Cinisuddi Fresh Cini News 

ಗೋಪಾಲನ್ ಸಿನಿಮಾಸ್ ನಲ್ಲಿ “ಟಗರು” ರೀರಿಲೀಸ್ ಸೆಲೆಬ್ರೆಷನ್

ಕರೋನ ಅನ್ನೋ ಕಗ್ಗತ್ತಲಿನಿಂದ ಹೊರ ಬಂದು ಹೊಸ ಚೈತನ್ಯದ ಹೊಸ್ತಿಲಿಗೆ ಕನ್ನಡ ಚಿತ್ರರಂಗ ಕಾಲಿಡ್ತಿದೆ. ಸುಮಾರು ಆರೇಳು ತಿಂಗಳಿನಿಂದ ಚಿತ್ರಪ್ರದರ್ಶನವಿಲ್ಲದೆ ಬಣಗುಡುತ್ತಿದ್ದ ಚಿತ್ರಮಂದಿರಗಳು ನಿಧಾನವಾಗಿ ತುಂಬುತ್ತಿವೆ.

ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಚುರುಕುಗೊಂಡಿರೋದು ಸಂತಸದ ವಿಷ್ಯ. ರೀ ರಿಲೀಸ್ ಆಗಿರೋ ಚಿತ್ರಗಳನ್ನ ನೋಡಲು ಪ್ರೇಕ್ಷಕರು ಥಿಯೇಟರ್ ನತ್ತ ಬರ್ತಿರೋದು ಉದ್ಯಮಕ್ಕೆ ಹೊಸ ಭರವಸೆ ಮೂಡಿಸಿದೆ. ಈ ನಡುವೆ ನಮ್ಮ ಸಂಸ್ಥೆಯ ಹೆಮ್ಮೆಯ ಸಿನಿಮಾ ಕನ್ನಡ ಸಿನಿಪ್ರಿಯರು ಆರಾಧಿಸಿ ನೀವೆಲ್ಲಾ ಪ್ರೋತ್ಸಾಹಿಸಿದ ಮೆಗಾ ಬ್ಲಾಕ್ ಬಸ್ಟರ್ ಆಗಿ ಗೆಲ್ಲಿಸಿದ ಟಗರು ಸಿನಿಮಾ ಇದೇ ಶುಕ್ರವಾರ ಅಂದ್ರೆ ಅಕ್ಟೋಬರ್ 23ನೇ ತಾರೀಖು ಇವತ್ತು ಗೋಪಾಲನ್ ಸಿನಿಮಾಸ್ ಸಿರಿಸಿ ಸರ್ಕಲ್ ಹಾಗೂ ಗೋಪಾಲನ್ ಸಿನಿಮಾ ಅರ್ಕೇಡ್ ಮಾಸ್ ಗಳಲ್ಲಿ ರೀ ರಿಲೀಸ್ ಆಗಿದೆ.

ಅದ್ರಂತೆ, ಮೈಸೂರು ರಸ್ತೆಯ ಸಿರಿಸಿ ಸರ್ಕಲ್ ನಲ್ಲಿರೋ ಗೋಪಾಲ್ ಸಿನಿಮಾಸ್ ನಲ್ಲಿ ಭಾನುವಾರ ಅಂದ್ರೆ 25ನೇ ತಾರೀಖು ಮಧ್ಯಾಹ್ನ 1.15ರ ಪ್ರದರ್ಶನವನ್ನ ಪ್ರೇಕ್ಷಕರೊಂದಿಗೆ ವೀಕ್ಷಿಸಲು ನಮ್ಮ ಸಲಗ ಚಿತ್ರದ ನಿರ್ದೇಶಕ ನಾಯಕ ದುನಿಯಾ ವಿಜಯ್, ಟಗರು ನಿರ್ದೇಶಕರಾದ ಸೂರಿ, ಡಾಲಿಧನಂಜಯ, ವಸಿಷ್ಠ ಸಿಂಹ, ಮಾನ್ವಿತಾ ಕಾಮತ್ ಸೇರಿದಂತೆ, ಇಡೀ ನಮ್ಮ ಚಿತ್ರತಂಡ ಭಾಗಿಯಾಗ್ತಿದೆ.

ಚಿತ್ರ ಪ್ರದರ್ಶನದ ನಂತ್ರ ಗೋಪಾಲನ್ ಸಿನಿಮಾಸ್ ನಲ್ಲಿ ಮಧ್ಯಾಹ್ನ 3ಗಂಟೆಗೆ ಟಗರು ರೀ ರಿಲೀಸ್ ಸಲೆಬ್ರೇಷನ್ಸ್ ಏರ್ಪಡಿಸಿದ್ದು, ತಾವುಗಳು ಈ ಸಂಭ್ರಮದಲ್ಲಿ ಭಾಗಿಯಾಗಿ, ಕರೋನಾ ನಂತ್ರ ಪ್ರೇಕ್ಷಕರು ತೋರಿಸ್ತಿರೋ ಸಿನಿಮಾ ಪ್ರೇಮಕ್ಕೆ ಪುಷ್ಠಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿನಿ ಎಂದಿದ್ದಾರೆ ನಿರ್ಮಾಪಕ
ಕೆ.ಪಿ ಶ್ರೀಕಾಂತ್.

Related posts