Cinisuddi Fresh Cini News Tollywood 

‘ಲೈಗರ್’ ಸಿನಿಮಾದ ಥೀಮ್ ಸಾಂಗ್ ರಿಲೀಸ್…ಸಖತ್ ಮಾಸಾಗಿದೆ ವಾಟ್ ಲಗಾ ದೇಂಗೆ ಸಿಂಗಿಂಗ್

ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಆಗಸ್ಟ್ 25ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಬೊಂಬಾಟ್ ಟ್ರೇಲರ್ ಮೂಲಕ ಧೂಳ್ ಎಬ್ಬಿಸ್ತಿರುವ ಲೈಗರ್ ಅಂಗಳದಿಂದ ಥೀಮ್ ಸಾಂಗ್ ರಿಲೀಸ್ ಆಗಿದೆ. ವಾಟ್ ಲಗಾ ದೇಂಗೆ ಎಂಬ ಮಾಸ್ ಹಾಡು ರಿಲೀಸ್ ಆಗಿದ್ದು, ನಾಯಕನ್ನು ವರ್ಣಿಸುವ ಹಾಡು ಇದಾಗಿದೆ. ವಿಜಯ್ ಮಾಸ್ ಡೈಲಾಗ್ ನಿಂದ ಶುರುವಾಗುವ ಸಿಂಗಿಂಗ್ ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಈ ಮೊದಲ ರಿಲೀಸ್ ಆಗಿದ್ದ ಅಕ್ಡಿ ಪಕ್ಡಿ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ರಿಲೀಸ್ ಆಗಿರುವ ಮೋಟಿವೇಷನಲ್ ಸಿಂಗಿಂಗೂ ಅದ್ಭುತ ವಿಷ್ಯೂವಲ್ ಹಾಗೂ ಮ್ಯೂಸಿಕಲ್ ಟ್ರೀಟ್ ನೀಡಿದೆ. ಪುರಿ ಜಗನ್ನಾಥ್ ನಿರ್ದೇಶನ ಲೈಗರ್ ಸಿನಿಮಾ ಮೂಲಕ ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಲೈಗರ್ ಗೆ ಜೋಡಿಯಾಗಿ ಅನನ್ಯ ಪಾಂಡೇ ನಟಿಸಿದ್ದು, ರಮ್ಯಾಕೃಷ್ಣ ವಿಜಯ್ ತಾಯಿಯಾಗಿ ಅಬ್ಬರಿಸಿದ್ದಾರೆ.

ಪುರಿ ಕನೆಕ್ಟ್ಸ್ ಹಾಗೂ ಧರ್ಮ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ಕರನ್ ಜೋಹರ್, ಪುರಿ ಜಗನ್ನಾಥ್, ಅಪೂರ್ವ ಮೆಹ್ತಾ ಲೈಗರ್ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರ ಲೈಗರ್ ಮುಂದಿನ 25ಕ್ಕೆ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.

Related posts