Bollywood Cini Gossips Cinisuddi Fresh Cini News 

ವಿದ್ಯಾ ಬಾಲನ್ ವಿಂಡೋ ಎಂಟ್ರಿ..!

ವಿದ್ಯಾ ಬಾಲನ್-ಬೆಳ್ಳಿ ಪರದೆ ಮೇಲೆ ತನ್ನ ಮ್ಯಾಜಿಕ್ ಮೂಲಕ ಅಭಿಮಾನಿಗಳಿಗೆ ಎಂದೂ ನಿರಾಶೆಗೊಳಿಸಿಲ್ಲ. ಸಹಜ ಸೌಂದರ್ಯ ಮತ್ತು ಅದ್ಭುತ ಪ್ರತಿಭೈ ಮೂಲಕ ಬಹುಭಾಷಾ ತಾರೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾಳೆ. ಗಂಭೀರ ಪಾತ್ರಗಳಿರಲಿ ಅಥವಾ ಹಾಸ್ಯಮಯ ಪಾತ್ರಗಳಿರಲಿ ಅದಕ್ಕೆ ಜೀವ ತುಂಬುವ ಪ್ರತಿಭಾನ್ವಿತೆ.

ಅಭಿಮಾನಿಗಳನ್ನು ರಂಜಿಸಲು ಸದಾ ಹಾತೊರೆಯುವ ವಿದ್ಯಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವಿಡಿಯೋವೊಂದು ಗಮನಸೆಳೆದಿದೆ. ಹೃಷಿಕೇಶ್ ಮುಖರ್ಜಿ ನಿರ್ದೇಶನದ 1979ರ ಸೂಪರ್‍ಹಿಟ್ ಸಿನಿಮಾ ಗೋಲ್‍ಮಾಲ್‍ನಲ್ಲಿ ಆಗಿನ ನಟಿ ದಿನಾ ಪಾಠಕ್ ಅಭಿನಯಿಸಿದ್ದ ಹಾಸ್ಯ ದೃಶ್ಯವೊಂದನ್ನು ಮರುಸೃಷ್ಟಿಸಿ ಹಾಸ್ಯದ ಹೊನಲು ಹರಿಸಿದ್ದಾಳೆ.

ಈ ವಿಡಿಯೋದಲ್ಲಿ ವಿದ್ಯಾ ತನ್ನ ಹೋಟೆಲ್ ರೂಂನನ್ನು ಪ್ರವೇಶಿಸಲು ಬಾಗಿಲಿನ ಬದಲು ಸಣ್ಣ ಕಿಟಕಿಯನ್ನು ಬಳಸಿದ್ದಾಳೆ. ಈಕೆಯ ಹಾಸ್ಯ ಮನೋಭಾವ ಮತ್ತು ಅಭಿನಯ ಇಂಟರ್‍ನೆಟ್‍ನಲ್ಲಿ ಸುದ್ದಿಯಾಗಿದೆ. ಗೋಲ್‍ಮಾಲ್ ಚಿತ್ರದ ಕಾಮಿಡಿ ಸೀನ್‍ನ ಪ್ರತಿರೂಪ ಯಥಾವತ್ ಸೃಷ್ಟಿಯಾಗಿರುವುದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

ವಿದ್ಯಾ ಬಾಲನ್, ಜಗತ್ಪ್ರಸಿದ್ಧ ಗಣಿತಶಾಸ್ತ್ರ ಶಕುಂತಲಾ ದೇವಿ ಪಾತ್ರದಲ್ಲಿ ವಿಜೃಂಭಿಸಲಿದ್ದಾಳೆ. ಇತ್ತೀಚೆಗಷ್ಟೇ ಈ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಆ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಳು.

ಹ್ಯೂಮನ್ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದ ಶಕುಂತಲಾ ದೇವಿ ಯಥಾವತ್ ಲುಕ್‍ನಲ್ಲಿ ವಿದ್ಯಾ ಆಕರ್ಷಿಸುತ್ತಿದ್ದಾಳೆ. ಅನು ಮೆನನ್ ನಿರ್ದೇಶನದ ಈ ಚಿತ್ರ ಮೇ 2020ರಂದು ತೆರೆ ಕಾಣಲಿದೆ.

Share This With Your Friends

Related posts