‘ಥಗ್ಸ್ ಆಫ್ ರಾಮಘಡ’ದ ರಿವೆಂಜ್ ಸ್ಟೋರಿಯಲ್ಲಿ ರಕ್ತದೊಕುಳಿ (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5 /5
ಚಿತ್ರ : ಥಗ್ಸ್ ಆಫ್ ರಾಮಘಡ
ನಿರ್ದೇಶಕ : ಕಾರ್ತಿಕ್ ಮಾರಲಭಾವಿ
ನಿರ್ಮಾಪಕ : ಜೈ ಕುಮಾರ್
ಸಂಗೀತ : ವಿವೇಕ್ ಚಕ್ರವರ್ತಿ
ಛಾಯಾಗ್ರಹಕ: ಮನು ದಾಸಪ್ಪ
ತಾರಾಗಣ : ಅಶ್ವಿನ್ ಹಾಸನ್, ಚಂದನ್ ರಾಜ್, ಮಹಾಲಕ್ಷ್ಮಿ ಅನ್ನಪೂರ್ಣ, ಶರ್ಮಿಳ ಚಂದ್ರಶೇಖರ್, ಸೂರ್ಯ ಕಿರಣ್, ಟೈಗರ್ ಗಂಗ, ಜಗದೀಶ್, ವಿಶಾಲ್ ಪಾಟೀಲ್ ಹಾಗೂ ಮುಂತಾದವರು…
ಏಟಿಗೆ ಎದಿರೇಟು ಎಂಬುವಂತೆ ತೊಂದರೆ ಮಾಡಿದವರಿಗೆ ಹುಡುಕಿಕೊಂಡು ಹೋಗಿ ಶಿಕ್ಷಿಸುವುದು ಮುಖ್ಯ ಎಂಬ ದೃಢ ನಿರ್ಧಾರದೊಂದಿಗೆ ಸಾಗುವ ರಿವೆಂಜ್ ಕಥಾನಕವಾಗಿ ರಕ್ತದೋಕಳಿಗೆ ಪ್ರೀತಿಯ ಚುಕ್ಕಿ ಮೂಲ ಕಾರಣವಾಗಿ ಹೊರಬಂದ ಚಿತ್ರ ಥಗ್ಸ್ ಆಫ್ ರಾಮಘಡ.
ಜೆನಿಫರ್(ಶರ್ಮಿಳ) ಎಂಬ ಪೊಲೀಸ್ ಅಧಿಕಾರಿ ಸ್ಯಾಮಿಯಲ್ (ಅಶ್ವಿನ್ ಹಾಸನ್) ನ ಗರ್ಭಿಣಿ ಪತ್ನಿ ಪತ್ನಿಯ ಕೊಲೆ. ಇದರ ಹಿಂದಿರುವ ಸಂಚಿನ ತಂಡವನ್ನು ಭೇದಿಸಲು ಮುಂದಾಗುವ ಪೊಲೀಸ್ ಇಲಾಖೆ. ಹಣದ ಬ್ಯಾಗಿನೊಂದಿಗೆ ಜೀಪ್ ನಲ್ಲಿ ನಾಯಕ ಅರವಿಂದ್ (ಚಂದನ್ ರಾಜ್) ಹಾಗೂ ಅವನ ಗ್ಯಾಂಗ್ ಎಸ್ಕೇಪ್.
ರಾಮಘಡ ಸೇರುವ ತಂಡ ಗೆಳೆಯರಲ್ಲಿ ಹೊಡೆದಾಟ ನಾಲ್ವರಲಿ ಮೂವರ ಸಾವು. ಒಬ್ಬಂಟಿ ಆಗುವ ಅರವಿಂದ ಬಟ್ಟೆ, ಹಣದ ಬ್ಯಾಗು ಕಳೆದುಕೊಂಡು ಮಾರ್ಗ ಮಧ್ಯ ಆಟೋ ವ್ಯಕ್ತಿಯೊಂದಿಗೆ ಸಹಾಯ ಪಡೆಯುತ್ತಾನೆ. ಆಟೋದಲ್ಲಿದ್ದ ನಾಯಕಿ ರೇಣುಕಾ (ಮಹಾಲಕ್ಷ್ಮಿ ಅನ್ನಪೂರ್ಣ) ಮನೆ ಸೇರುವ ಅರವಿಂದ ಅವರ ಮನೆಯಲ್ಲಿ ಒಬ್ಬನಾಗಿ ಉಳಿಯುತ್ತಾನೆ.
ರೇಣುಕಾ ಹಿನ್ನೆಲೆ ನೋಡುತ್ತಾ ಹೋದರೆ ಗಂಡನ ಕಳೆದುಕೊಂಡ ರೇಣುಕಾಳ ತಾಯಿಗೆ ಆಶ್ರಯ ನೀಡುತ್ತೇನೆಂದು ನಂಬಿಸಿ ಕರೆತಂದು ಆಕೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಾನೆ. ಇದನ್ನು ಗಮನಿಸುವ ಮಗಳು ವಿಧಿಯಿಲ್ಲದೆ ಬದುಕುವಾಗ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಮುಂದೆ ರೇಣುಕಾ ಹಾಗೂ ಅವನ ಸಹೋದರ ಸಾಕು ತಂದೆ ಮಲ್ಲಣ್ಣ ಜೊತೆ ಬದುಕಬೇಕಾಗುತ್ತದೆ.
ಇನ್ನು ಅರವಿಂದ್ ಇದೆ ಮಲ್ಲಣ್ಣನ ಶಿಷ್ಯನಾಗಿದ್ದು, ಅವನು ಹಾಕಿದ ಪ್ಲಾನ್ ಪ್ರಕಾರ ಶ್ರೀಮಂತರು, ರಾಜಕೀಯ ವ್ಯಕ್ತಿಗಳು ಕಪ್ಪು ಹಣವನ್ನು ಚೀಟಿ ವ್ಯವಹಾರದಲ್ಲಿ ಹಾಕಿರುವುದನ್ನು ದೋಚಲು ರಾಮಘಡಕ್ಕೆ ಬಂದಿರುತ್ತಾನೆ. ಆಕಸ್ಮಿಕವಾಗಿ ಅರವಿಂದನ ಗುಂಡೇಟಿಗೆ ಬಲಿಯಾಗುವ ಮಲ್ಲಣ್ಣ ರೇಣುಕಾಳ ತಂದೆ ಎಂದು ತಿಳಿಯುತ್ತದೆ.
ಈ ಎಲ್ಲ ವಿಚಾರ ತನ್ನಲ್ಲೇ ಇಟ್ಟುಕೊಂಡು ಆಕೆಯನ್ನು ಪ್ರೀತಿಸುತ್ತಾನೆ. ಅವನ ಚಿತ್ರಕಲೆ ಗಮನಿಸುವ ರೇಣುಕಾ ಅವನನ್ನು ಇಷ್ಟ ಪಡುತ್ತಾಳೆ. ಮತ್ತೊಂದೆಡೆ ಕೊಲೆಗಡುಕರನ್ನು ಹುಡುಕುತ್ತಾ ಬರುವ ಪೊಲೀಸ್ ಗೆ ಸಿಗುವ ಒಬ್ಬೊಬ್ಬರನ್ನು ಹಿಂಸಿಸುತ್ತ ನರಕ ತೋರಿಸುತಾನೆ. ತನ್ನ ಪತ್ನಿಯನ್ನು ಕೊಂದವರ ದಾರಿಯನ್ನು ಹುಡುಕುತ್ತಾ ರಾಮಘಡಕ್ಕೆ ಬರುವ ಸ್ಯಾಮಿಯಲ್ ರಾಕ್ಷಸನಂತೆ ಬೇಟೆಯಾಡಲು ಸಿದ್ದನಾಗುತ್ತಾನೆ. ರೇಣುಕಾಳನ್ನು ಮದುವೆ ಆಗುತ್ತಾನಾ…
ಬ್ಯಾಂಕಿನ ಹಣ ಲೂಟಿ ಮಾಡ್ತಾನಾ…
ಇನ್ಸ್ಪೆಕ್ಟರ್ ಕೈಗೆ ಸಿಗುತ್ತಾನಾ..
ಕ್ಲೈಮಾಕ್ಸ್ ಹೇಳೋದು ಏನು… ಈ ಎಲ್ಲಾ ವಿಚಾರ ತಿಳಿಬೇಕಂದ್ರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಒಂದು ರಫ್ ಅಂಡ್ ಟಫ್ ಕಂಟೆಂಟ್ ಅನ್ನು ಬಹಳ ಅಚ್ಚುಕಟ್ಟಾಗಿ ರಗಡ್ ಜಾಗದಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಅಲ್ಲಿನ ಸೊಗಡಿನ ತಕ್ಕಂತೆ ಭಾಷೆಯನ್ನು ಬಳಸುವ ಮೂಲಕ ನಿರ್ದೇಶಕ ಕಾರ್ತಿಕ್ ಒಂದು ಉತ್ತಮ ಪ್ರಯತ್ನ ಮಾಡಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಯ ವರ್ತನೆ ಅತಿಯಾಗಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಸಿಗಬೇಕು ಆದರೆ ಈ ಮಟ್ಟದ ನರಕ ದೃಶ್ಯ ಹೆಚ್ಚಾಯಿತು ಎನಿಸುತ್ತದೆ.
ಸಂದರ್ಭಕ್ಕೆ ತಕ್ಕಂತೆ ಹಾಡುಗಳು ಹಾಗೂ ದೃಶ್ಯಗಳು ಪೂರಕವಾಗಿ ಗಮನ ಸೆಳೆಯುತ್ತದೆ. ಕೆಲವು ಸಂಭಾಷಗಳು ಕೂಡ ಮುಜುಗರ ತರುತ್ತದೆ. ಯುವ ಪ್ರತಿಭೆ ಚಂದನ್ ರಾಜ್ ತನ್ನ ಕಣ್ಣಿನ ನೋಟ, ಮಾತಿನ ಶೈಲಿಯ ಮೂಲಕವೇ ಸೆಳೆಯುತ್ತಾರೆ. ಪೋಲಿಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಶ್ವಿನ್ ಹಾಸನ್ ಟೆರರ್ ಆಗಿ ನಟಿಸಿದ್ದಾರೆ. ನೋಡಲು ಸಾಫ್ಟ್ ವ್ಯಕ್ತಿಯಾಗಿದ್ದು , ಪಾತ್ರಕ್ಕೆ ಜೀವ ತುಂಬುವುದರಲ್ಲಿ ಗೆದ್ದಿದ್ದಾರೆ.
ನಟಿ ಮಹಾಲಕ್ಷ್ಮಿ ಕೂಡ ಪಾತ್ರವನ್ನ ಅಷ್ಟೇ ಅಚ್ಚುಕಟ್ಟಾಗಿ ಜೀವ ತುಂಬಿ ಸೊಗಡಿಗೆ ತಕ್ಕಂತೆ ಅಭಿನಯಿಸಿದ್ದಾರೆ. ಉಳಿದಂತೆ ಶರ್ಮಿಳ ಚಂದ್ರಶೇಖರ್, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಹಕಾರ ನೀಡಿದ್ದಾರೆ.
ಇನ್ನು ಮನು ದಾಸಪ್ಪ ಕ್ಯಾಮೆರಾ ಕೈಚಳಕ ಸೊಗಸಾಗಿ ಮೂಡಿ ಬಂದಿದೆ. ಸಂಗೀತ ನೀಡಿರುವ ವಿವೇಕ್ ಚಕ್ರವರ್ತಿ ರ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. ಇನ್ನು ತಾಂತ್ರಿಕ ವರ್ಗಗಳ ಕೆಲಸ ಉತ್ತಮವಾಗಿದ್ದು, ಇಂತಹ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರು ಜೈ ಕುಮಾರ್ ಹಾಗೂ ಕೀರ್ತಿ ರಾಜ್ ರವರ ಧೈರ್ಯ ಮೆಚ್ಚಲೇಬೇಕು. ಒಟ್ಟಾರೆ ಒಂದು ರಗಡ್ ಸ್ಟೋರಿಯ ಮೂಲಕ ಗಮನ ಸೆಳೆಯಲು ಬಂದಿರುವ ಚಿತ್ರವ ಚಿತ್ರವು ಮಾಸ್ ಪ್ರೇಕ್ಷಕರನ್ನು ಬೇಗ ಸೆಳೆಯುತ್ತದೆ.