Cinisuddi Fresh Cini News 

ಪ್ರಿಯಾಂಕಾ ಹುಟ್ಟುಹಬ್ಬಕ್ಕೆ “ಉಗ್ರಾವತಾರ” ಮೋಷನ್ ಪೋಸ್ಟರ್ ಲಾಂಚ್

ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ , ಸೂಪರ್ ಸ್ಟಾರ್ ಉಪೇಂದ್ರ ರವರ ಪತ್ನಿ ಪ್ರಿಯಾಂಕಾ ಉಪೇಂದ್ರ ರ ಹುಟ್ಟುಹಬ್ಬವಾಗಿದ್ದು , ಇಂದು ಅವರ ಅಭಿನಯದ “ಉಗ್ರಾವತಾರ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ನಟ ಉಪೇಂದ್ರ ಮಾತನಾಡುತ್ತಾ ತುಣುಕುಗಳನ್ನು ನೋಡುತ್ತಿದ್ದರೆ ಮಾಲಾಶ್ರೀ ಸಿನಿಮಾಗಳು ನೆನಪಿಗೆ ಬರುತ್ತದೆಂದು ಎoದು ಹೇಳಿದರು. ’ಉಗ್ರಾವತಾರ’ ಚಿತ್ರದ ಮೋಷನ್ ಪೋಸ್ಟರ್‌ನ್ನು ಅನಾವರಣಗೊಳಿಸಿ, ಪ್ರಿಯಾಂಕಉಪೇಂದ್ರ ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.

ತಂಡಕ್ಕೆ ಶುಭವಾಗಲಿ ಎoದು ಹಾರೈಸಿದರು. ನಂತರ ತುಂಡು ಕೇಕ್‌ನ್ನು ಪತ್ನಿಗೆ ತಿನ್ನಿಸಿದರು. ಕಳೆದ ಹುಟ್ಟುಹಬ್ಬದಂದು ಇದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಈ ವರ್ಷ ಮೋಷನ್ ಪಿಕ್ಚರ್ ಸಿದ್ದಗೊಂಡಿದ್ದು ಸಂತಸ ತಂದಿದೆ.

ನಿರ್ದೇಶಕರು ಕತೆ ಹೇಳಿದಾಗ ಇದನ್ನು ಮಾಡಬಹುದಾ ಎಂಬುದಾಗಿ ಪ್ರಶ್ನೆ ಕಾಡಿತ್ತು. ಆದರೆ ನಿರ್ಮಾಪಕರು, ನಿರ್ದೇಶಕರು ಮತ್ತು ಛಾಯಾಗ್ರಾಹಕರು ಸಾಥ್ ನೀಡಿದ್ದರಿಂದ ಎಲ್ಲವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಯಿತು.

ಪ್ರಸಕ್ತ ಸಾಮಾಜಿಕ ವಿಷಯಗಳು, ಮಹಿಳೆಯರ ಮೇಲಿನ ಶೋಷಣೆ, ಅಪರಾಧ ಇದರ ಜೊತೆಗೆ ಒಂದಷ್ಟು ಗಂಭೀರ ವಿಷಯಗಳನ್ನು ಕಮರ್ಷಿಯಲ್ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಸಾಹಸ ದೃಶ್ಯಗಳು ನೈಜವಾಗಿ ಬರಲೆಂದು ಡ್ಯೂಪ್ ಬಳಸದೆ ಇರುವುದರಿಂದ ಒಂದಷ್ಟು ತರಭೇತಿ ಪಡೆಯುತ್ತಿದ್ದೇನೆ.

ಐಪಿಎಸ್ ಅಧಿಕಾರಿ ರೂಪ ನನಗೆ ಪ್ರೇರಣೆಯಾಗಿದ್ದಾರೆ. ಅಮ್ಮ, ತಮ್ಮ ಆಕಸ್ಮಿಕವಾಗಿ ಬಂದಿರುವುದು ಆಶ್ಚರ್ಯವಾಗಿದೆ ಎಂದು ಪ್ರಿಯಾಂಕಉಪೇಂದ್ರ ಖುಷಿ ಹಂಚಿಕೊಂಡರು.

ಮೇಡಂರವರು ಸೆಟ್‌ದಲ್ಲಿ ತುಂಬಾ ಆಸಕ್ತಿ ತೋರಿಸುತ್ತಾರೆ. ನಾವು ಇಷ್ಟು ಬೇಕು ಅಂದರೆ, ಅದಕ್ಕಿಂತಲೂ ಹೆಚ್ಚಿಗೆ ಕೊಡುತ್ತಾರೆ. ಅವರ ಪ್ರೋತ್ಸಾಹದಿಂದಲೇ ಶೇಕಡ 30 ರಷ್ಟು ಚಿತ್ರೀಕರಣ ಮುಗಿದಿದೆ. ಮೂರು ಫೈಟ್ ಬಾಕಿ ಇದೆ.

ರಸ್ತೆಯಲ್ಲಿ ಹೆಣ್ಣುಮಕ್ಕಳು ಹೋಗುತ್ತಿದ್ದಾರೆ ಅವರನ್ನು ಗೌರವದಿಂದ ಕಾಣಬೇಕು. ಏನಾದರೂ ಮಾಡಬೇಕು ಅನ್ನಿಸಬಾರದು. ಅದನ್ನೆ ಇದರಲ್ಲಿ ಹೇಳ ಹೊರಟಿದ್ದೇವೆ. ಸತ್ಯಪ್ರಕಾಶ್, ಸುಮನ್ ಮುಂತಾದವರು ನಟಿಸುತ್ತಿದ್ದಾರೆ.

ಪೋಸ್ಟರ್ ನೋಡಿದವರೆಲ್ಲರೂ ವಾಹ್ ಎನ್ನುತ್ತಿದ್ದಾರೆ. ಇಷ್ಟು ದಿವಸ ಮೇಡಂ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದರು. ಮೊದಲಬಾರಿ ಆಕ್ಷನ್ ಮಾಡಿದ್ದಾರೆ, ಡಿಸೆಂಬರ್ ಒಳಗೆ ಮುಗಿಸಿ, ಸಂಕ್ರಾಂತಿ ಹಬ್ಬದಂದು ಜನರಿಗೆ ತೋರಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂಬುದು ನಿರ್ದೇಶಕ ಗುರುಮೂರ್ತಿ ಮಾಹಿತಿಯಾಗಿತ್ತು.

ನಿರ್ಮಾಪಕ ಎಸ್.ಜಿ.ಸತೀಶ ಹೆಚ್ಚೇನು ಮಾತನಾಡಲಿಲ್ಲ. ಶುಭಸಂದರ್ಭದಲ್ಲಿ ಸಂಭಾಷಣೆ, ಸಾಹಿತ್ಯ ರಚಿಸಿರುವ ಕಿನ್ನಾಳ್‌ರಾಜ್, ಛಾಯಾಗ್ರಾಹಕ ವೀಣಾನಂದಕುಮಾರ್ ಮುಂತಾದವರು ಹಾಜರಿದ್ದರು. ಮತ್ತೋಂದು ಕಡೆ ಅಭಿಮಾನಿಗಳು ಕೇಕ್, ಹೂ, ಉಡುಗೊರೆಗಳನ್ನು ಮೇಡಂ ಅವರಿಗೆ ಕೊಡಲು ಕಾತುರರಾಗಿದ್ದರು.

Related posts