Cinisuddi Fresh Cini News Tv / Serial 

ಉದಯ ಟಿವಿಯಲ್ಲಿ ಮತ್ತೆರಡು ಪೌರಾಣಿಕ ಸೀರಿಯಲ್

ಉದಯ ಟಿವಿಯಲ್ಲಿ ಶುರುವಾಗ್ತಿದೆ ಮನರಂಜನೆಯ ಮಹಾ ಧಮಾಕ. ಬೆಚ್ಚಗಿನ ಇಳಿಜಾರಿನಿಂದ ತಂಪಾದ ರಾತ್ರಿಯವರೆಗೆ ನಿಮ್ಮ ಸಂಜೆಗಳ ಸಂಗಾತಿಯಾಗಿರೊ ಉದಯ ಟಿವಿ ಇನ್ನು ಮುಂದೆ ಮಧ್ಯಾಹ್ನಗಳಿಗೆ ಮನರಂಜನೆಯ ಸಿಂಚನ ನೀಡೋಕೆ ಸಿದ್ಧವಾಗಿದೆ.

ಮಧ್ಯಾಹ್ನದ ಮಹಾಕಥೆಗಳ ಶೀರ್ಷಿಕೆಯೊಂದಿಗೆ ಧಾರಾವಾಹಿಗಳು ವೀಕ್ಷಕರ ಮುಂದೆ ಹೊತ್ತು ತರುತ್ತಿದೆ ಉದಯ ಟಿವಿ. ಭಕ್ತಿ-ಶಕ್ತಿ, ಪ್ರೀತಿ-ನೀತಿ, ಭಯ-ಧೈರ್ಯಗಳ ಸಮಮಿಶ್ರಣದ ಹೂರಣವೇ ಈ ಮಧ್ಯಾಹ್ನದ ಮಹಾಕಥೆಗಳಲ್ಲಿ ತುಂಬಿದೆ ಅಂದ್ರೆ ತಪ್ಪಾಗಲಾರದು.

ಪ್ರಕೃತಿಯ ಮೊದಲ ಶಕ್ತಿಯ ಜೊತೆ ಭಕ್ತಿಯ ಪರಾಕಾಷ್ಠೆಯ ಎರಡು ಹೊಸ ಕಥೆಗಳು ಉದಯ ವಾಹಿನಿಯ ಧಾರಾವಾಹಿಗಳ ಗುಚ್ಛ ಸೇರುತ್ತಿವೆ. ಮಧ್ಯಾಹ್ನ 12ಕ್ಕೆ ಶಕ್ತಿರೂಪಿಣಿ ಜಗ್ನಮಾತೆಯ ಪುರಾಣ “ದೇವಿ ಆದಿಪರಾಶಕ್ತಿ”, 12.30ಕ್ಕೆ ಶ್ರೀಕೃಷ್ಣನ ಸಾರಥ್ಯದಲ್ಲಿ ಹೇಳಿದ ರಾಮನ ಭಕ್ತ ಹನುಮಂತನ ಕಥಾಸಾರ “ಜೈ ಭಜರಂಗಿ” ಧಾರಾವಾಹಿಗಳು ಕನ್ನಡದಲ್ಲಿ ಮಧ್ಯಾಹ್ನಕ್ಕೆ ಮುದ ನೀಡಲಿವೆ.

ಈ ಧಾರಾವಾಹಿಗಳು ಇದೇ ಸೆಪ್ಟೆಂಬರ್‌ 21ರಿಂದ ಸೋಮವಾರದಿಂದ ಶನಿವಾರ ಮಧ್ಯಾಹ್ನ 12 ಮತ್ತು 12.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತವೆ.

Share This With Your Friends

Related posts