Cinisuddi Fresh Cini News 

ಉಪೇಂದ್ರ ಮಾಸ್ಕ್..!

ಈಗ ಎಲ್ಲಿ ನೋಡಿದರೂ ಮಾಸ್ಕ್‍ಗಳದೇ ಮಾತುಗಳು ಮತ್ತು ಇಂಪಾರ್‍ಟೆನ್ಸ್. ಈ ಮಾಸ್ಕ್‍ನಲ್ಲೂ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಚಿತ್ರ ಬಿಡಿಸಿ ಹೊಸ ಮಾದರಿಯ ಅಭಿಮಾನ ಪ್ರದರ್ಶಿಸಿದ್ದಾರೆ.

ಉಪೇಂದ್ರ ಕನ್ನಡ ನಟ, ಆದರೆ ಆತನ ಅಭಿಮಾನಿಗಳು ತೆಲುಗು ನೆಲದಲ್ಲಿ ದೊಡ್ಡ ಮಟ್ಟದಲ್ಲಿ ಇದ್ದಾರೆ. ಉಪೇಂದ್ರ ಅಭಿನಯಿಸಿರುವ ಐಲವ್‍ಯು ಚಿತ್ರದ ಪ್ರಚಾರಕ್ಕಾಗಿ ವಿಜಯವಾಡಕ್ಕೆ ಹೋಗಿದ್ದ ಪತ್ರಕರ್ತರು ಇದನ್ನು ನೇರವಾಗಿ ನೋಡಿದ್ದಾರೆ.

ಹೈದರಾಬಾದ್ ಸಮೀಪ ಚಿಕ್ಕದಪಾಳ್ಯ ಎಂಬ ಊರಿದೆ; ಈ ಊರಿನಲ್ಲಿ ಉಪೇಂದ್ರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಅಭಿಮಾನಿ ಸಂಘವೊಂದು ಮಾಸ್ಕ್ ಮೇಲೆ ಉಪೇಂದ್ರ ಚಿತ್ರ ಪ್ರಿಂಟ್ ಮಾಡಿ, ನಮ್ಮ ಕಲ್ಯಾಣಕ್ಕೆ ಮನೆಯಲ್ಲಿರಿ, ಆರೋಗ್ಯದಿಂದಿರಿ ಎನ್ನುವ ಘೋಷಣೆಗೆ ಪ್ರಾಧಾನ್ಯತೆ ಕೊಟ್ಟಿರುವ ಮಾಸ್ಕ್‍ಗಳನ್ನು ಉಚಿತವಾಗಿ ಹಂಚಿದೆ.
ಇದು ಹೈದರಾಬಾದಿನಲ್ಲಿ ಉಪೇಂದ್ರ ಅಭಿಮಾನಿಗಳ ಕಾರುಬಾರು !

Related posts