Cinisuddi Fresh Cini News 

ಈ ವಾರ ’18 ಟು 25′ ಚಿತ್ರ ರಾಜ್ಯದಾದ್ಯಂತ ಬಿಡುಗಡೆ.

ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಚಿತ್ರ 18ರಿಂದ 25. ಯೂಥ್ ಬೇಸ್ ಮಾಡಿಕೊಂಡು ಈ ಚಿತ್ರವನ್ನು ನಿರೂಪಿಸಲಾಗಿದೆ. ಇದೀಗ ಈ ಚಿತ್ರ ರಾಜ್ಯದಾದ್ಯಂತ ಇದೇ 10 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕನ್ನಡ ಮತ್ತು ತೆಲುಗು ಸೇರಿ ಏಕಕಾಲಕ್ಕೆ 2 ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಈಗಿನ ಯುವ ಜನಾಂಗಕ್ಕೆ 18ರಿಂದ 25ರ ನಡುವಿನ ವಯಸಿನಲ್ಲಿ ತುಂಬಾ ಜಾಗೃತಿಯಿಂದಿರಬೇಕು ಎಂದು ಮೆಸೇಜ್ ನೀಡುತ್ತಿದ್ದಾರೆ.

ಈ ಹಿಂದೆ ತೂಫಾನ್ ಮತ್ತು ಬಳ್ಳಾರಿ ದರ್ಬಾರ್ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಸ್ಮೈಲ್ ಶ್ರೀನು ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಕೂಡಾ ಬರೆದಿದ್ದಾರೆ. ಸ್ಮೈಲ್ ಜೋಹರ್ ಟಾಕೀಸ್ ಅಡಿಯಲ್ಲಿ 18ರಿಂದ 25 ಸಿನಿಮಾ ತಯಾರಾಗಿದ್ದು,
ಈ ಚಿತ್ರದಲ್ಲಿ ಅಭಿರಾಮ್ ನಾಯಕನಾಗಿದ್ದು, ಋಷಿ ತೇಜ, ಅಖಿಲ, ವಿದ್ಯಾಶ್ರೀ, ರಾಕ್‍ಲೈನ್ ಸುಧಾಕರ್, ಫಾರೂಖ್ ಖಾನ್, ನಾಗೇಶ್ವರರಾವ್, ಉದಯ ಭಾಸ್ಕರ್, ರವಿರಾಮ್ , ಪೊಲ ಶ್ರೀನಿವಾಸಬಾಬು, ಭಾಗ್ಯಶ್ರೀ ಹಾಗೂ ಇತರರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಚರಣ್ ಅರ್ಜುನ್ ಅವರ ಸಂಗೀತವಿದೆ, ಶಿವ ಕೆ.ನಾಯ್ಡು ಅವರ ಛಾಯಾಗ್ರಹಣ, ವಿ.ನಾಗೇಂದ್ರ ಪ್ರಸಾದ್, ಸ್ಮೈಲ್ ಶ್ರೀನು ಅವರ ಸಾಹಿತ್ಯ, ವೈಲೆನ್ಸ್ ವೇಲು ಅವರ ಸಾಹಸ, ಚಿರಂಜೀವಿ ಅವರ ನೃತ್ಯ ನಿರ್ದೇಶನವೂ ಈ ಚಿತ್ರಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದು, ಬೆಳ್ಳಿ ಪರದೆ ಮೇಲೆ 18 ಟು 25 ಚಿತ್ರ ರಾರಾಜಿಸಲಿದೆ.

Related posts