Cinisuddi Fresh Cini News 

ವಿಕ್ರಮನ `ತ್ರಿವಿಕ್ರಮ’

ಚಂದನವನದಲ್ಲಿ ಯುವನಾಯಕರ ದಂಡು ಆಗಮಿಸುತ್ತಿದೆ, ಆ ನಿಟ್ಟಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್‍ರ ಸುಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ `ತ್ರಿವಿಕ್ರಮ’ ಅದ್ಧೂರಿಯಾಗಿ ಸಿದ್ಧವಾಗುತ್ತಿದೆ.

ಈಗಾಗಲೇ ನಾಯಕ ವಿಕ್ರಂ ಹುಲಿಯೊಂದಿಗೆ ಸೆಣಸುವ ಮೂರು ನಿಮಿಷದ ಅದ್ಭುತ ಫೈಟಿಂಗ್ ದೃಶ್ಯವನ್ನು ಬ್ಯಾಂಕಾಕ್‍ಗೆ ತೆರಳಿ, ವ್ಯಾಘ್ರಯೊಂದಿಗಿನ ಕಾದಾಟದ ದೃಶ್ಯವನ್ನು 2 ಕೋಟಿ ವೆಚ್ಚದಲ್ಲಿ ಸೆರೆಹಿಡಿದಿದ್ದಾರೆ.

ಚಿತ್ರಕ್ಕೆ ಬಾಕಿಯಿರುವ ಎರಡು ಹಾಡುಗಳನ್ನು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸಲು ನಿರ್ಧರಿಸಿತ್ತು. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊರೋನಾದಿಂದ ಅಲ್ಲಿಗೆ ತೆರಳುವ ಯೋಜನೆಯನ್ನು ಕೈಬಿಟ್ಟಿದೆ.

ಲಾಕ್‍ಡೌನ್ ಮುಗಿದ ಬಳಿಕ, ಕಾಶ್ಮೀರ, ಹಿಮಾಚಲ ಪ್ರದೇಶದ ಸುಂದರ ತಾಣಗಳಲ್ಲಿ ಹಾಡುಗಳ ಶೂಟಿಂಗ್ ಸಿದ್ದತೆ ಮಾಡಿಕೊಂಡಿದೆ. ಸಹನಾಮೂರ್ತಿ ನಿರ್ದೇಶನ, ಅರ್ಜುನ್‍ಜನ್ಯಾ ಸಂಗೀತವಿದೆ. ಸೋಮಣ್ಣ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆ ಹೊಂದಿದೆ.

ಕಥಾನಾಯಕ ಎಲ್ಲರಂತೆ ಉತ್ತಮ ಬದುಕು ಕಟ್ಟಿಕೊಳ್ಳಲು ಕಾತರನಾಗಿರುತ್ತಾನೆ. ಈ ನಡುವೆಯೇ ಮನಗೆದ್ದ ಪ್ರಿಯತಮೆಯನ್ನು ಪಡೆಯಲೇಬೇಕೆಂಬ ಹಂಬಲರುತ್ತದೆ. ಅದಕ್ಕಾಗಿ ಆತ ಛಲಬಿಡದ ತ್ರಿಕ್ರಮನಂತೆ ಹೋರಾಟ ನಡೆಸುತ್ತಾನೆ.

ಮುಂದೆ ಆತನಿಗೆ ಯಾವೆಲ್ಲಾ ಅಡೆತಡೆಗಳು ಎದುರಾಗುತ್ತವೆ. ಅವನ್ನೆಲ್ಲಾ ಹೇಗೆ ಎದುರಿಸುತ್ತಾನೆ ಎಂಬುದು ಸಿನಿಮಾದ ಹೂರಣವಾಗಿದೆ. ಆಕಾಂಕ್ಷಶರ್ಮ, ಅಕ್ಷರಾಗೌಡ ನಾಯಕಿಯರಾಗಿದ್ದು, ಉಳಿದಂತೆ ಜಯಪ್ರಕಾಶ್, ತುಳಸಿಶಿವಮಣಿ, ಸಾಧುಕೋಕಿಲಾ, ಚಿಕ್ಕಣ್ಣ ಮುಂತಾದವರು ಅಭಿನಯಿಸಿದ್ದಾರೆ.

Share This With Your Friends

Related posts