Cinisuddi Fresh Cini News 

ಬಿಡುಗಡೆಗೆ ರೆಡಿಯಾಗಿದೆ ರಾಘಣ್ಣನ ಮತ್ತೊಂದು ಚಿತ್ರ ‘ತ್ರಯಂಬಕಂ’

ಆ ಕರಾಳ ರಾತ್ರಿ, ಪುಟ 109 ಚಿತ್ರಗಳ ನಂತರ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ನಿರ್ದೇಶಿಸಿರುವ ತ್ರಯಂಬಕಂ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಸದ್ಯದಲ್ಲೇ ಬಿಡುಗಡೆ ಆಗಲಿದೆ. ಮೊನ್ನೆ ಚಿತ್ರತಂಡವು ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.

ಅಮ್ಮನ ಮನೆ ಚಿತ್ರದ ನಂತರ ಮತ್ತೆ ಬಣ್ಣದ ಬದುಕಿಗೆ ಕಾಲಿಟ್ಟಿರುವ ರಾಘವೇಂದ್ರರಾಜ್ಕುಮಾರ್ ಅವರು ನಟಿಸಿರುವ ತ್ರಯಂಬಕಂ ಚಿತ್ರದಲ್ಲಿ ಅನುಮಪಮಾ ಗೌಡ, ಶ್ರುತಿನಾಯಕ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ನಟ ನವೀನ್ ಕೃಷ್ಣ ಅವರು ಕಾರ್ಯಕ್ರಮ ನಿರೂಪಕರಾಗಿ ಬಂದಿದ್ದ ಗಣ್ಯರನ್ನು ಸ್ವಾಗತಿಸಿದರು.

ನವೀನ್ಕೃಷ್ಣ ಮಾತನಾಡಿ, ಊಟದ ಜೊತೆಗೆ ಉಪ್ಪಿನಕಾಯಿ ಎನ್ನುವಂತೆ ದಯಾಳ್ ಪದ್ಮನಾಭ್ರ ಹಿಂದಿನ ಚಿತ್ರದಲ್ಲಿ ಕೈ ಜೋಡಿಸಿದ್ದ ನಾನು ಈ ಚಿತ್ರಕ್ಕೆ ಸಂಭಾಷಣೆಯನ್ನು ಒದಗಿಸಿದ್ದೇನೆ, ದಯಾಳ್ರ ಹಿಂದಿನ ಚಿತ್ರಗಳಾದ ಆ ಕರಾಳ ರಾತ್ರಿ, ಪುಟ 109 ಚಿತ್ರಗಳಿದ್ದಂತೆ ಈ ಚಿತ್ರದಲ್ಲೂ ಉತ್ತಮ ಕಥೆಯಿದ್ದು, ಅನಪಮಾಗೌಡ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು.

ನಿರ್ದೇಶಕ ಶಿವಮಣಿ ಮಾತನಾಡಿ, ಈ ಚಿತ್ರದಲ್ಲಿ ತುಂಬಾ ಒಳ್ಳೇ ಸಬ್ಜೆಕ್ಟ್ ಇದೆ. ದಯಾಳ್ ಅವರು ಕಥೆಗೆ ಶ್ರೀಮಂತವಾದ ಐಟಂಗಳನ್ನು ತುಂಬಿದ್ದಾರೆ. ರಾಘಣ್ಣ ತಮ್ಮ ಕಣ್ಣುಗಳ ಮೂಲಕವೇ ನಟನೆ ಮಾಡಿದ್ದರೆ, ರೋಹಿತ್, ಅನುಪಮಾ ಕೂಡ ಪೈಪೋಟಿ ಗೆ ಬಿದ್ದಂತೆ ನಟಿಸಿದ್ದಾರೆ ಎಂದರು.

ನಾಯಕ ನಟಿ ಅನುಪಮಾಗೌಡ ಮಾತನಾಡಿ, ನಾನು ಈ ಚಿತ್ರದಲ್ಲಿ ನಟಿಸುವಾಗ ತುಂಬಾ ಟೇಕ್ಸ್ಗಳನ್ನು ತೆಗೆದುಕೊಂಡಿದ್ದೇನೆ, ಡಾ.ರಾಜ್ಕುಮಾರ್ ಅವರನ್ನು ನೋಡಬೇಕು ಅವರೊಂದಿಗೆ ನಟಿಸಬೇಕು ಎಂಬ ಬಯಕೆ ಇತ್ತು. ಅದು ಈಡೇರದಿದ್ದರೂ ಈ ಚತ್ರದಲ್ಲಿ ರಾಘಣ್ಣನೊಂದಿಗೆ ನಟಿಸಿರುವುದು ತುಂಬಾ ಸಂತಸ ತಂದಿದೆ ಎಂದರು.

ರಾಘವೇಂದ್ರರಾಜ್ಕುಮಾರ್ ಮಾತನಾಡಿ, ಇದು ರಾಘಣ್ಣ ಸಿನಿಮಾವಲ್ಲ, ದಯಾಳ್ ಅವರ ಸಿನಿಮಾ. ನಾನಿಲ್ಲಿ ನಟನಷ್ಟೇ. ಈ ಚಿತ್ರದ ಮೊದಮೊದಲು ಎಂಬ ಹಾಡಿನಲ್ಲಿ ನಾನು ಅನುಪಮಾ ಅವರಿಂದ ನಟನೆಯನ್ನು ಕಲಿತೆ, ಅಪ್ಪಾಜಿಯ ಹುಟ್ಟುಹಬ್ಬದ ಮಾಸದಲ್ಲೇ ಈ ಚಿತ್ರ ಬಿಡುಗಡೆ ಆಗುತ್ತಿರುವುದು ನನಗೆ ಸಂತೋಷ ತಂದಿದೆ ಎಂದರು.

ಆರ್ಜೆ ರೋಹಿತ್ ಮಾತನಾಡಿ, ಈ ಚಿತ್ರದ ನಾಯಕನಾಗಿದ್ದು, ಅನುಪಮಾರವರ ಗೆಳೆಯನ ಪಾತ್ರ. ಡಿಟೆಕ್ಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾನೆ.

ಚಿಕ್ಕಂದಿನಿಂದಲೂ ರಾಘಣ್ಣನ ಸಿನಿಮಾವನ್ನು ನೋಡುತ್ತಾ ಬಂದ ನಾನು ಇಂದು ಅವರೊಂದಿಗೆ ನಟಿಸಿದ್ದು ಸಂತಸದ ಸಂಗತಿ. ಇದು ಸಂಪೂರ್ಣ ದಯಾಳ್ ಅವರ ಸಿನಿಮಾ ಎಂದರು.

ನಿರ್ದೇಶಕ ದಯಾಳ್ ಪದ್ಮನಾಭ್ ಮಾತನಾಡಿ, ಇದೊಂದು ಉತ್ತಮ ಪ್ರಯೋಗಾತ್ಮಕ ಚಿತ್ರವಾಗಿದ್ದು ನನ್ನ ಹಿಂದೆರೆಡು ಚಿತ್ರಗಳಂತೆ ಈ ಚಿತ್ರವು ಪ್ರೇಕ್ಷಕರನ್ನು ತುಂಬಾ ಕಾಡಲಿದೆ. ಇದು ಅಪ್ಪ, ಮಗಳ ಸೆಂಟಿಮೆಂಟ್ ಚಿತ್ರವಾಗಿದ್ದು, ನರಪಾಷಾಣ ಮತ್ತು ಇಲಿಪಾಷಾಣದ ಅಧ್ಯಯನ ಮಾಡಿ ಅದನ್ನು ಈ ಚಿತ್ರದ ಕಥೆಗೆ ಸೇರಿಸಿದ್ದೇನೆ.

ಇಂಥಹ ಪ್ರಯೋಗ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು. ಚಿತ್ರಕ್ಕೆ ಅಗತ್ಯವಾದದ್ದನ್ನೆಲ್ಲ ನಿರ್ಮಾಪಕರು ಕೊಟ್ಟಿದ್ದರಿಂದ ಚಿತ್ರವು 23 ದಿನಗಳಲ್ಲೇ ಮುಗಿದಿದೆ ಎಂದರು.

ರಾಘಣ್ಣ ಹಾಗೂ ದಯಾಳ್ಪದ್ಮನಾಭ್ರ ಕಾಂಬಿನೇಷನ್ನ ಮೊದಲ ಚಿತ್ರವಾದ ತ್ರಯಂಬಕಂ ಟೈಟಲ್ನಿಂದಲೇ ಮೋಡಿ ಮಾಡಿದ್ದು ಚಿತ್ರವು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಂತಾಗಲಿ.

Share This With Your Friends

Related posts