Cinisuddi Fresh Cini News 

ಈ ವಾರ ಪ್ರೇಕ್ಷಕರಿಗೆ ‘ವಿರುಪಾ’ ದರ್ಶನ

ಸಿಂಬಲ್, ಅಂಕಿ, ಇಂಗ್ಲೀಷ್ ಟೈಟಲ್ಗಳನ್ನಿಟ್ಟುಕೊಂಡಿರುವ ಹಲವು ಚಿತ್ರಗಳು ಸ್ಯಾಂಡಲ್ವುಡ್ಗೆ ಬಂದಿದೆ, ಈಗ ನಿರ್ದೇಶಕ ಪುನೀಕ್ಶೆಟ್ಟಿ ಅವರು ತಮ್ಮ ಚಿತ್ರದಲ್ಲಿ ಬರುವ ಮೂರು ಮುಖ್ಯ ಪಾತ್ರಗಳ ಹೆಸರಿನ ಮೊದಲ ಅಕ್ಷರಗಳನ್ನು ಆರಿಸಿಕೊಂಡು ವಿರೂಪಾ ಎಂದು ಹೆಸರಿಟ್ಟಿದ್ದು ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಚಿತ್ರ ಬಿಡುಗಡೆಯಾಗುವ ವಿಷಯವನ್ನು ತಿಳಿಸಲೆಂದೇ ಚಿತ್ರತಂಡವು ಮೊನ್ನೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ಚಿತ್ರದಲ್ಲಿ ಅಭಿನಯಿಸಿದ್ದ ಮಕ್ಕಳು ಹಾಗೂ ಚಿತ್ರತಂಡದವರು ತಮ್ಮ ಸಂತಸವನ್ನು ಹಂಚಿಕೊಂಡರು.

ವಿರುಪಾ ಚಿತ್ರವನ್ನು ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಹಂಪೆಯ ಹಿನ್ನೆಲೆಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ಶಯಾಲ್ ಗೋಮ್ಸ್ ಎಂಬ ಅಂಧ, ಚರಣ್ ಎಂಬ ಕಿವುಡ ಹಾಗೂ ಮೂಗರಾಗಿ ವಿನ್ಸೆಂಟ್, ರುಸ್ತುಂ ಪಾಕ್ಷ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಡಿಕ್ಸನ ಜಾಕಿ ಡಿಸೋಜ ಅವರ ಪುತ್ರಿ ಬೇಬಿ ಪ್ರಾಪ್ತಿ ರಿತೇಶ್ ಕೂಡ ಈ ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಂಪಿಯಲ್ಲಿ ಗೈಡ್ ಆಗಿರುವ ಮಂಜು ತನ್ನ ತಮ್ಮನಿಗೆ ಪಟ್ಟಣದಲ್ಲಿ ದೊಡ್ಡ ಮಟ್ಟದ ವಿದ್ಯಾಭ್ಯಾಸ ಕೊಡಿಸಬೇಕೆಂದು ಬಯಸಿ ಆತನನ್ನು ನಗರಕ್ಕೆ ಕಳುಹಿಸುತ್ತಾನೆ, ಆದರೆ ಅವನಿಗೆ ಸಿಟಿ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗಿ ಮತ್ತೆ ಹಂಪಿಗೆ ಬರುವಾಗ ದಾರಿಯಲ್ಲಿ ಕುರುಡನ ಪರಿಚಯವಾಗಿ ಅವನೊಂದಿಗೆ ಊರಿಗೆ ಬಂದ ನಂತರ ಏನು ಮಾಡುತ್ತಾನೆ ಎಂಬುದೇ ವಿರೂಪಾ ಚಿತ್ರದ ಒಂದು ಸಾಲು.

ಮೂಲತಃ ಸ್ಥಿರ ಛಾಯಾಗ್ರಾಹಕರಾಗಿರುವ ಪುನೀತ್ಶೆಟ್ಟಿ ಅವರೇ ಈ ಚಿತ್ರಕ್ಕೆ ಕಥೆ ಬರೆದು ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಪ್ರದೀಪ್ ಮುಳ್ಳೂರು ಸಂಗೀತ, ಅನಂತ್ರಾಜ್ ಅರಸ್ ಛಾಯಾಗ್ರಹಣ ಚಿತ್ರಕ್ಕಿದ್ದು,ಇಡೀ ಸಿನಿಮಾವನ್ನು ಸಿಂಕ್ ಸೌಂಡ್ನಲ್ಲಿಯೇ ರೆಕಾರ್ಡ್ ಮಾಡಲಾಗಿದೆ.

ಮಂಗಳೂರಿನ ಡ್ಯಾಘ್ನಿ ನೀತು ಡಿಸೋಜ ಅವರು ಡುಬೋಯ್ಸ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಪಟ್ಟಣದಲ್ಲಿ ಜೀವನ ನಡೆಸುವುದು ಕಷ್ಟ. ಹಳ್ಳಿಯ ಬದುಕು ಸುಲಭ. ಇಲ್ಲಿಯ ಸಂಸ್ಕ್ರತಿ, ಪರಂಪರೆಗಳನ್ನು ಚಿತ್ರದಲ್ಲಿ ತೋರಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್ ಆಗಿದ್ದು ಪ್ರೇಕ್ಷಕರನ್ನು ಹೇಗೆ ರಂಜಿಸುತ್ತಾರೆ ಎಂಬುದನ್ನು ನೋಡಬೇಕಾದರೆ ಚಿತ್ರಮಂದಿರಕ್ಕೆ ಹೋಗಲೇಬೇಕು.

Share This With Your Friends

Related posts