Cinisuddi Fresh Cini News 

ಏಪ್ರಿಲ್ 15ಕ್ಕೆ ಸರ್ಪ್ರೈಸ್ ಕೊಡಲಿದ್ದಾರೆ “ವಿಕ್ರಾಂತ್ ರೋಣ”

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿ ಜೀವನದ ಬಹುದೊಡ್ಡ ಸಿನೆಮಾವಾಗುವ ನಿರೀಕ್ಷೆ ಹುಟ್ಟಿಸಿರುವ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಏಪ್ರಿಲ್ 15 ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲಿದ್ದಾರೆ ಚಿತ್ರತಂಡ. ಏನ್ ಆ ಸರ್ಪ್ರೈಸ್ ಎಂಬುದಕ್ಕೆ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಅನೂಪ್ ಬಂಡಾರಿ ಎಂಬ ಪ್ರತಿಭಾವಂತ ತಂತ್ರಜ್ಞ ನಿರ್ದೇಶನ ಮಾಡಿರೋ ಈ ಸಿನೆಮಾ ಪ್ರತಿಯೊಂದು ವಿಚಾರಕ್ಕೂ ಸದ್ದು ಮಾಡ್ತಿರೋದು ಹೆಮ್ಮೆಯ ವಿಷಯ. ಈಗಾಗಲೇ ಟೀಸರ್ ಮೂಲಕ ವಿಶ್ವಾದ್ಯಂತ ಹೆಸ್ರು ಮಾಡಿರೋ ಈ ಸಿನೆಮಾಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಹಾಗೂ ಆಶಿಕ್ ಸಂಕಲನ ಮಾಡುತ್ತಿದ್ದಾರೆ.

ಜಾಕ್ ಮಂಜು ಬಂಡವಾಳ ಹೂಡಿರೋ ಈ ಸಿನೆಮಾ ಮುಂಚೆ ಫ್ಯಾಂಟಮ್ ಎಂಬ ಟೈಟಲ್ ನೊಂದಿಗೆ ಪ್ರಾರಂಭವಾದ ಸಿನೆಮಾ ಇದೀಗ ವಿಕ್ರಾಂತ್ ರೋಣ ಎಂಬುದಾಗಿ ಬಡಲಾಗಿದಲ್ಲದೆ, ಭಾರತ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಗೆ ರೆಡಿಯಾಗಿದ್ದು, ಆ ಸಿನಿಮಾ ಸಹ ಕೋಟಿಗೊಬ್ಬ 2 ನಂತೆ ಅಭಿಮಾನಿಗಳು ಮತ್ತು ಪ್ರೇಕ್ಷಕರ ಮನಗೆಲ್ಲಬಹುದು.

Related posts