‘ಟಕ್ಕರ್’ ಚಿತ್ರದ ಡ್ಯೂಯೆಟ್ ಸಾಂಗ್ ರಿಲೀಸ್ ಮಾಡಿದರು ಐಪಿಎಸ್ ಅಧಿಕಾರಿ ಡಿ.ರೂಪಾ

ಛಾಲೆಜಿಂಗ್‍ಸ್ಟಾರ್ ದರ್ಶನ್‍ರ ಕುಟುಂಬದ ಹುಡುಗ ಮನೋಜ್‍ಕುಮಾರ್ ನಾಯಕನಾಗಿ ನಟಿಸಿರುವ ಟಕ್ಕರ್ ಚಿತ್ರದ ವಿಡಿಯೋ ಸಾಂಗ್’ಅನ್ನು ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಬಿಡುಗಡೆಗೊಳಿಸಿದ್ದಾರೆ. ಇವತ್ತಿನ ಮೊಬೈಲ್ ಯುಗದಲ್ಲಿ ಮಹಿಳೆಯರು ಹೇಗೆಲ್ಲಾ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ? ಎಂಬ ವಿಚಾರವನ್ನಿಟ್ಟಿಕೊಂಡು ಕಮರ್ಷಿಯಲ್ಲಾಗಿ ರೂಪಿಸಿರುವ ಸಿನಿಮಾ ಟಕ್ಕರ್. ಹೀಗಾಗಿ ಮಹಿಳಾ ಪೊಲೀಸ್ ಅಧಿಕಾರಿ ರೂಪಾ ಅವರಿಂದ ವಿಡಿಯೋ ಸಾಂಗನ್ನು ರಿಲೀಸ್ ಮಾಡಿಸಲಾಯಿತು. ರೈಲ್ವೇಸ್ ಪೊಲೀಸ್ ಐ.ಜಿಯಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ರೂಪಾ ಅವರು ಈ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿ ಅಪಾರವಾಗಿ ಮೆಚ್ಚಿಕೊಂಡರು. ಟಕ್ಕರ್ ಚಿತ್ರದ ಟ್ರೇಲರನ್ನು ನೋಡಿದ ರೂಪಾ ಅವರು… Read More