Cinisuddi Fresh Cini News 

ಕಬ್ಜ ಚಿತ್ರದ ಶೂಟಿಂಗ್ ವೇಳೆ ನಟ ಉಪೇಂದ್ರ ತಲೆಗೆ ಪೆಟ್ಟು..!

ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಸಿನಿಮಾದ ಚಿತ್ರೀಕರಣದ ವೇಳೆ ರಿಯಲ್ ಸ್ಟಾರ್ , ಸೂಪರ್‌ ಸ್ಟಾರ್ ಉಪೇಂದ್ರ ಗೆ ಸಹ ನಟನಿಂದ ಸ್ಟಂಟ್ ಸಂದರ್ಭದಲ್ಲಿ ಕಬ್ಬಿಣದ ರಾಡ್ ತಲೆಗೆ ತಗುಲಿ ಪೆಟ್ಟಾಗಿರುವಂತ ಘಟನೆ ನಡೆದಿದೆ.

ಅದ್ದೂರಿ ಸೆಟ್‌ಗಳಲ್ಲಿ ಬೆಂಗಳೂರಿನ ಮಿನರ್ವ ಮಿಲ್‌ ನಲ್ಲಿ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸಲಾಗುತ್ತಿತ್ತು , ಈ ಸಂದರ್ಭದಲ್ಲಿ ನಟ ಉಪೇಂದ್ರ ಗೆ ರಾಡ್ ನಿಂದ ಹೊಡೆಯುವ ದೃಶ್ಯ ಚಿತ್ರೀಕರಣವನ್ನು ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು ನಿರ್ಮಾಣ ಚಿತ್ರೀಕರಿಸಿಕೊಳ್ಳಲಾಯಿತು.

ಚಿತ್ರೀಕರಣದ ವೇಳೆ ನಟ ಉಪೇಂದ್ರ ರವರು ಸಹ ನಟನ ಎದುರು ರಾಡಿನಿಂದ ತಪ್ಪಿಸಿಕೊಳ್ಳಬೇಕಾಗಿತ್ತು , ಆದರೆ ಅಚಾನಕ್ಕಾಗಿ ಮಿಸ್ ಆಗಿ ಅವರ ತಲೆಗೆ ಪೆಟ್ಟು ಬಿದ್ದಿದೆ. ಇದರಿಂದ ಕೆಲಹೊತ್ತು ಚಿತ್ರೀಕರಣದಲ್ಲಿ ಗೊಂದಲದ ಮೂಡಿತು. ಆದರೆ ನಟ ಉಪೇಂದ್ರ ಪರ್ವಾಗಿಲ್ಲ ಚಿತ್ರೀಕರಣ ಮುಗಿಸೋಣ ಎಂದು ಹೇಳಿ ಮತ್ತೆ ಚಿತ್ರೀಕರಣ ಪೂರ್ಣಗೊಳಿಸಿ ಹೊರಟಿದ್ದಾರoತೆ.

ಸದ್ಯ ಉಪೇಂದ್ರ ರವರಿಗೆ ತಲೆಗೆ ಬಿದ್ದಿರುವ ಪೆಟ್ಟು ಇಡೀ ತಂಡಕ್ಕೆ ಹಾಗೂ ನಿರ್ಮಾಪಕ , ನಿರ್ದೇಶಕ ಆರ್. ಚಂದ್ರು ರವರಿಗೆ ಕೂಡ ಬಹಳ ಬೇಸರ ತಂದಿದೆ. ಚಿತ್ರತಂಡದ ಮೂಲಗಳ ಪ್ರಕಾರ ಈಗ ಉಪೇಂದ್ರ ಅವರ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts