Cinisuddi Fresh Cini News 

ಹರ್ಷ ಸಿ.ಎಂ ಗೌಡ ತಂಡಕ್ಕೆ ಒಲಿದ ಟಿಪಿಎಲ್ ಸೀಸನ್ – 2 ಟ್ರೋಪಿ

ಎನ್ 1 ಕ್ರಿಕೆಟ್ ಅಕಾಡೆಮಿ ಸುನೀಲ್ ಕುಮಾರ್. ಬಿ. ಆರ್ ಸಾರಥ್ಯದ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ ಗೆ ಅದ್ದೂರಿ ತೆರೆ ಬಿದ್ದಿದೆ. ಹರ್ಷ ಸಿ.ಎಂ ಗೌಡ ನೇತೃತ್ವದ ಎನಿಎಲ್ಪ್ ಟೂರ್ನಿವಲ್ ತಂಡ ಟಿಪಿಎಲ್ ಸೀಸನ್ -2 ಟ್ರೋಪಿ ಮುಡಿಗೇರಿಸಿಕೊಂಡಿದೆ.

ಎನ್ 1 ಕ್ರಿಕೆಟ್ ಅಕಾಡೆಮಿ ಸುನೀಲ್ ಕುಮಾರ್ ಬಿ.ಆರ್ ಕಳೆದ ವರ್ಷದಿಂದ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ (ಟಿಪಿಎಲ್) ಆರಂಭಿಸಿದ್ದಾರೆ. ಈ ಬಾರಿ ಎರಡನೇ ಸೀಸನ್ ಮಾರ್ಚ್ 12ರಿಂದ ಆರಂಭವಾಗಿತ್ತು. ಮಾರ್ಚ್ 12 ರಿಂದ 15ರ ವರೆಗೆ ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು, ಅಂತಿಮವಾಗಿ ಹರ್ಷ ಸಿ.ಎಂ. ಗೌಡ ನೇತೃತ್ವದ ಎನಿಎಲ್ಪ್ ಟೂರ್ನಿವಲ್ ತಂಡ ಟಿಪಿಎಲ್ ಸೀಸನ್ -2 ಟ್ರೋಫಿಗೆ ಮುತ್ತಿಟ್ಟಿದೆ. ಮಂಜು ಪಾವಗಡ ನೇತೃತ್ವದ ಅಶ್ವಸೂರ್ಯ ರಿಯಾಲಿಟೀಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಗಾಯಕ ವ್ಯಾಸರಾಜ್ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಒಟ್ಟು ಆರು ತಂಡಗಳು ಟಿಪಿಎಲ್ ಸೀಸನ್-2ನಲ್ಲಿ ಭಾಗವಹಿಸಿದ್ದವು. ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ನಾಯಕತ್ವದಲ್ಲಿ ತಂಡಗಳನ್ನು ಮುನ್ನಡೆಸಲಾಗಿತ್ತು.

Related posts