Cinisuddi Fresh Cini News 

“ದಿ ವಿಲನ್” ನೋಡಲು ಕಾಯುತ್ತಿದ್ದೀರಾ..? ಆನ್ಲೈನ್ ಟಿಕೆಟ್ ಬುಕಿಂಗ್ ಯಾವಾಗ ಶುರುವಾಗುತ್ತೆ ಗೊತ್ತಾ..?

ಸಿನಿಮಾ ಪ್ರಿಯರಿಗೊಂದು ಸಿಹಿ ಸುದ್ದಿ ಇದೆ. ತಿಂಗಳು 18 ರಂದು ಬಿಡುಗಡೆಗೊಳ್ಳುತ್ತಿರುವ “ದಿ ವಿಲನ್” ಚಿತ್ರದ ಟಿಕೆಟ್ ನೀಡುವ ದಿನಾಂಕ ನಿಗದಿಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಳ್ಳಿಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟಿಕೆಟ್ ಅನ್ನು ಒಂದು ವಾರ ಮುಂಚಿತವಾಗಿ ಅಂದರೆ ಇದೇ ತಿಂಗಳು 11ರಂದು ನೀಡಲು ತೀರ್ಮಾನಿಸಲಾಗಿದೆ.

ಸ್ಟಾರ್ ನಿರ್ದೇಶಕ ಪ್ರೇಮ್ ಅತಿ ಹೆಚ್ಕು ಕುತೂಹಲ ಹುಟ್ಟು ಹಾಕಿರುವ ದೊಡ್ಡ ಮಟ್ಟದಲ್ಲಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಯಾಕೆಂದರೆ ಹೆಸರಾಂತ ವಿತರಕರು ಜಾಕ್ ಮಂಜು, ಎಂ.ಎನ್.ಕುಮಾರ್, ಜಯಣ್ಣ ಸೇರಿದಂತೆ ಹಲವು ವಿತರಕರು ಈ ಚಿತ್ರವನ್ನು ಬಿಡುಗಡೆ ಗೊಳಿಸಲು ಮುಂದಾಗಿದ್ದಾರೆ. “ದಿ ವಿಲ್ಲನ್” ಚಿತ್ರ ವಿದೇಶದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆಯಂತೆ. ಇದಲ್ಲದೆ ಇದೇ ಮೊಟ್ಟ ಮೊದಲ ಬಾರಿಗೆ ಒಂದೇ ಅಂಗಳದಲ್ಲಿ ಇರುವ ಸಂತೋಷ್, ನರ್ತಕಿ ಹಾಗೂ ಸ್ವಪ್ನ ಚಿತ್ರ ಮಂದಿರಗಳಲ್ಲಿ “ದಿ ವಿಲನ್” ಅಬ್ಬರಿಸಲಿದ್ದಾನಂತೆ. ಡಾ. ಸಿ. ಆರ್ ಮನೋಹರ್ ನಿರ್ಮಾಣ ಮಾಡಿರುವ ಬಹು ಕೋಟಿ ವೆಚ್ಚದ ಈ ಚಿತ್ರದ ಹಾಡುಗಳು ಹಾಗೂ ಟೀಜರ್ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಎಲ್ಲಾ ಹಾಡುಗಳು ಈಗ ವೈರಲ್ ಆಗಿದೆ.

ಇದೊಂದು ರೀತಿ ತಾಯಿ ಮಗವಿಗೆ ಜನ್ಮ ಕೊಟ್ಟಂತೆ ಎಂಬ ಅಭಿಪ್ರಾಯವನ್ನು ಅರ್ಜುನ್ ಜನ್ಯ ಪತ್ರಿಕಾ ಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ಗೆ ಇದೇ ಪ್ರಥಮ ಬಾರಿಗೆ ಬಾಲಿವುಡ್ ಬೆಡಗಿ ಎಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಬಾಲಿವುಡ ಡಿಸ್ಕೋ ಡ್ಯಾನ್ಸರ್ ಮಿಥುನ್ ಚಕ್ರವರ್ತಿ, ಮುಕುಲ್ ದೇವ್, ಮೇಖ ಶ್ರೀಕಾಂತ್, ಶರಣ್ಯ ಪೊವಣ್ಣನ್, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ತಾರಾ ಬಳಗವೇ ಅಭಿನಯಿಸಿದೆ.

ಗಿರೀಶ್. ಆರ್. ಗೌಡ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ, ರವಿ ವರ್ಮಾ, ಮಾಸ್ ಮಾದ, ನುಂಗ್ ದಿ ಒನೆ (ಬ್ಯಾಂಕಾಕ್) ಸಾಹಸ, ವಿ ನಾಗೇಶ್, ಮುರುಳಿ ನೃತ್ಯ, ರವಿ ಸಂತೆಹಕ್ಲು ಕಲಾ ನಿರ್ದೇಶನ, ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ, ಸೇತು ಸೌಂಡ್ ಎಫ್ಫೆಕ್ಟ್ಸ್, ರವಿ ಕುಮಾರ್, ಮಂಜುನಾಥ್ ಬಿ. ಎಸ್, ಶಂಕರ್, ರಾಜ, ಅಪ್ಪು ಅಭಿಷೇಕ್, ಬಾಬು ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆ ಬಹಳಷ್ಟು ಕುತೂಹಲವನ್ನು ಹುಟ್ಟುಹಾಕಿರುವ “ದಿ ವಿಲ್ಲನ್” ಚಿತ್ರ 18ರಂದು ಅದ್ದೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಈ ವಿಚಾರವಾಗಿ ಚಿತ್ರತಂಡ ಪತ್ರಿಕಾ ಗೋಷ್ಠಿಯನ್ನು ಆಯೋಜನೆ ಮಾಡಿ ಚಿತ್ರದ ಒಂದಷ್ಟು ಮಾಹಿತಿಯನ್ನು ತೆರೆದಿಟ್ಟಿದೆ. “ದಿ ವಿಲನ್” ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಕೌಂಟ್ ಡೌನ್ ಶುರುವಾಗಿದೆ.

Related posts