“RRR”ನ ‘ಜನನಿ’ ಹಾಡು ಬಿಡುಗಡೆಗೆ ಬಂದ ರಾಜಮೌಳಿ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದೇಕೆ..?

ಇಡೀ ಭಾರತೀಯ ಚಿತ್ರರಂಗವೇ ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರ RRR. ಈಗಾಗಲೇ ಜನಸಾಮಾನ್ಯರ ಮನಸ್ಸಿನಲ್ಲಿ ಭದ್ರ ನೆಲೆಯನ್ನು ಗಿಟ್ಟಿಸಿಕೊಂಡರುವoತಹ ಬಾಹುಬಲಿ ಸೃಷ್ಟಿಕರ್ತ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಬೆಂಗಳೂರಿಗೆ ಆಗಮಿಸಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ಆರ್ ಆರ್ ಆರ್” ಚಿತ್ರದ ಬಹು ಮುಖ್ಯವಾದ ಜನನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ನಗರದ ಮಾಲ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನನಿ ಹಾಡನ್ನು ಬಿಡುಗಡೆ ಮಾಡಲಾಯಿತು. ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರನ್ನು ಕೆವಿಎನ್ ಸಂಸ್ಥೆಯ ಮುಖ್ಯಸ್ಥರಾದ ನಿಶಾ ವೆಂಕಟ್ ಕೋನoಕಿ ಹಾಗೂ ವೆಂಕಟ್ ನಾರಾಯಣ್ ರವರು ಪುಷ್ಪಗುಚ್ಛ ನೀಡುವ… Read More