Cinisuddi Fresh Cini News 

ಟಾಲಿವುಡ್‍ನತ್ತ ವಸಿಷ್ಠಸಿಂಹ

ಕನ್ನಡದ ಪ್ರತಿಭೆಗಳಾದ ಪ್ರಕಾಶ್‍ರೈ, ಸಂಪತ್ ಸೇರಿದಂತೆ ಹಲವರು ಟಾಲಿವುಡ್‍ದಲ್ಲಿ ಹೆಸರು ಮಾಡಿದ್ದಾರೆ. ಕಂಚಿನ ಕಂಠದ ನಟ ವಸಿಷ್ಠಸಿಂಹ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಖಳನಾಗಿ ಹೆಸರು ಮಾಡಿದ ನಂತರ, ‘ಟಗರು’ದಲ್ಲಿ ನಟಿಸಿ ‘ಇಂಡಿಯಾ ವರ್ಸಸ್ ಇಂಗ್ಲೇಡ್’ ಚಿತ್ರಕ್ಕೆ ನಾಯಕನಾಗಿ ಬಡ್ತಿ ಹೊಂದಿದ್ದರು.

ಈಗ ಟಾಲಿವುಡ್‍ನಿಂದ ಕರೆ ಬಂದಿದೆ ಎಂಬುದಾಗಿ ಸಿನಿಅಂಗಳದಿಂದ ಸುದ್ದಿ ಬಂದಿದೆ. ಯಸ್, ತೆಲುಗಿನ ‘ಒದೆಲಾ ರೈಲ್ವೇ ಸ್ಟೇಷನ್’ ಸಿನಿಮಾದ ಮೂಲಕ ಅಲ್ಲಿಯೂ ಒಂದು ಹೆಜ್ಜೆ ಇಡುತ್ತಿದ್ದಾರೆ.

ಈ ಬಗ್ಗೆ ಮಾತನಾಡುವ ಸಿಂಹ ನಿರ್ದೇಶಕ ಅಶೋಕ್‍ತೇಜಾ ತೆಲುಗಿನ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಲು ನನ್ನ ಬಳಿ ಬಂದಿದ್ದರು. ಮಾಡುವುದಿಲ್ಲವೆಂದು ಹೇಳಿದ್ದೆ. ಮುಂದೆ ಅಶೋಕ್ ಮತ್ತು ಸಂಪತ್‍ನಂದಿ ಹೊಸ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಅಶೋಕ್ ನನ್ನ ಹೆಸರು ಹೇಳಿದ್ದಾರೆ.

‘ಮಫ್ತಿ’ ಸಿನಿಮಾ ನೋಡಿ ನಮ್ಮ ಕತೆಗೆ ನಾನೇ ಸೂಟ್ ಆಗುತ್ತೇನೆಂದು ನಿರ್ಣಯಿಸಿ ಕರೆ ಮಾಡಿ ಫೋನ್‍ದಲ್ಲಿಯೇ ನಿರೂಪಣೆ ಮಾಡಿದರು. ಕರೀಂ ನಗರದ ಹಳ್ಳಿಯಲ್ಲಿ ನಡೆದ ನೈಜ ಘಟನೆ ಆಧರಿಸಿದ್ದು, ಜೊತೆಗೆ ಪಾತ್ರವು ಇಷ್ಟವಾಗಿದ್ದರಿಂದ ಒಪ್ಪಿಕೊಂಡೆ ಎನ್ನುತ್ತಾರೆ.

ಅಧ್ಯಕ್ಷ ಚಿತ್ರದಲ್ಲಿ ನಟಿಸಿದ್ದ ಹೇಬಾಪಟೇಲ್ ನಾಯಕಿ. ಥ್ರಿಲ್ಲರ್ ಜಾನರ್ ಇರುವ ಸಿನಿಮಾದ ಚಿತ್ರೀಕರಣವು ಈಗಾಗಲೇ ಹೈದರಬಾದ್ ಸುತ್ತಮುತ್ತ ಆರಂಭವಾಗಿದೆ.

Share This With Your Friends

Related posts