Cinisuddi Fresh Cini News 

ಈ ವಾರ ತೆರೆಯ ಮೇಲೆ “ವಿಂಡೋಸೀಟ್‍” ಎಂಟ್ರಿ

ಬೆಳ್ಳಿ ಪರದೆ ಮೇಲೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿರುವ “ವಿಂಡೋ ಸೀಟ್” ಚಿತ್ರ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ದೃಶ್ಯ ಮಾಧ್ಯಮದಲ್ಲಿ ನಿರೂಪಕಿಯಾಗಿದ ಶೀತಲ್ ಶೆಟ್ಟಿ ಬೆಳ್ಳಿಪರದೆಯಲ್ಲಿ ಕೂಡ ಅಭಿನಯಿಸಿದ್ದು, ಈಗ ವಿಂಡೋಸೀಟ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕಿಯಾಗಿ ಹೊರಬರುತ್ತಿದ್ದಾರೆ. ಈ ಚಿತ್ರವನ್ನು ಶಾಲಿನಿ ಆರ್ಟ್ಸ್ ಮೂಲಕ ಶಾಲಿನಿ ಮಂಜುನಾಥ್ ಅವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ನಿರೂಪ್ ಭಂಡಾರಿ ಜೊತೆಗೆ ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ.

ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ನಡೆಸಿದ್ದು, ನಿರ್ದೇಶಿಕೆ ಶೀತಲ್ ಶೆಟ್ಟಿ ಮಾತನಾಡುತ್ತಾ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಈ ಚಿತ್ರವನ್ನ ನಿರ್ದೇಶನ ಮಾಡಿದೇನೆ. ನಿರ್ಮಾಪಕ ಜಾಕ್ ಮಂಜು ಸಾರ್ , ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಸೇರಿದಂತೆ ಇಡೀ ಚಿತ್ರತಂಡ ನನಗೆ ಸಂಪೂರ್ಣ ಸಹಕಾರವನ್ನು ನೀಡಿದಕ್ಕೆ ಉತ್ತಮ ಚಿತ್ರವನ್ನು ಹೊರತರಲು ಸಾಧ್ಯವಾಯಿತು. ನಮ್ಮ ಕಿಚ್ಚ ಸುದೀಪ್ ಸಾರ್ ರಿಂದ ನಾನು ಈ ಚಿತ್ರ ಮಾಡಲು ಸಾಧ್ಯವಾಯಿತು. ನಿರ್ಮಾಪಕರನ್ನ ಪರಿಚಯಿಸಿದ್ದೆ ಅವರು, ನಾನು ಅವರಿಗೆ ಸದಾ ಚಿರಋಣಿ ಎನ್ನುತ್ತಾ ಈ ವಿಂಡೋಸೀಟ್ ಒಂದು ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮಿಸ್ಟ್ರಿ ಕಥೆ ಇರುವ ಚಿತ್ರ. ತಾಳಗುಪ್ಪದಿಂದ ಸಾಗರದವರೆಗೆ ಟ್ರೈನ್‍ ನಲ್ಲಿ ಪ್ರಯಾಣಿಸುವ ನಾಯಕನ ಜರ್ನಿಯಲ್ಲಿ ಚಿಗುರುವ ಪ್ರೀತಿ, ಜೊತೆಗೊಂದು ಮರ್ಡರ್ ಮಿಸ್ಟ್ರಿ ಈ ಚಿತ್ರದಲ್ಲಿದೆ. ನಿರೂಪ್ ಭಂಡಾರಿ ತಾಳಗುಪ್ಪದ ರಘು ಎಂಬ ಹಾಡುಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ವಿಂಡೋಸೀಟನ್ನೇ ಇಷ್ಟಪಡುವ ನಾಯಕನ ವಿಂಡೋಸೀಟ್ ವ್ಯಾಮೋಹವೇ ಆತನನ್ನು ದೊಡ್ಡ ಸಂಕಷ್ಟಕ್ಕೆ ತಳ್ಳುತ್ತದೆ. ಅದರ ಸುಳಿಯಿಂದ ರಘು ಪಾರಾಗುತ್ತಾನಾ ?, ಅಥವಾ ಕಟ್ಟುಪಾಡುಗಳಿಗೆ ಸಿಕ್ಕು ಸಂಕಷ್ಟಕ್ಕೆ ಸಿಲುಕುತ್ತಾನಾ? ಅನ್ನೋದು ವಿಂಡೋಸೀಟ್ ಚಿತ್ರದ ಮುಖ್ಯಕಥೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ , ವಿಘ್ನೇಶ್‍ರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎಲ್ಲರ ಸಹಕಾರ ನಮ್ಮ ತಂಡಕ್ಕೆ ಬೇಕು. ಈ ಚಿತ್ರವನ್ನ ನೀವೆಲ್ಲರೂ ನೋಡಿ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು. ಇನ್ನೂ ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್, ಲೇಖಾ ನಾಯ್ಡು, ಛಾಯಾಗ್ರಹಕ ವಿಘ್ನೇಶ್ ರಾಜ್, ಸಂಕಲನಕಾರ ಪ್ರದೀಪ್ ಸೇರಿದಂತೆ ಚಿತ್ರತಂಡ ಹಾಜರಿದ್ದು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಒಟ್ಟಾರೆ ಬಹಳಷ್ಟು ನಿರೀಕ್ಷೆಯೊಂದಿಗೆ ವಿಂಡೋ ಸೀಟ್ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Related posts