Cinisuddi Fresh Cini News 

“ದಿ ಪೈಂಟರ್” ಕನ್ನಡ ಮತ್ತು ಹಿಂದಿ ಚಿತ್ರಕ್ಕೆ ಶ್ರೀ ಮುರಳಿ ಸಾಥ್

ಲಾಕ್ ಡೌನ್ ಸಮಯದಲ್ಲಿ ಶೂಟ್ ಮಾಡಿ ತಯಾರಾದ ಥ್ರಿಲ್ಲರ್ ಚಿತ್ರ ದಿ ಪೈಂಟರ್ ಗೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್ ನೀಡುತ್ತಿದ್ದಾರೆ . ಇದೆ ತಿಂಗಳು ೧೪ ಆಗಸ್ಟ್ ರಂದು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ALL ಟೈಮ್ ಥಿಯೇಟರ್) ಮೂಲಕ ದಿ ಪೈಂಟರ್ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು ಅದರ ಟ್ರೈಲರ್ ಅನ್ನು ಶ್ರೀಮುರಳಿ ಅವರು ಅವರ ಸೋಶಿಯಲ್ ಮೀಡಿಯಾ ಚಾನೆಲ್ ಮೂಲಕ ದಿ ಪೈಂಟರ್ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ .

ಯಾವಾಗಲು ಹೊಸಬರ ಚಿತ್ರ ಹಾಗು ಕಂಟೆಂಟ್ ಓರಿಎಂಟೆಡ್ ಚಿತ್ರಗಳಿಗೆ ಶ್ರೀಮುರಳಿಯವರು ತಮ್ಮ ಸಹಾಯಹಸ್ತ ಚಾಚಿ ಹುರಿದುಹುಂಬಿಸುತ್ತಾರೆ. ವೆಂಕಟ್ ಭಾರದ್ವಾಜ್ ನಟಿಸಿ ನಿರ್ದೇಶಿಸಿರುವ ಚಿತ್ರಕ್ಕೆ ಶ್ರೀ ಮುರಳಿ ಅವರ ಸಹಾಯ ತಂಡಕ್ಕೆ ಆನೆಬಲ ಸಿಕ್ಕಿದಂತಾಗಿದೆ. ಟ್ರೈಲರ್ ಇದೆ ಶುಕ್ರವಾರ ೭/೦೮/೨೦೨೦ ರಂದು ಲಹರಿ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಯಾಗುತ್ತಿದ್ದೆ.

ದಿ ಪೈಂಟರ್ ಚಿತ್ರ suspense ತ್ರಿಲ್ಲೆರ್ ಆಗಿದ್ದು ShreyasET ನಲ್ಲಿ ಬಿಡುಗಡೆಯಾಗುತ್ತಿದ್ದು , shreyasET App ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿ ೫೦ ರು ಕೊಟ್ಟು ನೋಡಬಹುದು.

ಬರುವ ಕಲೆಕ್ಷನ್ ನಲ್ಲಿ ಶೇಕಡಾ ೨೦% ರಷ್ಟು ಕನ್ನಡ ಚಿತ್ರ ಕಾರ್ಮಿಕರಿಗೆ ಕೊಡುವುದಾಗಿ ದಿ ಪೈಂಟರ್ ತಂಡ ಮೊದಲೇ ಘೋಷಿಸಿದೆ.  ನಿರ್ಮಾಣ ಕೆ ಕೆ ಕಂಬೈನ್ಸ್ ಹಾಗುಾ ಅಮೃತ ಫಿಲಂ ಸೆಂಟರ್ , ಸಂಗೀತ ಲವ್ ಪ್ರಾಣ್ ಮೆಹ್ತಾ , ಸಂಕಲನ ಚಂದನ್ ಮಾಡಿದ್ದಾರೆ.

Share This With Your Friends

Related posts