Cinisuddi Fresh Cini News 

ಜಾಝ್ ಶೈಲಿಯಲ್ಲಿ ಹೊಸ ಪ್ರಯೋಗ “ವಿಂಡೋಸೀಟ್”

ಸ್ಯಾಂಡಲ್ ವುಡ್ ನಲ್ಲಿ ವಿನೂತನ ಪ್ರಯೋಗಗಳ ಮೂಲಕ ಸಿನೆಮಾಗಳು ಬರ್ತಿರೋದು ಹೊಸತಲ್ಲ. ಈ ಪ್ರಯೋಗಕ್ಕೆ ಮುಂದಾಗಿರುವ ‘ವಿಂಡೋಸೀಟ್’ ಚಿತ್ರತಂಡ ಟೈಟಲ್ ಟೀಸರ್ ಮೂಲಕ ಅಭಿಮಾನಿಗಳಲ್ಲಿ ಒಂಥರ ಥ್ರಿಲ್ ಮೂಡಿಸಿದೆ.

ಸಿನಿಮಾದ ಟೈಟಲ್ ಇಷ್ಟೊಂದು ವಿಭಿನ್ನವಾಗಿರುವಾಗ ಸಿನಿಮಾ ಹೇಗಿರಬೇಡ ಎಂಬುದು ಎಲ್ಲರ ಕುತೂಹಲ ಎಲ್ಲರಲ್ಲೂ ಇರುತ್ತೆ. ವಿಂಡೋಸೀಟ್ ಸಿನೆಮಾ ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಲೇ ಬಂದಿದೆ. ಇದೀಗ ‘ಸರೆಂಡರ್’ ಹಾಡನ್ನು ಚಿತ್ರತಂಡ ಢಿಫರೆಂಟಾಗಿ ಚಿತ್ರೀಕರಿಸಿ ಭಾರೀ ಸುದ್ದಿಯಲ್ಲಿದೆ.

ಜಾಝ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಹಾಡು ಕನ್ನಡ ಚಿತ್ರರಂಗದಲ್ಲೇ ಒಂದು ವಿನೂತನ ಹಾಗು ವಿಭಿನ್ನ ಪ್ರಯೋಗವೇ ಸರಿ. ಮಹೇಶ್ ರಘುನಂದನ್ ಸಾಹಿತ್ಯ, ಸೌಂದರ್ಯ ಜಯಚಂದ್ರನ್ ಗಾಯನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ.

ರೋಮ್ಯಾಂಟಿಕ್ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರಕ್ಕೆ ನಿರೂಪ್ ಭಂಡಾರಿ ನಾಯಕ. ಹಾಗು ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ಲೇಖಾ ನಾಯ್ಡು,  ಮಧುಸೂದನ್ ರಾವ್, ರವಿಶಂಕರ್, ಸೂರಜ್ ಒಳಗೊಂಡಂತೆ ಒಂದೊಳ್ಳೆ ಕಲಾವಿದರ ತಂಡ ‘ವಿಂಡೋಸೀಟ್’ ಚಿತ್ರಬಳಗದಲ್ಲಿದೆ.

ಕೆ ಎಸ್​​ ಕೆ ಶೋ ರೀಲ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕರಾಗಿದ್ದು,ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ. ವಿಂಡೋಸೀಟ್ ಅದ್ಭುತವಾಗಿ ಮೂಡಿ ಬರಲು ವಿಘ್ನೇಶ್ ರಾಜ್ ಕ್ಯಾಮೆರಾ ಕೈಚಳಕ , ಹಾಗು ರಿತ್ವಿಕ್ ಅವರ ಸಂಕಲನ ವರ್ಕ್ ಇದೆ. ಹಂತ ಹಂತವಾಗಿ ಸಿನಿಮಾ ಅಪ್ ಡೇಟ್ ಕೊಡುವ ಮೂಲಕ ಸಿನೆಮಾದ ಮೇಲೆ ಇಂಟ್ರಸ್ಟ್ ಹುಟ್ಟುಹಾಕಿದೆ.

ಶೀತಲ್ ಶೆಟ್ಟಿ ಸಾರಥ್ಯದ ತಂಡ ಚಿತ್ರೀಕರಣ ಹಾಗು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೂ ಸಜ್ಜಾಗಿದೆ. ಸದ್ಯದಲ್ಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದೆ.

Related posts