‘ರಂಗಸಮುದ್ರ’ ಫಸ್ಟ್ ಲುಕ್ ಅನಾವರಣಗೊಳಿಸಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು, ಇಂದು (ಜ.18)ಸಂಜೆ 06.05ಕ್ಕೆ ಹೊಯ್ಸಳ ಕ್ರಿಯೇಷನ್ಸ್ ರವರ ನೂತನ ಚಿತ್ರ ‘ರಂಗಸಮುದ್ರ’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಚಿತ್ರದ ನಿರ್ಮಾಪಕ ಹೊಯ್ಸಳ, ಕಾರ್ಯಕಾರಿ ನಿರ್ವಾಹಕ ನಿತಿನ್ ಪಟೇಲ್ , ನಿರ್ದೇಶಕ ರಾಜಕುಮಾರ್ ಅಸ್ಕಿ, ಸಂಕಲನಕಾರ ಉದಯ್ ಜಗಳೂರು ಮತ್ತು ಚಿತ್ರಕ್ಕೆ ಸಾಹಿತ್ಯ ರಚಿಸಿರುವ ವಾಗೀಶ್ ಚನ್ನಗಿರಿ ಈ ಸಂದರ್ಭದಲ್ಲಿ ಹಾಜರಿದ್ದರು. ರೆಟ್ರೋ ಕಥಾನಕವುಳ್ಳ ಚಿತ್ರದ ವಿವರಗಳು ಬಹಿರಂಗವಾಗಿಲ್ಲ, ಆದರೆ ಬಿಡುಗಡೆಯಾದ ಪೋಸ್ಟರ್ ನಲ್ಲಿ ಕಹಳೆಯನ್ನು ಎತ್ತಿ ಹಿಡಿದಿರುವ ಚಿತ್ರ ಗಮನ ಸೆಳೆಯುತ್ತಿದೆ. ಪೋಸ್ಟರ್ ಫಸ್ಟ್ ಲುಕ್ ಬಿಡುಗಡೆ… Read More