Cinisuddi Fresh Cini News 

ಗೃಹ ಸಚಿವಾಲಯದ ಅಂಗಳದಲ್ಲಿ ಚಿತ್ರಮಂದಿರ ಆರಂಭಿಸುವ ನಿರ್ಧಾರ

ದೇಶದಾದ್ಯಂತ ಚಿತ್ರಪ್ರದರ್ಶನ ಆರಂಭಿಸಲು ಆಗಸ್ಟ್ ಒಂದರಿಂದ ಅನುಮತಿ ನೀಡಬಹುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಈ ಸಂದರ್ಭದಲ್ಲಿ ಕನಿಷ್ಠ ಎರಡು ಮೀಟರ್ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಯಮವನ್ನು ಪರಿಗಣಿಸಲಾಗಿದೆ. ಆದರೆ ಚಿತ್ರಮಂದಿರಗಳಲ್ಲಿ ಎರಡು ಮೀಟರ್ ಬದಲು ಎರಡು ಅಡಿಗಳ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

ಗೃಹ ಸಚಿವಾಲಯವು ಈ ಶಿಫಾರಸನ್ನು ಪರಿಶೀಲಿಸಿ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕಿದೆ. ಕರೋನಾ ವೈರಸ್‍ನಿಂದ ಕಳೆದ ನಾಲ್ಕೂವರೆ ತಿಂಗಳಿಂದ ದೇಶದ ಎಲ್ಲಾ ಚಿತ್ರಮಂದಿರಗಳು ಬಾಗಿಲು ಕ್ಲೋಸ್ ಮಾಡಿಕೊಂಡಿವೆ.

ಈಗ ಲಾಕ್‍ಡೌನ್ ಸಂಪೂರ್ಣ ತೆರವಾಗಿರುವುದರಿಂದ ಆಗಸ್ಟ್ ಒಂದರಿಂದ ದೇಶಾದ್ಯಂತ ಚಿತ್ರಮಂದಿರಗಳನ್ನು ಓಪನ್ ಮಾಡಲು ಅನುಮತಿ ನೀಡಬಹುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಶುಕ್ರವಾರ ಸಿಐಐ ಮಾಧ್ಯಮ ಸಮಿತಿಯೊಂದಿಗೆ ಚಿತ್ರೋದ್ಯಮ ಪ್ರಮುಖರು ನಡೆಸಿದ ಮಾತುಕತೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಐಬಿ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಬಾಗ್ಲ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಹ ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಕೇಂದ್ರವಾದ ಚೀನಾದಲ್ಲಿ ಈಗಾಗಲೇ ಚಿತ್ರಮಂದಿರಗಳು ಓಪನ್ ಆಗಿದ್ದು, ಮೊದಲ ದಿನದಿಂದಲೇ ಉತ್ತಮ ಕಲೆಕ್ಷನ್ ಮಾಡುತ್ತಿವೆ. ಅದೇ ರೀತಿ ದೇಶದಾದ್ಯಂತ ಚಿತ್ರಪ್ರದರ್ಶನ ಆರಂಭಿಸಲು ಆಗಸ್ಟ್ ಒಂದರಿಂದ ಅನುಮತಿ ನೀಡಬಹುದು. ಅಥವಾ ಆಗಸ್ಟ್ 31ರ ವೇಳೆಗಾದರೂ ಅವಕಾಶ ಕೊಡಬಹುದು ಎಂದು ಶಿಫಾರಸು ಮಾಡಿರುವುದಾಗಿ ಖರೆ ಅವರು ತಿಳಿಸಿದ್ದಾರೆ.

ಮೊದಲ ಸಾಲಿನಲ್ಲಿ ಒಂದು ಸೀಟ್ ಬಿಟ್ಟು ಒಂದು ಸೀಟಿನಲ್ಲಿ ಪ್ರೇಕ್ಷಕ ಕುಳಿತುಕೊಳ್ಳುವುದು ಅಲ್ಲದೆ ನಂತರದ ಸಾಲನ್ನು ಖಾಲಿ ಬಿಡುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬಹುದು. ದೇಶಾದ್ಯಂತ ಇದೇ ಕ್ರಮವನ್ನು ಅನುಸರಿಸಬಹುದು ಎಂದು ಸಚಿವಾಲಯ ಹೇಳಿದೆ.

ಸಚಿವಾಲಯ ಶಿಫಾರಸು ಮಾಡುವ ಸಂದರ್ಭದಲ್ಲಿ ಕನಿಷ್ಠ ಎರಡು ಮೀಟರ್ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಯಮವನ್ನು ಪರಿಗಣಿಸಿದೆ. ಆದರೆ ಚಿತ್ರಮಂದಿರಗಳಲ್ಲಿ ಎರಡು ಮೀಟರ್ ಬದಲು ಎರಡು ಅಡಿ ಅಂತರ ಸಾಧ್ಯವಾಗುತ್ತದೆ ಎಂದು ಹೇಳಿದೆ. ಗೃಹ ಸಚಿವಾಲಯವು ಈ ಶಿಫಾರಸನ್ನು ಪರಿಶೀಲಿಸಿ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಈ ಸಭೆಯಲ್ಲಿ ಪಾಲ್ಗೊಂಡಿದ್ದ ಚಿತ್ರಮಂದಿರಗಳ ಮಾಲೀಕರುಗಳು ಈ ಸೂತ್ರ ಸರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕಟ್ಟುಪಾಡುಗಳನ್ನಿಟ್ಟುಕೊಂಡು ಚಲನಚಿತ್ರ ಪ್ರದರ್ಶನ ನಡೆಸುವುದಾದರೆ ಚಿತ್ರಮಂದಿರದ ಸಾಮಥ್ರ್ಯದಲ್ಲಿ ಬರೀ 25ರಷ್ಟು ಸೀಟುಗಳನ್ನು ಮಾತ್ರವೇ ತುಂಬಲು ಸಾಧ್ಯ.

ಇದರಿಂದ ಚಿತ್ರಮಂದಿರಗಳನ್ನು ಕ್ಲೋಸ್ ಮಾಡಿದಾಗ ಅನುಭವಿಸುತ್ತಿರುವ ನಷ್ಟಕ್ಕಿಂತಲೂ ಹೆಚ್ಚಿನ ಪ್ರಮಾಣದ ನಷ್ಟವನ್ನನುಭವಿಸಬೇಕಾತ್ತದೆ ಎಂದು ಹೇಳಿದ್ದಾರೆ. ಚಲನಚಿತ್ರೋದ್ಯಮದ ಪ್ರಮುಖ ವಿಭಾಗಗಳ ಮುಖಂಡರು ಅಲ್ಲದೆ ಚಿತ್ರಮಂದಿರಗಳ ಮಾಲೀಕರು, ಚಿತ್ರ ಪ್ರದರ್ಶಕರು ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳ ಪ್ರಮುಖರು ಈ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು.

Share This With Your Friends

Related posts