದು , ಇದರ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂಬುದು ಸಂಸ್ಥೆಯ ಉದ್ದೇಶವಾಗಿದೆ.

error: Content is protected !!