Cinisuddi Fresh Cini News 

“ಯುವರತ್ನ”ನ ಆಗಮನಕ್ಕೆ ಅಭಿಮಾನಿಗಳ ಕಾತರ, ಏ.1 ರಿಂದ ಅಪ್ಪು ಆರ್ಭಟ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ, ಅದ್ದೂರಿ ತಾರಾಬಳಗದ “ಯುವರತ್ನ” ಚಿತ್ರ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ. ಕಾರ್ತಿಕ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಂತೋಷ್ ಆನಂದರಾಮ್ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ‌ ಚಿತ್ರಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ. ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನ, ಚಿನ್ನಿಪ್ರಕಾಶ್, ಜಾನಿ, ಸಿರೀಶ್, ಮೋಹನ್ ನೃತ್ಯ ನಿರ್ದೇಶನ, ರಾಮ್ ಲಕ್ಷ್ಮಣ್, ಅಂಬು ಅರಿವು, ವಿಜಯ್, ದಿಲೀಪ್ ಸುಬ್ರಹ್ಮಣ್ಯಂ ಸಾಹಸ ನಿರ್ದೇಶನ, ಚಂಪಕಧಾಮ ಬಾಬು, ಕುಮಾರ್ ನಿರ್ಮಾಣ ನಿರ್ವಹಣೆ ಹಾಗೂ ಯೋಗಿ ಜಿ ರಾಜ್ , ಗಣೇಶ್ ಅವರ ವಸ್ತ್ರವಿನ್ಯಾಸ ಈ ಚಿತ್ರಕ್ಕಿದೆ.

ಪುನೀತ್ ರಾಜ್‍ಕುಮಾರ್ ಅವರಿಗೆ ನಾಯಕಿಯಾಗಿ ಸಯೀಶಾ ಅಭಿನಯಿಸಿದ್ದಾರೆ. ಪ್ರಕಾಶ್ ರಾಜ್, ಸಾಯಿಕುಮಾರ್, ಧನಂಜಯ, ದಿಗಂತ್, ಸೋನು ಗೌಡ, ವಿಶಾಲ್ ಹೆಗ್ಡೆ, ಸಾಧುಕೋಕಿಲ, ರಂಗಾಯಣ ರಘು, ಅಚ್ಯುತ ಕುಮಾರ್, ಅವಿನಾಶ್, ಸುಧಾರಾಣಿ, ಪ್ರಕಾಶ್ ಬೆಳವಾಡಿ, ತಾರಕ್ ಪೊನ್ನಪ್ಪ, ರಾಜೇಶ್ ನಟರಂಗ, ಗುರುದತ್, ಕುರಿ ಪ್ರತಾಪ್, ಹನುಮಂತೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts