ತಮಿಳಿನ ಖ್ಯಾತ ಹ್ಯಾಸ ನಟ ವಿವೇಕ್ ವಿಧಿವಶ

ಹಲವು ವರ್ಷಗಳ ಕಾಲ ತನ್ನದೇ ಶೈಲಿಯ ಹಾಸ್ಯ ನಟನೆಯಿಂದ ವೀಕ್ಷಕರನ್ನು ನಕ್ಕು ನಲಿಸುತ್ತಿದ್ದ ತಮಿಳಿನ ಖ್ಯಾತ ಹ್ಯಾಸ ನಟ ವಿವೇಕ್(59) ವಿಧಿವಶರಾಗಿದ್ದಾರೆ. ಇಂದು(ಶನಿವಾರ) ಬೆಳಗಿನ ಜಾವ ಸುಮಾರು 4.35ಕ್ಕೆ ವಿವೇಕ್‌ ಅವರು ಕೊನೆಯುಸಿರೆಳೆದಿದ್ದಾರೆ. ವಿವೇಕ್ ಅವರಿಗೆ ಗುರುವಾರ ಎದೆ ನೋವು ಉಂಟಾಗಿತ್ತು. ಈ ಹಿನ್ನೆಲೆ ಅವರನ್ನು ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷೆ ನಡೆಸಿದಾಗ ಹೃದಯ ಸ್ತಂಭನ ಉಂಟಾಗಿರುವುದು ತಿಳಿದು ಬಂದಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ಕೂಡಲೇ ವೈದ್ಯರುಗಳ ತಂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದರು. ತೀವ್ರ ನಿಗಾ… Read More