Cinisuddi Fresh Cini News 

“ನಾನು ಕ್ಷೇಮವಾಗಿದ್ದೇನೆ” : ದರ್ಶನ್ ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ

ಪಯಣ ರವಿಶಂಕರ್‍ಗೆ ಧೈರ್ಯ ತುಂಬಿದ ಸುದೀಪ್, ಗಣೇಶ್ ರಾಜ್ಯದೆಲ್ಲೆಡೆ ಈಗ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು, ಪ್ರತಿಯೊಬ್ಬರಲ್ಲೂ ಸಹ ಆತಂಕ ಎನ್ನುವುದು ಮನೆಮಾಡಿದೆ. ಸಾರ್ವಜನಿಕರಲ್ಲದೆ ಈಗ ಸೆಲಬ್ರಟಿಗಳಿಗೂ ಇದರ ಬಿಸಿ ತಟ್ಟಿದೆ.

ಇತ್ತೀಚೆಗಷ್ಟೇ ತೆಲುಗು ಕಿರುತೆರೆ ಶೂಟಿಂಗ್ ಸೆಟ್‍ನಲ್ಲಿದ್ದ ಕಲಾವಿದನಿಗೆ ಕೊರೋನಾ ತಗುಲಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು, ಸದ್ಯ ಕನ್ನಡದಲ್ಲಿ ಇನ್ನೂ ಅಂಥಾ ಪರಿಸ್ಥಿತಿ ಈಗ ಕನ್ನಡ ಚಿತ್ರರಂಗದ ಕಲಾವಿದರಿಗೂ ಈಗ ಕರೋನಾ ಭೀತಿಯ ಬಿಸಿ ತಟ್ಟಿದೆ.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್‍ಮೆಂಟ್‍ನಲ್ಲಿಯೂ ಸಹ ಇದೀಗ ಕೊರೋನಾ ಪಾಸಿಟಿವ್ ಕೇಸೊಂದು ಪತ್ತೆಯಾಗಿದೆ. ಹೊಸಕೆರೆಹಳ್ಳಿ ಸಮೀಪದಲ್ಲಿರುವ ಪ್ರೆಸ್ಟೀಜ್ ಅಪಾರ್ಟ್‍ಮೆಂಟ್‍ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ರವಿಶಂಕರ್‍ಗೌಡ ಮತ್ತು ಸಂಗೀತಾ ಅವರ ಕುಟುಂಬ ವಾಸವಾಗಿದ್ದಾರೆ.

ಇದೀಗ ಅದೇ ಅಪಾರ್ಟ್‍ಮೆಂಟ್‍ನಲ್ಲಿರುವ ಒಬ್ಬರಿಗೆ ಕೊರೋನಾ ಸೋಂಕು ಇರುವುದು ಗೊತ್ತಾಗಿದೆ. ರವಿಶಂಕರ್‍ಗೌಡ ಅವರಿರುವ ಎದುರು ಮನೆಯಲ್ಲಿಯೆ ಕೊರೋನಾ ಸೋಂಕಿತರಿದ್ದಾರೆ. ಹಾಗಾಗಿ ನಟ ರವಿಶಂಕರ್ ಕುಟುಂಬದಲ್ಲೀಗ ಆತಂಕದ ವಾತಾವರಣ ಮನೆಮಾಡಿದೆ. ಭಯದಲ್ಲಿರುವ ರವಿಶಂಕರ್ ಅವರಿಗೆ ಕಲಾವಿದ ಸ್ನೇಹಿತರೆಲ್ಲ ಫೋನ್ ಮಾಡಿ ಧೈರ್ಯ ತುಂಬಿದ್ದಾರೆ.

ಈ ಬಗ್ಗೆ ಸ್ವತಃ ನಟ ರವಿಶಂಕರ್ ಗೌಡ ಸಾಮಾಜಿಕ ಜÁಲತಾಣದಲ್ಲಿ ಬರೆದುಕೊಂಡಿದ್ದಾರೆ. ಎದುರು ಮನೆಗೆ ಕೊರೋನಾ ವಕ್ಕರಿಸಿದೆ, 14 ದಿನ ಬಾಗಿಲು ತೆಗೆಯುವಂತಿಲ್ಲ. ಮಕ್ಕಳನ್ನು ದೇವರೇ ಕಾಪಾಡಬೇಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಭಯಗೊಂಡಿರುವ ತಮಗೆ ನಟರಾದ ಸುದೀಪ್, ಗಣೇಶ್, ಸೃಜನ್ ಲೋಕೇಶ್ ಮತ್ತು ರಘುರಾಮ್ ಧೈರ್ಯ ತುಂಬಿದ್ದಾರೆ. ಅಲ್ಲದೆ ಸುದೀಪ್ ಮತ್ತು ಗಣೇಶ್ ಹೆದರಬೇಡ ಎಂದು ಹೇಳಿದ್ದಲ್ಲದೆ ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಾ ಎಂದು ಕರೆದಿದ್ದಾರೆ ಎಂದು ರವಿಶಂಕರ್ ಹೇಳಿದ್ದಾರೆ.

ಇನ್ನೊಂದೆಡೆ ಅದೇ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರಿಗೂ ಕೊರೋನಾ ಸೋಂಕು ತಗುಲಿದೆ ಎಂಬ ವದಂತಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜÁಲತಾಣದಲ್ಲಿ ಹರಿದಾಡುತ್ತಿತ್ತು.

ಈ ವದಂತಿಗೆ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ವಿಜಯಲಕ್ಷ್ಮೀ ದರ್ಶನ್ ಅವರು, ನನಗೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದು ಸುಳ್ಳು. ಇದನ್ನು ಯಾರು ಹಬ್ಬಿಸಿದರೋ ಗೊತ್ತಿಲ್ಲ, ನಾನು ಕ್ಷೇಮವಾಗಿದ್ದೀನಿ. ಎಲ್ಲರೂ ಈ ಕಷ್ಟದ ಸಮಯದಲ್ಲಿ ಸುರಕ್ಷಿತವಾಗಿರಿ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ದರ್ಶನ್ ಮತ್ತು ವಿಜಯಲಕ್ಷ್ಮಿ ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದು, ಅದೇ ಅಪಾರ್ಟ್ ಮೆಂಟ್ ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

Share This With Your Friends

Related posts