Cinisuddi Fresh Cini News 

“ತ್ರಿಶೂಲಂ” ಚಿತ್ರಕ್ಕೆ ವಿದೇಶಿಯರಿಂದಲೂ ಬೇಡಿಕೆ

ರಿಯಲ್ ಸ್ಟಾರ್ ಉಪೇಂದ್ರ – ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಚಿತ್ರ ಜನವರಿಯಲ್ಲಿ ತೆರೆಗೆ ಬರಲಿದೆ.ಆರ್ ಎಸ್ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರಕ್ಕೆ ಓಂಪ್ರಕಾಶ್ ರಾವ್ ನಿರ್ದೇಶನ.ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಆರ್ ಎಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “ತ್ರಿಶೂಲಂ”  ಚಿತ್ರ ಚಿತ್ರೀಕರಣ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದೆ.

ಈ ಚಿತ್ರದ ಬಗ್ಗೆ ತಿಳಿದುಕೊಂಡಿರುವ ವಿದೇಶಿಗರು(ಇಂಗ್ಲೆಂಡ್) ಈ ಚಿತ್ರದ ವ್ಯಾಪಾರಕ್ಕೆ ಮುಂದೆ ಬಂದಿದ್ದಾರೆ. ಮಾತುಕತೆ ಅಂತಿಮಹಂತದಲ್ಲಿದೆ ಎಂದು ನಿರ್ಮಾಪಕ ಆರ್ ಶ್ರೀನಿವಾಸ್ ತಿಳಿಸಿದ್ದಾರೆ.

ಇದೇ 26 ರಿಂದ ಹೈದರಾಬಾದ್ ನಲ್ಲಿ ಗಣೇಶ್ ಮಾಸ್ಟರ್ ಅವರ ಸಾರಥ್ಯದಲ್ಲಿ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ನಡೆಯಲಿದೆ. ಉಪೇಂದ್ರ, ರವಿಚಂದ್ರನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಜನವರಿ ವೇಳೆಗೆ ಚಿತ್ರ ತೆರೆಗೆ ಬರಲಿದೆ.

ಆರ್ ಶ್ರೀನಿವಾಸ್ ಹಾಗೂ ಬಿ.ಎಸ್ ಕಿರಣ್ ಗೌಡ ನಿರ್ಮಿಸುತ್ತಿರುವ ಈ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ರವಿ ಛಾಯಾಗ್ರಹಣ, ಲಕ್ಷ್ಮಣ ರೆಡ್ಡಿ ಸಂಕಲನ ಹಾಗೂ ಡಾ||ರವಿವರ್ಮ, ಗಣೇಶ್ ಅವರ ಮಾಸ್ಟರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಉಪೇಂದ್ರ, ರವಿಚಂದ್ರನ್.ವಿ, ಶಾನ್ವಿ ಶ್ರೀವಬೆಳವಾಡಿ, ನಿಮಿಕ ರತ್ನಾಕರ್, ಸಾಧುಕೋಕಿಲ, ಪ್ರದೀಪ್ ರಾವತ್, ನಾಗಶೇಖರ್, ರಂಗಾಯಣ ರಘು, ಅಚ್ಯುತರಾವ್, ಸುಧಾ ಬೆಳವಾಡಿ, ಉಗ್ರಂ ಮಂಜು ಮುಂತಾದವರು ಅದ್ದೂರಿ ತಾರಾಬಳಗ ಈ ಚಿತ್ರಕ್ಕಿದೆ‌. ಮುಂಬೈ ಬೆಡಗಿ ಅದಿತಿ ಆರ್ಯ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.
.

Related posts