Cinisuddi Fresh Cini News Tv / Serial 

ಜೀ ಪಿಚ್ಚರ್ ನಲ್ಲಿ 12 ದಿನಗಳ 12 ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್ ಸಿನಿಮಾಗಳು

ಕನ್ನಡ ಚಲನಚಿತ್ರ ಪ್ರೇಮಿಗಳ ಹೃದಯ ಗೆಲ್ಲುವ ಪ್ರಯತ್ನದಲ್ಲಿ ಮತ್ತು ಸರಿಸಾಟಿ ಇಲ್ಲದ ಚಲನಚಿತ್ರ ವೀಕ್ಷಣೆಯ ಅನುಭವದ ಭರವಸೆಯಲ್ಲಿ ಜೀóಲ್‍ನ ಹೊಸ ಮೂವಿ ಚಾನಲ್, ಜೀó ಪಿಚ್ಚರ್ ಮಾರ್ಚ್ 1ರಿಂದ ಪ್ರಸಾರವಾಗುತ್ತಿದ್ದು, ತನ್ನ ವೀಕ್ಷಕರಿಗೆ `ಹಿಟ್ ದಿನದ ಫೀಲಿಂಗ್ ನೀಡುತ್ತಿದೆ.

ಕನ್ನಡದ ಜನಪ್ರಿಯ ಚಲನಚಿತ್ರಗಳಿಗೆ ಖ್ಯಾತಿ ಪಡೆದಿರೋ ಜೀó ಪಿಚ್ಚರ್, 350ಕ್ಕೂ ಹೆಚ್ಚು ಸಿನಿಮಾಗಳ ಸಂಗ್ರಹ ಹೊಂದಿದೆ. ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್‍ಗೆ ಪರ್ಯಾಯ ಹೆಸರಾಗಿದೆ. ಮೊದಲ ತಿಂಗಳು 12 ದಿನಗಳಲ್ಲೇ 12 ಸಿನಿಮಾಗಳನ್ನೂ ಪ್ರೀಮಿಯರ್ ಮಾಡುವ ಮೂಲಕ, ಜೀó ಪಿಚ್ಚರ್ ಮನೆಯಲ್ಲಿ ಸಿನಿಮಾ ವೀಕ್ಷಣೆಯ ಅನುಭವವನ್ನು ಮರು ವ್ಯಾಖ್ಯಾನಿಸಲಿದೆ. ಮಾರ್ಚ್ 14ರಿಂದ ಜೀó ಪಿಚ್ಚರ್ ಪ್ರತಿನಿತ್ಯ ಸಂಜೆ 7 ಗಂಟೆಗೆ ಒಂದು ಹೊಸ ಸಿನಿಮಾ ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡ್ತಿದೆ; ಇದು ಮಾರ್ಚ್ 25ರವರೆಗೆ ಮುಂದುವರೆಯಲಿದೆ.

ಈ ಚಲನಚಿತ್ರಗಳು ವಿಭಿನ್ನ, ವಿಶಿಷ್ಟ ಹಾಗೂ ಅಪರೂಪದ ಅನುಭವವನ್ನ ನೀಡುತ್ತಿದೆ. ಮೊದಲ ಬಾರಿಗೆ ಜೀó ಪಿಚ್ಚರ್ ನಲ್ಲಿ ಪ್ರಸಾರವಾಗುತ್ತಿರೋ, ಥ್ರಿಲ್ಲರ್, ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಮತ್ತು ರೊಮ್ಯಾಂಟಿಕ್ ಸಿನಿಮಾಗಳು, ವೀಕ್ಷಕರಿಗೆ ಅವರ ಪ್ರತಿನಿತ್ಯದ ಸವಾಲುಗಳನ್ನು ಎದುರಿಸಲು ಸ್ಫೂರ್ತಿಯಾಗ್ತಿವೆ. ಅವರ ಪ್ರತಿನಿತ್ಯದ ಜೀವನವನ್ನು ಹಿಟ್ ಆಗಿಸುತ್ತಿವೆ.

ಈ ಹೊಸ ಸಿನಿಮಾ ಚಾನಲ್ ತನ್ನ ಲಾಂಚ್‍ನಲ್ಲಿ, ತನ್ನ ಬ್ರ್ಯಾಡಿಂಗ್ ಒಂದು ಟ್ಯಾಗ್ ಲೈನ್ ಅನ್ನೋ ಪ್ರಚಾರಕ್ಕಾಗಿ ಬಳಿಸಿಕೊಂಡಿದೆ. ಅದುವೆ `ಹಿಟ್ ದಿನದ ಫೀಲಿಂಗ್. ಈ ಹಿಟ್ ಅನುಭವವನ್ನು ನೀಡುವ ವಿಶಿಷ್ಟ ಬ್ರಾಂಡ್ ಫಿಲ್ಮಂಗಳನ್ನೂ ಕೂಡ ಈ ಚಾನಲ್‍ನಲ್ಲಿ ರಿಲೀಸ್ ಮಾಡಿದೆ. ಕನ್ನಡಿಗರ ಪ್ರತಿನಿತ್ಯದ ಅನುಭವಗಳನ್ನು ಮನಸ್ಸಿನಲ್ಲಿರಿಸಿಕೊಂಡ ತಯಾರಾಗಿರೋ ಈ ಎರಡು ಬ್ರಾಂಡ್ ಫಿಲ್ಮಂಗಳು(ಜಾಹೀರಾತುಗಳು)ಕನ್ನಡಿಗರ ಪ್ರೀತಿ ಮತ್ತು ಬಯಕೆಗಳನ್ನು ಅನಾವರಣಗೊಳಿಸಿವೆ. ಮೊದಲ ಬ್ರ್ಯಾಂಡ್ ಫಿಲ್ಮಂ ನಲ್ಲಿ ವೃದ್ಧ ದಂಪತಿಗಳ ನಡುವಿನ ಸಹಜ ಪ್ರೀತಿಯನ್ನು ಚಿತ್ರಿಸಲಾಗಿದೆ.

ಈ ಬ್ರಾಂಡ್ ಫಿಲ್ಮಂನ ಮೂಲಕ ಜೀó ಪಿಚ್ಚರ್‍ನಲ್ಲಿ ಕನ್ನಡದ ಅಪರೂಪದ ರೊಮ್ಯಾಂಟಿಕ್ ಹಾಗೂ ಫ್ಯಾಮಿಲಿ ಎಂಟರ್‍ಟೈನಿಂಗ್ ಸಿನಿಮಾಗಳು ಪ್ರಸಾರವಾಗಲಿವೆ, ಈ ಮೂಲಕ ಪಿಚ್ಚರ್ ನೋಡುವವರ ದಿನವನ್ನ ಹಿಟ್ ಮಾಡಲಿವೆ ಅನ್ನೋ ಸಂದೇಶ ನೀಡಲಾಗಿದೆ. ಇನ್ನೂ ಎರಡನೇ ಬ್ರಾಂಡ್ ಫಿಲಂನಲ್ಲಿ (hಣಣಠಿs://ಥಿouಣu.be/q2Sqಚಿಐಇ-ಟಚಿಂ) ಕರ್ತವ್ಯ ನಿರತ ಪೆÇಲೀಸ್ ಅಧಿಕಾರಿಗೆ ಲಂಚ ನೀಡಲು ಬರುವ ಹುಡುಗರಿಗೆ, ಫಿಲ್ಮಿ ಸ್ಟೈಲ್‍ನಲ್ಲಿ ಹೇಗೆ ಪೆÇಲೀಸ್ ಅಧಿಕಾರಿ ಉತ್ತರಿಸ್ತಾನೆ, ಅನ್ನೋದನ್ನ ತೋರಿಸಲಾಗಿದೆ.

ಈ ಮೂಲಕ ಪವರ್‍ಫುಲ್ ಡೈಲಾಗ್‍ಗಳು, ಪಂಚಿಂಗ್ ಸೀನ್‍ಗಳಿರೋ ಬ್ಲಾಕ್ ಬಸ್ಟರ್ ಸಿನಿಮಾಗಳನ್ನ, ಜೀ ಪಿಚ್ಚರ್‍ನಲ್ಲಿ ನೋಡುವ ವೀಕ್ಷಕರ ದಿನ ಕೂಡ ಫಿಲ್ಮಿಂ ಆಗಿರುತ್ತೆ ಅನ್ನೋ ಸಂದೇಶ ನೀಡಲಾಗಿದೆ. ಜೀó ಪಿಚ್ಚರ್ ಮುಂಚೂಣಿಯ ಡಿಟಿಎಚ್ ಆಪರೇಟರ್‍ಗಳಲ್ಲಿ ಕೂಡಾ ಲಭ್ಯವಿದ್ದು ಟಾಟಾ ಸ್ಕೈ, ಏರ್‍ಟೆಲ್ ಡಿಟಿಎಚ್, ಡಿಶ್ ಟಿವಿ, ಡಿ2ಎಚ್ ಮತ್ತಿತರೆ ಕೇಬಲ್ ಆಪರೇಟರ್‍ಗಳಲ್ಲಿ ದೊರೆಯುತ್ತದೆ.

ಮುಂಬರುವ ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್‍ಗಳು:

ಮಾರ್ಚ್ 19- ಜಾಲಿ ಬಾರು ಮತ್ತು ಪೋಲಿ ಹುಡುಗರು:
ಕಾರಂಜಿ ಶ್ರೀಧರ್ ಅವರ ನಿರ್ದೇಶನ ಮತ್ತು ನಿರ್ಮಾಣದ ಈ ಚಲನಚಿತ್ರದಲ್ಲಿ ಬಹಳ ಪ್ರೀತಿಯಿಂದ ಬೆಳೆದ ಹುಡುಗ ಸಂತುವಿನ ಜೀವನವನ್ನು ಆಧರಿಸಿದ್ದು ಈ ಪಾತ್ರದಲ್ಲಿ ಡಾಲಿರ್ಂಗ್ ಕೃಷ್ಣ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಂತೂ ಶ್ರೀಮಂತ ಬಡ್ಡಿ ವ್ಯಾಪಾರಿ ತಾಯಿಯ ಮಗನಾಗಿದ್ದು, ಆಕೆಯ ಕನಸು ಈತನನ್ನು ಶಾಸಕನನ್ನಾಗಿ ನೋಡುವುದು. ಅವನು ಅವನ ತಾಯಿಯಿಂದ ಸಾಲ ಪಡೆದು, ಬಡ ಹೆಣ್ಣು ಗೌರಿ ಪಾತ್ರದ ಮಾನಸಿಯನ್ನು ಭೇಟಿಯಾದಾಗ, ಅವನ ಜೀವನ ಬದಲಾಗುತ್ತದೆ. ತಾಯಿಯ ಮುದ್ದಿನ ಮಗನಿಗೆ ಏನಾಗುತ್ತದೆ ಎನ್ನುವುದು ಈ ಚಿತ್ರದ ಮುಖ್ಯ ಕಥೆಯಾಗಿದೆ.

ಮಾರ್ಚ್ 20, ಒಂದ್ ಕಥೆ ಹೇಳ್ಲಾ:

ವೀಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವ ಹಾರರ್ ಥ್ರಿಲ್ಲರ್ ಈ ಒಂದ್ ಕಥೆ ಹೇಳ್ಲಾ ಚಿತ್ರ. ಬೆಂಗಳೂರಿನ ಐವರು ಮಿತ್ರರು ವೀಕೆಂಡ್‍ನಲ್ಲಿ ಎಂಜಾಯ್ ಮಾಡಲು ಒಂದು ತಾಣಕ್ಕೆ ತೆರಳುತ್ತಾರೆ. ಅವರ ಪ್ರಯಾಣದಲ್ಲಿ ಪ್ರತಿಯೊಬ್ಬರೂ ಒಂದು ಹಾರರ್ ಕಥೆಯನ್ನು ಹೇಳುತ್ತಿರುತ್ತಾರೆ.ಅವರು ಹೇಳುವ ಅಂತಹುದೇ ಒಂದು ಭಯ ಹುಟ್ಟಿಸುವ ಮನೆಯಲ್ಲಿ ಸೇರಿಕೊಳ್ಳುತ್ತಾರೆ, ಅಲ್ಲಿ ಅವರು ಕಥೆಗಳು ಮುಂದುವರಿಯುತ್ತವೆ. ನಿರ್ದೇಶಕ ಗಿರೀಶ್ ಜಿ. ಹಾರರ್ ಕಥೆಗಳ ಗುಚ್ಛ ಸೃಷ್ಟಿಸಿದ್ದು ಈ ಪರಿಕಲ್ಪನೆ ಸ್ಯಾಂಡಲ್‍ವುಡ್‍ನಲ್ಲಿ ಹೊಚ್ಚಹೊಸದು.

ಮಾರ್ಚ್ 21, ಕಾಳಿದಾಸ ಕನ್ನಡ ಮೇಷ್ಟ್ರು:

ಕವಿರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾದಲ್ಲಿ ಜಗ್ಗೇಶ್ ಹಾಗೂ ಮೇಘನಾ ಗೌಂಕರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹಾಸ್ಯದ ಸೆಲೆಯೊಂದಿಗೇ ಗಂಭೀರವಾದ ವಿಷಯ ಒಂದನ್ನ ಜನರಿಗೆ ತಲುಪಿಸುತ್ತಿದೆ. ಈ ಚಿತ್ರದಲ್ಲಿ ಮಧ್ಯಮ ವರ್ಗದ ಕಾಳಿದಾಸ(ಜಗ್ಗೇಶ್) ಸರ್ಕಾರಿ ಶಾಲೆಯಲ್ಲಿ ಕನ್ನಡ ಮೇಷ್ಟ್ರಾಗಿ ಕೆಲಸ ಮಾಡುತ್ತಿರುತ್ತಾರೆ. ಅವರು ತಮ್ಮ ದುರ್ಬಲ ಇಂಗ್ಲಿಷ್ ಭಾಷೆಯಿಂದ ತನ್ನ ಶ್ರೀಮಂತ ಪತ್ನಿಯಿಂದ ಅವಮಾನಕ್ಕೆ ಒಳಗಾಗುತ್ತಾನೆ. ಭ್ರಷ್ಟ ಸರ್ಕಾರ, ಸರ್ಕಾರಿ ಶಾಲೆಯನ್ನು ಮುಚ್ಚಲು ನಿರ್ಧರಿಸಿದಾಗ, ಕಾಳಿದಾಸ ಹೇಗೆ ಅನ್ಯಾಯದ ವಿರುದ್ಧ ಹೋರಾಡುತ್ತಾನೆ ಎನ್ನುವುದು ಚಿತ್ರದ ಕಥೆ.

ಜೀó ಪಿಚ್ಚರ್‍ನಲ್ಲಿ ಅತ್ಯಂತ ದೊಡ್ಡ ಸೂಪರ್ ಸ್ಟಾರ್‍ಗಳು ಮತ್ತು ಅವರ ಸೂಪರ್ ಹಿಟ್ ಚಿತ್ರಗಳ ಮೂಲಕ ಮನರಂಜನೆ ಪಡೆಯುವ ಮೂಲಕ `ಹಿಟ್ ದಿನದ ಫೀಲಿಂಗ್’ ಪಡೆಯಿರಿ. ಜೀó ಪಿಚ್ಚರ್‍ನಲ್ಲಿ ಸಂಜೆ 7.00ಕ್ಕೆ ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್‍ಗಳನ್ನು ಮಿಸ್‍ಮಾಡ್ಬೇಡಿ.

Share This With Your Friends

Related posts