Cinisuddi Fresh Cini News Uncategorized 

ಉಗ್ರಮರ್ದಿನಿ” ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್.

ಶ್ರೀ ಜಯಗುರು ರಾಘವೇಂದ್ರ ಫಿಲಂಸ್ ಲಾಂಛನದಲ್ಲಿ ಬಿ.ಸತ್ಯನಾರಾಯಣ ನಿರ್ಮಿಸಿ ಕಥೆ-ಸಂಭಾಷಣೆ ಬರೆದು ಪ್ರಥಮವಾಗಿ ನಿರ್ದೇಶಿಸಿರುವ “ಉಗ್ರಮರ್ದಿನಿ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಆಯೇಷಾ, ಮುನಿ, ಸೂರಜ್ ಸಾಸನೂರು, ರಾಘವೇಂದ್ರ, ಅಮುಲ್ ಗೌಡ ಹಾಗೂ ನಿರ್ದೇಶಕ ಬಿ.ರಾಮಮೂರ್ತಿ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಚಿತ್ರಕಥೆ-ಸಹನಿರ್ದೇಶನ : ಅಕ್ಷಯ ರಾಮಮೂರ್ತಿ, ಛಾಯಾಗ್ರಹಣ–ಗೌರಿವೆಂಕಟೇಶ್, ಸಂಗೀತ – ರಾಜ್ ಕಿಶೋರ್, ಸಂಕಲನ- ಸಂಜೀವರೆಡ್ಡಿ, ನಿರ್ವಹಣೆ –ಕಪಾಲಿ, ‘ಇಚ್ಛೆ ಇರುವಲ್ಲಿ ದಾರಿ ಇರುತ್ತದೆ’ ಎಂಬ ಮಾತಿನಂತೆ ಕರ್ನಾಟಕ ಪೊಲೀಸ್ ಇಲಾಖೆಯು ‘ಎಲ್ಲಿ ಕೆಡುಕಿದೆಯೋ ಅಲ್ಲಿ ಅವರ ಉಪಸ್ಥಿತಿ ಇರುತ್ತದೆ’ ನಮ್ಮ ಸಿನಿಮಾ ‘ಉಗ್ರಮರ್ದಿನಿ’ ಇಂತಹ ಹಲವಾರು ದುಷ್ಟ ಪಾತ್ರಗಳ ಸುತ್ತ ಸುತ್ತುತ್ತದೆ. ಸಮಾಜದಲ್ಲಿ ಕಷ್ಟಗಳನ್ನು ಎದುರಿಸಲು ಮತ್ತು ಶಿಕ್ಷಿಸಲು ಹೊಸದಾಗಿ ಪೊಲೀಸ್ ಅಧಿಕಾರಿಯೊಬ್ಬಳ ಸುತ್ತ ನಡೆಯುವ ಕಥೆ ಇದು.

Related posts