Cinisuddi Fresh Cini News 

ನವೆಂಬರ್ 12ಕ್ಕೆ “ಟಾಮ್ ಅಂಡ್ ಜೆರ್ರಿ” ಚಿತ್ರ ರಿಲೀಸ್

ಎಲ್ಲರಿಗೂ ಕಾರ್ಟೂನ್ ಅಂದರೆ ಸಾಕು ನೆನಪಿಗೆ ಬರೋದು ಟಾಮ್ ಅಂಡ್ ಜೆರ್ರಿ. ಅದರ ತುಂಟಾಟವನ್ನು ನೋಡಿರುತ್ತೀರಿ. ಎಳೆ ವಯಸ್ಸಿನಿಂದ, ಇಳಿ ವಯಸ್ಸಿನವರೆಗೂ ಮನರಂಜಿಸುವ ಟಾಮ್ ಅಂಡ್ ಜೆರ್ರಿ ಇದೀಗ ಸಿನಿಮಾವಾಗಿ ಬರುತ್ತಿದೆ. ಅಂದಹಾಗೆ ಕಾರ್ಟೂನಲ್ಲಿರುವ ಟಾಮ್ ಅಂಡ್ ಜೆರ್ರಿಗೂ ಸಿನಿಮಾ ರೂಪದಲ್ಲಿ ಬರುತ್ತಿರುವ ಟಾಮ್ ಅಂಡ್ ಜೆರ್ರಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಯೂಥ್ ಫುಲ್ ಸಬ್ಜೆಕ್ಟ್ ಅಂಶಗಳಿರುವ ಸಿನಿಮಾ.

ಶೀರ್ಷಿಕೆ ತಕ್ಕಂತೆ ಈ ಸಿನಿಮಾ ಕಿತ್ತಾಟ, ಗುದ್ದಾಟ, ಮುದ್ದಾಟ ಎಲ್ಲ ಅಂಶಗಳನ್ನು ಒಳಗೊಂಡಿದೆ. ಇದೀಗ ಸಿನಿಮಾತಂಡದಿಂದ ಹೊಸ ಮಾಹಿತಿ ಹೊರಗೆ ಬಿದ್ದದೆ. ಸೆನ್ಸಾರ್ ಮಂಡಳಿಯಿಂದ ಯು/ ಎ ಸರ್ಟಿಫಿಕೇಟ್ ಸಿಕ್ಕಿದ್ದು, ಮುಂದಿನ ತಿಂಗಳು ಅಂದರೆ ನವೆಂಬರ್ 12 ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಟೈಟಲ್ ನಿಂದಲೇ ಸಖತ್ ಸದ್ದು ಮಾಡಿದ ಈ ಚಿತ್ರಕ್ಕಾಗಿ ಚಿತ್ರ ಪ್ರೇಮಿಗಳು ಕಾತುರದಿಂದ ಕಾಯ್ತಿದ್ದಾರೆ.

ಕೆಜಿಎಫ್ ಚಿತ್ರಕ್ಕೆ ಡೈಲಾಗ್ ಬರೆದು ಖ್ಯಾತಿ ಪಡೆದಿರುವ, ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ಯಂಗ್ ರೈಟರ್ ಎಂದೇ ಗುರುತಿಸಿಕೊಂಡಿರುವ ರಾಘವ್ ವಿನಯ್ ಶಿವಗಂಗೆ ಈ ಚಿತ್ರದ ಸೂತ್ರಧಾರ. ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಜು ಶೇರಿಗಾರ್ ಬಂಡವಾಳ ಹೂಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ವಿನಯ್ ಚಂದ್ರ ಕೂಡ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ.

ಈ ಹಿಂದೆ ಗಂಟುಮೂಟೆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ನಿಶ್ಚಿತ್ ಕೊರೋಡಿ, ಕಿರುತೆರೆಯ ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ ಟಾಮ್ ಅಂಡ್ ಜೆರ್ರಿ ಯಲ್ಲಿ ನಾಯಕ – ನಾಯಕಿ ಯಾಗಿ ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿ ಖಳ ನಾಯಕನಾಗಿ ಸೂರ್ಯ ಶೇಖರ್ ಮಿಂಚಿದ್ದು, ತಾರಾ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ ಲೈನ್ ಸುಧಾಕರ್, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್, ಮೈತ್ರಿ ಜಗ್ಗಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನದಲ್ಲಿ ಚಿತ್ರದ ಆರು ಹಾಡುಗಳು ಮೂಡಿ ಬಂದಿದ್ದು, ಈಗಾಗಲೇ ಸಿದ್ ಶ್ರೀರಾಮ್ ಸುಮಧುರ ಕಂಠದಲ್ಲಿ ಮೂಡಿಬಂದ ಹಾಯಾಗಿದೆ ಎದೆಯೊಳಗೆ ಹಾಡು ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಸಂಕೇತ್ ಎಂವೈಎಸ್ ಛಾಯಾಗ್ರಹಣ , ಸೂರಜ್ ಅಂಕೊಲೇಕರ್ ಸಂಕಲನ , ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದು, ರಾಜ್ ಕಿಶೋರ್ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ .

Related posts